ಸಾರಾಂಶ
ಎನ್ಎಚ್ಎಂ ಕರ್ನಾಟಕ ಹಾಗೂ ಇತರೆ ಸಂಸ್ಥೆಯ ಸಹಯೋಗದಲ್ಲಿ ಬಿಬಿಎಂಪಿ ಕೆಂದ್ರ ಕಚೇರಿಯ ನೌಕಕರ ಭವನದಲ್ಲಿ ಆಯೋಜಿಸಿದ್ದ ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಯ ಬಗ್ಗೆ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಯ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಯ ಬಗ್ಗೆ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮ ಆಯೋಜನೆ ಉತ್ತಮ ಕಾರ್ಯವಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರುಲ್ಕರ್ ವಿಕಾಸ್ ಕಿಶೋರ್ ಅಭಿಪ್ರಾಯಪಟ್ಟರು.ಎನ್ಎಚ್ಎಂ ಕರ್ನಾಟಕ ಹಾಗೂ ಇತರೆ ಸಂಸ್ಥೆಯ ಸಹಯೋಗದಲ್ಲಿ ಬಿಬಿಎಂಪಿ ಕೆಂದ್ರ ಕಚೇರಿಯ ನೌಕಕರ ಭವನದಲ್ಲಿ ಆಯೋಜಿಸಿದ್ದ ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಯ ಬಗ್ಗೆ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೈಕೆಗೆ ಬೇಕಾಗುವ ಸಲಹೆಗಳನ್ನು ನೀಡಲು ಪಾಲಿಕೆ ಆಸ್ಪತ್ರೆ ಹಾಗೂ ಪಿಎಚ್‌ಸಿಯ ವೈದ್ಯಾಧಿಕಾರಿಗಳು ಹಾಗೂ ನರ್ಸಿಂಗ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡುವ ಗರ್ಭಿಣಿಯರಿಗೆ ಗೊಂದಲ ಹಾಗೂ ಆತಂಕವಿದ್ದರೆ ಒಪಿಡಿಯಲ್ಲಿ ವೈದ್ಯಾದಿಕಾರಿಗಳು ಪರಿಹಾರ ನೀಡಲು ತರಬೇತಿ ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಪಾಲಿಕೆಯ 31 ಹೆರಿಗೆ ಆಸ್ಪತ್ರೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಈ ಕಾರ್ಯಕ್ರಮವು ಹೆಚ್ಚು ಅನುಕೂಲಕರವಾಗಿದೆ ಎಂದು ತಿಳಿಸಿದರು.ಇದೇ ವೇಳೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡ ಪಾಲಿಕೆಯ ಶ್ರೀರಾಂಪುರ ಹಾಗೂ ಬನಶಂಕರಿ ರೆಫರಲ್ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪಾಲಿಕೆ ಸಾರ್ವಜನಿಕರ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ। ಸೈಯದ್ ಸಿರಾಜುದ್ದೀನ್ ಮದನಿ, ತಾಯಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ವೈದ್ಯಾಧಿಕಾರಿ ಡಾ। ಶೋಭಾ, ಪಾಲಿಕೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))