ಸಾರಾಂಶ
ವಿಶ್ವ ಕಾರ್ಮಿಕರ ದಿನ ಕಾರ್ಯಕ್ರಮ । ವಾಹನ ಮಾಲಿಕರ ಸಂಘ ಆಯೋಜನೆ
ಕನ್ನಡಪ್ರಭ ವಾರ್ತೆ ತರೀಕೆರೆಯಾವ ಸಮಸ್ಯೆ ಬಂದರೂ ಅದನ್ನು ಪರಿಹರಿಸಲು ಕಾರ್ಮಿಕರು ಒಗ್ಗಟ್ಟಾಗಿರಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲಿಕರ ಮತ್ತು ತಂತ್ರಜ್ಞರ ಸಂಘ ಕೆಟಿಡಬ್ಲ್ಯುಒಟಿ ತರೀಕೆರೆ ಟೀಂ ವತಿಯಿಂದ ಪಟ್ಟಣದ ಆರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಾಡಾಗಿದ್ದ ವಿಶ್ವ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಈಗ ವಾಹನಗಳು ಹೆಚ್ಚು ಇರುತ್ತದೆ, ನಾವು ಚುನಾವಣೆ ಸಮಯದಲ್ಲಿ ಭರವಸೆ ನೀಡಿದಂತೆ ರಸ್ತೆಗಳ ಅಭಿವೃದ್ದಿ, ಕ್ರೀಡಾಂಗಣ, ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ತರೀಕೆರೆ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಇತ್ಯಾದಿ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ನೆರವೇರಿಸಲಾಗುತ್ತದೆ, ಪಟ್ಟಣದ ಬಿ.ಎಚ್.ರಸ್ತೆಯನ್ನು 30 ಕೋಟಿ ರು.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಹೆಚ್ಚುವರಿಯಾಗಿ ಬಿ.ಎಚ್.ರಸ್ತೆ ಅಭಿವೃದ್ದಿಗೆ 25 ಕೋಟಿ ರು. ಅನುದಾನ ಕೂಡ ದೊರಕಿದೆ, ಪಟ್ಟಣದಲ್ಲಿ 8 ಕೋಟಿ ರು.ಗಳಲ್ಲಿ ಚರಂಡಿ ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್ ಕಾರ್ಮಿಕರ ದಿನಾಚರಣೆಯ ಶುಭಾಷಯ ಕೋರಿದರು.ಮಾಜಿ ಪುರಸಭಾದ್ಯಕ್ಷ ಎಂ.ನರೇಂದ್ರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಕಾರ್ಮಿಕರು ವಿದ್ಯಾವಂತರು ಆಗಬೇಕು, ಕಾರ್ಮಿಕರು ಕಷ್ಟಪಟ್ಟು ದುಡಿಯುತ್ತಾರೆ, ಕಾರ್ಮಿಕರು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕು, ಸಂಘಟಿತರಾಗಬೇಕು, ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ, ಕಾರ್ಮಿಕರ ದಿನಾಚರಣೆ ಒಳ್ಳೆಯ ಕಾರ್ಯಕ್ರಮವಾಗಿದೆ, ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರ ಇದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಸಹಕಾರದಿಂದ ಕಾರ್ಮಿಕರಿಗೆ ಸೌಲಭ್ಯಗಳನ್ನು ದೊರಕಿಸಲಾಗುವುದು ಎಂದು ಹೇಳಿದರು.,ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ಪುರಸಭೆ ಸದಸ್ಯ ಟಿ.ದಾದಾಪೀರ್, ಪದಾದಿಕಾರಿಗಳಾದ ರೋನತ್ ಪಾಶ, ಪೋಲೀಸ್ ಸಬ್ ಇನ್‌ಸ್ಪೆಕ್ಚರ್ ನಾಗೇಂದ್ರ ನಾಯಕ್ ಮತ್ತಿತರರು ಮಾತನಾಡಿದರು.
ಈಡಿಗ ಸಮಾಜದ ಮುಖಂಡರಾದ ಟಿ.ಟಿ.ರಾಘವೇಂದ್ರ, ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲಿಕರ ಮತ್ತು ತಂತ್ರಜ್ಞರ ಸಂಘ ಕೆಟಿಡಬ್ಲುಒಟಿ ತರೀಕೆರೆ ಟೀಂನ ಅಧ್ಯಕ್ಷ ಶಘೀಕ್ ಅಹಮದ್, ರೋನತ್ ಪಾಶ, ಅಪ್ಸರ್ ಪಾಶ, ನಸೀರ್ ಆಹಮದ್, ಪವನ್ ಸಂಘದ ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.