ಮನಮೋಹನ್‌ ಜತೆ ಕರ್ತವ್ಯ ನಿರ್ವಹಣೆಯೇ ಸುದೈವ

| Published : Dec 28 2024, 12:46 AM IST

ಮನಮೋಹನ್‌ ಜತೆ ಕರ್ತವ್ಯ ನಿರ್ವಹಣೆಯೇ ಸುದೈವ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ: ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ದೆಹಲಿಯಲ್ಲಿ ಮನಮೋಹನ್‌ ಸಿಂಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾತನಾಡಿ, 2004 ರಿಂದ 2014 ರವರೆಗೂ ಅವರು ಪ್ರಧಾನಿಯಾಗಿ ವೇಳೆ ಅವರೊಂದಿಗೆ ಭೂಸಾರಿಗೆ, ರೈಲ್ವೆ, ಸಣ್ಣ ಕೈಗಾರಿಕೆ ರಾಜ್ಯ ಸಚಿವನಾಗಿ ತಾವು ಕೆಲಸ ಮಾಡಿದ್ದು, ಅವರು ಸರಳ ಹಾಗೂ ಸೌಮ್ಯ ಸ್ವಾಭಾವದ ರಾಜಕಾರಣಿಯಾಗಿದ್ದರು. ಇಲಾಖೆಗೆ ಸಂಬಂಧಿಸಿದ ಯಾವುದೇ ವಿಚಾರಗಳಿರಲಿ, ಅವರು ಆದ್ಯತೆಯಾಗಿ ಪರಿಗಣಿಸಿ ಪ್ರೋತ್ಸಾಹಿಸುತ್ತಿದ್ದರು. ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಅವರು ಅಗ್ರಗಣ್ಯರಾಗಿದ್ದರು ಎಂದು ಸ್ಮರಿಸಿದ್ದಾರೆ.

ಈ ದೇಶವು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಹಣಕಾಸು ಸಚಿವರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು. ಅವರು ಕೊಟ್ಟ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಕಾಯ್ದೆ, ಎಲ್ಲರಿಗೂ ಶಿಕ್ಷಣ ಮುಂತಾದವು ಗಣನೀಯ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಕೊಂಡೊಯ್ದ ಕೀರ್ತಿ ಅವರದ್ದು ಎಂದರು.

ನಾನು ಎಂಎಸ್‌ಎಂಇ ಸಚಿವನಿದ್ದಾಗ, ಗ್ರಾಮೀಣ ಮಟ್ಟದಲ್ಲಿ ಯುವಕರಿಗೆ ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಲು ನನಗೆ ಸೂಚಿಸಿದರು. ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷ ಉದ್ದಿಮೆಗಳನ್ನು ಸೃಷ್ಟಿಸಿ, ಬ್ಯಾಂಕ್‌ಗಳ ನೆರವಿನಿಂದ ಸುಮಾರು 20 ರಿಂದ 25 ಲಕ್ಷ ರುಪಾಯಿಗಳವರೆಗೆ ಸಾಲ ಕೊಡಿಸಿ ಪ್ರತಿ ಉದ್ಯಮಿಯು 8 ಜನರಿಗೆ ಉದ್ಯೋಗವನ್ನು ಕೊಡುವ ವ್ಯವಸ್ಥೆ ಮಾಡಿದ್ದೆವು ಎಂದು ನೆನಪಿಸಿಕೊಂಡರು.

27ಕೆಡಿಬಿಪಿ4- ಬೆಂ.ಗ್ರಾ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ದೆಹಲಿಯಲ್ಲಿ ಡಾ.ಮನಮೋಹನ್‌ ಸಿಂಗ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.