ಸಾರಾಂಶ
ಶಿಬಿರದಲ್ಲಿ ೯೫ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯದ ತಪಾಸಣೆ ಮಾಡಲಾಯಿತು. ತಪಾಸಣೆ ನಂತರ ಎಲ್ಲ ಕಾರ್ಮಿಕರಿಗೆ ದ್ವಿದಳ ಧಾನ್ಯದ ಕಿಟ್ಟನ್ನು ವಿತರಣೆ ಮಾಡಲಾಯಿತು.
ಶಿಗ್ಗಾಂವಿ: ಪ್ರತಿಯೊಬ್ಬರೂ ಆರೋಗ್ಯದ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್. ಓಲೇಕಾರ ತಿಳಿಸಿದರು.ತಾಲೂಕಿನ ಕ್ಯಾಲಕೊಂಡ ಗ್ರಾಮದ ಆಯುಷ್ಮಾನ ಅರೋಗ್ಯ ಮಂದಿರದಲ್ಲಿ ಕಟ್ಟಡ ಕಾರ್ಮಿಕ ಸಂಘ ಮತ್ತು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಕೆಲಸದ ಜಂಜಾಟದಲ್ಲಿ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಇದರಿಂದ ಅರೋಗ್ಯ ಹಾಳಾಗುತ್ತಿದೆ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಚಂದ್ರು ಕೊತಂಬರಿ ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಶಿಬಿರವನ್ನು ಹಮ್ಮಿಕೊಂಡಿದ್ದು, ಎಲ್ಲ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಿಬಿರದಲ್ಲಿ ೯೫ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯದ ತಪಾಸಣೆ ಮಾಡಲಾಯಿತು. ತಪಾಸಣೆ ನಂತರ ಎಲ್ಲಾ ಕಾರ್ಮಿಕರಿಗೆ ದ್ವಿದಳ ಧಾನ್ಯದ ಕಿಟ್ಟನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಗಂಗಾಧರಯ್ಯ ಚರಂತಿಮಠ, ಹಾವೇರಿ ಜಿಲ್ಲಾ ಉಪಾಧ್ಯಕ್ಷ ಡಿ.ಅರ್. ಉಳ್ಳಟ್ಟಿ, ಕಾರ್ಮಿಕ ಆರೋಗ್ಯ ಇಲಾಖೆಯ ಕುಶಾಲ್ ಜೈನ್, ಸುಮಿತ್ ಮರೆಣ್ಣನವರ, ಸಮುದಾಯ ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುಗೌಡ ಕೊಣ್ಣೂರ, ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿ ವಿದ್ಯಾಶ್ರೀ ರಾ. ಕಟ್ಟಿ, ಗ್ರಾಮದ ಜಾಫರ್ ಬಾಗವಾನ ಹಾಗೂ ಆಯುಷ್ಮಾನ ಆರೋಗ್ಯ ಮಂದಿರದ ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಓಲೇಕಾರ, ಸಿಬ್ಬಂದಿ ಇದ್ದರು.ಫಾಸ್ಟ್ ಫುಡ್ ಸ್ಟಾಲ್ ತರಬೇತಿಗೆ ಅರ್ಜಿ ಆಹ್ವಾನಹಾವೇರಿ: ಸಮೀಪದ ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿಯಲ್ಲಿ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಏಪ್ರಿಲ್‌ನಲ್ಲಿ 10 ದಿನಗಳ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ ಆಯೋಜಿಸಲಾಗಿದೆ.
ಪಾನಿಪುರಿ, ಸೇವಪುರಿ, ದಹಿ ಪೂರಿ, ಏಗ್‌ರೈಸ್, ನೂಡಲ್ಸ್, ಗೋಬಿಮಂಚೂರಿ, ಪಾವ್‌ಬಾಜಿ, ವಡಾಪಾವ್ ಇತ್ಯಾದಿ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು 18ರಿಂದ 45 ವರ್ಷದೊಳಗಿರಬೇಕು ಹಾಗೂ ಜಿಲ್ಲೆಯ ಬಿಪಿಎಲ್ ಕಾರ್ಡ್ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿ, ಡಿಸಿ ಆಫೀಸ್ ಕಟ್ಟಡದ ಹಿಂಭಾಗ, ದೇವಗಿರಿ, ಹಾವೇರಿ ಮೊ. 8660219375 ಸಂಪರ್ಕಿಸಲು ಕೋರಲಾಗಿದೆ.