ಸಾರಾಂಶ
ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅಪ್ಪುರಾಜ್ ಇವೆಂಟ್ಸ್ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್‌ದ ಅಧ್ಯಕ್ಷ ಅಪ್ಪುರಾಜ ಭದ್ರಕಾಳಮ್ಮನಮಠ ಹೇಳಿದರು.
ಗದಗ: ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅಪ್ಪುರಾಜ್ ಇವೆಂಟ್ಸ್ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್‌ದ ಅಧ್ಯಕ್ಷ ಅಪ್ಪುರಾಜ ಭದ್ರಕಾಳಮ್ಮನಮಠ ಹೇಳಿದರು.
ನಗರದ ಕಾರ್ಮಿಕ ಕಲ್ಯಾಣ ಸಂಸ್ಥೆಯಲ್ಲಿ ಜಿಲ್ಲಾ ಸಮಸ್ತ ಕಟ್ಟಡ ಕಾರ್ಮಿಕರ ಬಳಗದಿಂದ ನಡೆದ ಸ್ನಾತಕೋತ್ತರ ಎಲ್.ಎಲ್.ಎಂ. ಪದವಿ ಪಡೆದ ಕಾರ್ಮಿಕರ ಮಕ್ಕಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರು ಕಷ್ಟಜೀವಿಗಳಾಗಿದ್ದು, ದುಡಿಯುವುದು ಒಂದೇ ಅವರಿಗಿರುವ ಗುರಿ. ಅದರೊಟ್ಟಿಗೆ ಮಕ್ಕಳ ಭವ್ಯ ಭವಿಷ್ಯ ರೂಪಿಸಲು ಅವರಿಗೆ ಉನ್ನತ ಶಿಕ್ಷಣ, ಉತ್ತಮ ಸಂಸ್ಕಾರ, ಸಂಸ್ಕೃತಿ ರೂಢಿಸಬೇಕು ಎಂದರು.ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಉಪಾಧ್ಯಕ್ಷ ಬಸವರಾಜ ಜಿನಗಾ, ಮುಳಗುಂದದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮೌಲಾಸಾಬ ಸದರಬಾವಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಇರ್ಫಾನ್ ಡಂಬಳ ಅವರು, ಕಾರ್ಮಿಕರ ಬದುಕು ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಮಾತನಾಡಿದರು.
ನ್ಯಾ. ಎಸ್.ಕೆ. ನದಾಫ ಅವರು ಕಾರ್ಮಿಕರಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಿದರು.ಈ ವೇಳೆ ನ್ಯಾ. ನಾಜಿಮಾ ಎನ್. ಮುಲ್ಲಾ ಅವರನ್ನು ಸಂಘಟನೆಯ ಪರವಾಗಿ ಗೌರವಿಸಲಾಯಿತು.
ಕಾರ್ಮಿಕ ಕಲ್ಯಾಣ ಸಂಸ್ಥೆಯ ಗೌರವ ಅಧ್ಯಕ್ಷ ಝಡ್.ಡಿ. ಬೇಲೇರಿ, ಭೀಮಸಿ ಪೂಜಾರ, ಜಂದಿಸಾಬ ಬಳ್ಳಾರಿ, ಶಂಕರಗೌಡ ಭರಮಗೌಡ್ರ, ಮಹಮ್ಮದಲಿ ಕಾತರಕಿ, ಮಹ್ಮದಇಸೂಫ ಬೇಪಾರಿ, ಶಿವಶಂಕರಗೌಡ ಕರಿಸೋಮನಗೌಡ್ರ, ಸುನೀಲ ಚಳಗೇರಿ, ಚನ್ನವೀರಗೌಡ ಪಾಟೀಲ, ಎಂ.ಎಸ್. ಹಳ್ಳಿಕೇರಿ, ಮುನೀರ್‌ಅಹ್ಮದ್ ಸವಣೂರ, ವಿಜಯಲಕ್ಷ್ಮೀ ಕುರ್ತಕೋಟಿ, ರತ್ನಾ ಕುರಗೋಡ, ಪಾಲಾಕ್ಷವ್ವ ವಾಲ್ಮೀಕಿ, ಶೌಕತ್ ಯರಂಡಿವಾಲೆ, ಅಲ್ಲಾಭಕ್ಷ ದೊಡ್ಡಮನಿ, ರಮೇಶ ವಾಲ್ಮೀಕಿ, ಮಲ್ಲು ವಾಲ್ಮೀಕಿ ಇದ್ದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ನಾಶೀರ ಚಿಕೇನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಹಳ್ಳಿಕೇರಿ ವಂದಿಸಿದರು.