ಸಾರಾಂಶ
ತರೀಕೆರೆಯಲ್ಲಿ ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘ ಸ್ಥಾಪನೆ
ಕನ್ನಡಪ್ರಭ ವಾರ್ತೆ, ತರೀಕೆರೆಕಾರ್ಮಿಕರು ಹೆಚ್ಚು ಹಣ ಉಳಿತಾಯ ಮಾಡಬೇಕು ಎಂದು ಪಟ್ಟಣದ ಹಿರಿಯ ಗುತ್ತಿಗೆದಾರ ಟಿ.ವಿ. ರವಿಕುಮಾರ್ ಹೇಳಿದ್ದಾರೆ.
ಬುಧವಾರ ಪಟ್ಟಣದಲ್ಲಿ ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಿಂದ ನೂತನವಾಗಿ ಸ್ಥಾಪನೆಗೊಂಡ ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಮಿಕರು ಒಳ್ಳೆಯ ಆಹಾರ ಸೇವಿಸಬೇಕು. ದುಡಿದ ಹಣವನ್ನು ಮನೆಗೆ ತಲುಪಿಸಬೇಕು ಎಂದು ಹೇಳಿದರು.ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಹಿರಿಯ ಗುತ್ತಿಗೆದಾರ ಕೆ.ನಾಗರಾಜ್ ಮಾತನಾಡಿ ಇಡೀ ವರ್ಷ ಕಾರ್ಮಿಕರು ಕಷ್ಟಪಟ್ಟು ಕೆಲಸ ನಿರ್ವಹಿಸುತ್ತಾರೆ. ಅವರು ಒಂದು ದಿನ ವಿಶ್ರಾಂತಿ ಪಡೆಯುವ ಸಲುವಾಗಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯಬೇಕು. ಯೋಜನೆಗಳು ನಮ್ಮ ಮಕ್ಕಳಿಗೂ ತಲುಪಬೇಕು. ಕಾರ್ಮಿಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದ ಅವರು ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘ ಸ್ಥಾಪನೆಯಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.ವಾಸ್ತು ಶಿಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕರ ದಿನಾಚರಣೆ ಶುಭಾಷಯ ತಿಳಿಸಿದರು.ಸಂಘದ ಗೌರವಾಧ್ಯಕ್ಷ ಟಿ.ರಾಮಚಂದ್ರ, ಉಪಾಧ್ಯಕ್ಷ ಭೋಜರಾಜ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಮಂಜನಾಥ್, ಕಾರ್ಯದರ್ಶಿ ಮಂಜಪ್ಪ, ಸಹ ಕಾರ್ಯದರ್ಶಿ ಪ್ರದೀಪ್, ಖಚಾಂಚಿ ಟಿ.ಎಂ.ರವಿಕುಮಾರ್, ಸಂಘದ ಪದಾದಿಕಾರಿಗಳು, ಸದಸ್ಯರು, ಟಿ.ಎಸ್.ಲಕ್ಷ್ಮೀಪತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಗುತ್ತಿಗೆದಾರ ಕೆ.ನಾಗರಾಜ್ ಸ್ವಾಗತಿಸಿ ನಿರೂಪಿಸಿದರು.
1ಕೆಟಿಆರ್.ಕೆ.4ಃತರೀಕೆರೆಯಲ್ಲಿ ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕ್ರಮದಲ್ಲಿ ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಮಾತನಾಡಿದರು. ಹಿರಿಯ ಗುತ್ತಿಗೆದಾರ ರವಿಕುಮಾರ್, ಸಂಘದ ಗೌರವಾಧ್ಯಕ್ಷ ಟಿ. ರಾಮಚಂದ್ರಪ್ಪ, ಸಂಘದ ಉಪಾಧ್ಯಕ್ಷ ಬೋಜರಾಜ್ , ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಲಕ್ಕವಳ್ಳಿ ಗ್ರಾಪಂ ಮಾಜಿ ಸದಸ್ಯರು ನಾಗರಾಜ್ ಮತ್ತಿತರರು ಇದ್ದರು.