ಸಾರಾಂಶ
ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ, ಮದುವೆ, ಹೆರಿಗೆ, ವಿದ್ಯಾರ್ಥಿ ವೇತನ, ಅಪಘಾತ, ಅಂತ್ಯ ಸಂಸ್ಕಾರ, ಪಿಂಚಣಿ, ಹೀಗೆ ಸರ್ಕಾರ ಹಲವಾರು ಸಹಾಯ ಧನಗಳನ್ನು ನೀಡುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಕನ್ನಡಪ್ರಭ ಗೌರಿಬಿದನೂರು
ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡ ತಿಳಿಸಿದರು.ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕಾರ್ಯಕ್ರಮದಲ್ಲಿ ಕಾರ್ಮಿಕರ ಸಲಕರಣೆಗಳನ್ನು ಅವರು ವಿತರಿಸಿ ಮಾತನಾಡಿದರು.ಕಾರ್ಮಿಕರಿಗೆ ನಾನಾ ಸೌಲಭ್ಯ
ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ, ಮದುವೆ, ಹೆರಿಗೆ, ವಿದ್ಯಾರ್ಥಿ ವೇತನ, ಅಪಘಾತ, ಅಂತ್ಯ ಸಂಸ್ಕಾರ, ಪಿಂಚಣಿ, ಹೀಗೆ ಸರ್ಕಾರ ಹಲವಾರು ಸಹಾಯ ಧನಗಳನ್ನು ನೀಡುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಮಿಕರು ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ಕಾರ್ಮಿಕರು ಈಗ ಹೊಸದಾಗಿ ಇ-ಕಾರ್ಡ್ ಮಾಡಿಸುವುದು ಕಡ್ಡಾಯವಾಗಿದೆ, ಮತ್ತು ಪ್ರತಿ ವರ್ಷ ತಪ್ಪದೆ ಕಡ್ಡಾಯವಾಗಿ ನವೀಕರಣ ಮಾಡಿಸಬೇಕು, ತಪ್ಪಿದಲ್ಲಿ ಸರ್ಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಕಳೆದ ವರ್ಷ ತಾಂತ್ರಿಕ ದೋಷದಿಂದ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವಾಗಿತ್ತು, ಈ ವರ್ಷದಿಂದ ಎಸ್.ಎಸ್.ಪಿ.ಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿಗಳಿಗೆ ಆಧಾರ್ ಮುಖಾಂತರ ವಿದ್ಯಾರ್ಥಿ ವೇತನ ಬರುತ್ತದೆ.ಟೂಲ್ಸ್ ಕಿಟ್ ವಿತರಣೆಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಎಲೆಕ್ಟರಿಕ್ ಕಾರ್ಮಿಕರಿಗೆ ವೆಲ್ಡಿಂಗ್ ಕಾಯಕ ಮಾಡುವ ಅರ್ಹ ಫಲಾನುಭವಿಗಳಿಗೆ ಟೂಲ್ಸ್ ಕಿಟ್ ಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಶ್ರಮಿಕರ ಸಂಜೀವಿನಿ ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ವೆಂಕಟಾದ್ರಿ, ನರಸಿಂಹ ಮೂರ್ತಿ, ಹಲವು ಇಲಾಖೆಯ ಅಧಿಕಾರಿ ವರ್ಗದವರು, ಆರಕ್ಷಕ ಇಲಾಖೆಯ ಅಧಿಕಾರಿ ವರ್ಗದವರು, ಸಾರ್ವಜನಿಕರು, ಕಾರ್ಮಿಕ ಕಿಟ್ ಗಳನ್ನು ಪಡೆಯಲು ಆಗಮಿಸಿದ್ದ ಅರ್ಹ ಕಾರ್ಮಿಕ ಫಲಾನುಭವಿಗಳು ಉಪಸ್ಥಿತರಿದ್ದರು.