ಹೂವಿನಹಡಗಲಿ: ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಎಲೆಕ್ಟ್ರಿಷಿಯನ್, ಪ್ಲಂಬರ್ ಕಾರ್ಮಿಕರ ಅಸೋಶಿಯೇಷನ್‌ಗೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೀವದ ಹಂಗು ತೊರೆದು ಕೆಲಸ ಮಾಡುವ ಈ ಕಾರ್ಮಿಕರು ಬದುಕಿನಲ್ಲಿ ಸಮಸ್ಯೆಗಳು ಎದುರಾದರೆ ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಮೂಲಕ ನೀಡಲಾಗುವುದು. ಈ ಸಂಘಟನೆಯ ಸಮಸ್ಯೆಗಳಿಗೆ ನಿರಂತರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಹಿಂದೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಕೆಲವು ಕಿಟ್‌ಗಳು ಬಂದಿದ್ದವು. ಆದರೆ ಅವು ಸಂಪೂರ್ಣ ಕಳಪೆಯಾಗಿದ್ದವು. ಅವುಗಳನ್ನು ವಿತರಿಸದೇ ತಿರಸ್ಕರಿಸಿದ್ದೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗಬೇಕಿದೆ. ಗುಣಮಟ್ಟದ ಕಿಟ್ ನೀಡುವ ಉದ್ದೇಶವಿದೆ. ಈ ಸಂಘಟನೆಗೆ ನಿವೇಶನ ನೀಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವಂತಹ ಪ್ರಯತ್ನ ಮಾಡುತ್ತೇವೆ ಎಂದರು.ಗವಿಸಿದ್ದೇಶ್ವರ ಶಾಖಾ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ, ಚೌಕಿ ಮಠದ ಸದ್ಗುರು ಗಾಡಿ ತಾತಾ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ರಾಮಸ್ವಾಮಿ, ಮುಸ್ಲಿಂ ಧರ್ಮಗುರು ಹಜರತ್ ಸಜ್ಬು ಸಾನಿಧ್ಯ ವಹಿಸಿದ್ದರು.
ಮುಖಂಡ ಕೆ.ಪುತ್ರೇಶ, ಸಂಘದ ರಾಜ್ಯಾಧ್ಯಕ್ಷ ಎಚ್.ಜಿ. ಉಮೇಶ, ತಾಲೂಕು ಅಧ್ಯಕ್ಷ ಯು.ಮಲ್ಲಿಕಾರ್ಜುನ, ಉಪಾಧ್ಯಕ್ಷ ಫಕೃದ್ದೀನ್ ಬಳಿಗಾರ, ಟಿ.ಶೇಖರ್, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಸಹ ಕಾರ್ಯದರ್ಶಿ ಟಿ.ಅಣ್ಣಪ್ಪ, ಖಜಾಂಚಿ ಡಿ.ಮೆಹಬೂಬ್, ಸಹ ಖಜಾಂಚಿ ಕಡ್ಲಿ ಕೊಟ್ರೇಶ ಇದ್ದರು.