ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಂದು ಜಗತ್ತು ನಿಂತಿರುವುದೇ ಕಾರ್ಮಿಕರೆಂಬ ಬೃಹತ್ ಶಕ್ತಿಯ ಮೇಲೆ. ದೇಶದ ಭವಿಷ್ಯ ನಿಂತಿರುವುದೇ ಆ ದೇಶದ ದುಡಿಯುವ ಕೈಗಳ ಮೇಲೆ. ಯಾವ ದೇಶ ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ನೀಡುತ್ತದೆಯೋ ಆ ದೇಶದ ಆರ್ಥಿಕತೆ ಸದೃಢವಾಗಿರುತ್ತದೆ. ಕಾರ್ಮಿಕರೇ ಆ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ಕನ್ನಡಪ್ರಭ ಸುವರ್ಣ ನ್ಯೂಸ್ ಎಮಿನೆಂಟ್ ಆವಾರ್ಡ್ ಪುರಸ್ಕೃತ ಎಂಜಿನಿಯರ್ ಸುನೀಲ ಕಡಪಟ್ಟಿ ಹೇಳಿದರು.ಸ್ಥಳೀಯ ಗಣೇಶ ನಗರದ ಹತ್ತಿರದ ಕಡಪಟ್ಟಿ ಇನ್ಫ್ರಾ ಪ್ರೈವೇಟ್ ಲಿ. ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಡಪಟ್ಟಿ ಗ್ರೂಪ್ ಸದಸ್ಯರಾದ ಎಂಜಿನಿಯರ್ ಜೇಟ್ಟೆಪ್ಪ ಜಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಮೊದಲ ಕಾರ್ಮಿಕರ ದಿನವನ್ನು 1923 ಮೇ 1ರಂದು ಮದ್ರಾಸ್‌ನಲ್ಲಿ ಆಚರಿಸಲಾಯಿತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ ಎಂದರು.ಕಡಪಟ್ಟಿ ಇನ್ಫ್ರಾ ಪ್ರೈವೇಟ್ ಲಿ. ಡೈರೆಕ್ಟರ್ ಅರ್ಚನಾ ಕಡಪಟ್ಟಿ ಮಾತನಾಡಿ, ಕಠೋರ ಕಾರ್ಮಿಕರ ನಿಯಮ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಮತ್ತು ಭಯಾನಕ ಕೆಲಸದ ವೇಳೆಯ ವಿರುದ್ಧ ಅಮೆರಿಕ ಕಾರ್ಮಿಕರು ಪ್ರತಿಭಟನೆ ಆರಂಭಿಸಿ ಯಶಸ್ವಿಯಾದರು. ಅಂದು ಕಾರ್ಮಿಕರ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥವಾಗಿ ಮೇ 1ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಕಡಪಟ್ಟಿ ಗ್ರೂಪ್ ನಿರ್ದೇಶಕ ನಕಾತಿ ಮಾತನಾಡಿದರು.ಸಂಸ್ಥೆಯಲ್ಲಿ ಕಳೆದ 20-25 ವರ್ಷದಿಂದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ತಮ್ಮ ಮೆಚ್ಚಿನ ಕಾರ್ಮಿಕರನ್ನು ಕಡಪಟ್ಟಿ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಾಷಾ ನದಾಫ್, ಮಹಾಂತೇಶ ಬಿರಾದಾರ, ಕಿರಣ ಗಾಡಿ ವಡ್ಡರ, ಮಲ್ಲಿಕಾರ್ಜುನ ನದಾಫ್, ಬಸವರಾಜ ಲಕ್ಕೋಜಿ, ಪ್ರಕಾಶ ಉಳ್ಳಾಗಡ್ಡಿ, ಗುರು ಚಿಂದಿ, ಗುರು ಕಚ್ಚಾಪುರ, ಫೀರು ಪಾತ್ರೋಟ, ಅಭಿಷೇಕ ಮುರುಗುಂಡಿ, ಸಾಗರ ಜಮಖಂಡಿ, ಪ್ರಭು ಶಿವಣಗಿ, ಪ್ರಶಾಂತ ರೂಗಿ, ಚೇತನ ಬಾಗೋಜಿ, ಪ್ರವೀಜ ಯಕ್ಷಂಬಿ, ಗುರುನಾಥ ಗುರುಸಿದ್ದನ್ನವರ, ಸಂದೇಶ ತುಪ್ಪದ, ರಾಖೇಶ ಅಗಸಿಮನಿ, ಸಿದ್ರಾಮೇಶ ಹನಗಂಡಿ, ಚೇತನ ಹಿರೇಮಠ, ಹನುಮಂತ ಪೂಜಾರಿ, ಪ್ರತೀಕ್ಷಾ ಪಾಟೀಲ, ಗೀತಾ ಬಂಡಿವಡ್ಡರ, ಭೂವನಾ ಮುರಗೋಡ, ಲಕ್ಷ್ಮೀ ಸತ್ಯಭಾಂವಿ, ಅಮೃತಾ ಬಾಣಕಾರ, ಪೂಜಾ ನೇಸೂರ, ಬಸವರಾಜ ನೇಸೂರ, ವಿನಾಯಕ ಗೌಂಡಿ ಸೇರಿದಂತೆ ಹಲವರು ಇದ್ದರು. ನೂರಾರು ಎಂಜಿನಿಯರ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚೇತನ ನಿರೂಪಿಸಿ ವಂದಿಸಿದರು.