ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ: ಅಥಣಿ ಕೆಎಲ್ಇ ಸಂಸ್ಥೆಯ ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಸ್ಥೆಯ ಸಿಬಿಎಸ್‌ಸಿ ಆಂಗ್ಲ ಮಾಧ್ಯಮಗಳ ಎಲ್ಲ ಶಾಲೆಯ ಪ್ರಾಚಾರ್ಯರರು ಮತ್ತು ಶಿಕ್ಷಕರ ಭಾಗವಹಿಸಿದ್ದರು.ಕೆಎಲ್ಇ ಸಂಸ್ಥೆಯ ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಜಗದೀಶ ಹವಾಲ್ದಾರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಶಿಕ್ಷಕರಿಗೆ ನಿರಂತರ ತರಬೇತಿ ಅವಶ್ಯವಾಗಿದ್ದು, ಇದರಿಂದ ಹೊಸ ವಿಷಯಗಳ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಉಪಯೋಗವಾಗುವ ಇತ್ತೀಚಿನ ದಿನಗಳ ಸಂಶೋಧನೆಗಳ ಬಗ್ಗೆ ಹೆಚ್ಚಿನ ಜ್ಞಾನ ತಿಳುವಳಿಕೆ ಲಭ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.ಪ್ರಾಚಾರ್ಯ ಸತೀಶ ಹಿರೇಮಠ ಮಾತನಾಡಿ, ಮಕ್ಕಳಿಗೆ ಸ್ಪರ್ಧಾತ್ಮಕ ಯುಗವನ್ನು ಹೇಗೆ ಎದುರಿಸಬೇಕು ಎಂಬುದನ್ನು ನಿತ್ಯ ಪಠ್ಯದ ಜೊತೆಗೆ ಬೋಧಿಸಬೇಕಾಗಿದೆ. ಅದಕ್ಕೆ ಇಂತಹ ತರಬೇತಿಗಳು ಪೂರಕವಾಗಲಿವೆ ಎಂದು ಹೇಳಿದರು. ಪ್ರತಿ ವಿದ್ಯಾರ್ಥಿಯಲ್ಲಿ ಒಂದಲ್ಲ ಒಂದು ಸೂಕ್ತ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.ಪ್ರಾಚಾರ್ಯ ಚೇತನ್ ರಾಜೇಶ್ವರಿ ಭರತ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ 230ಕ್ಕು ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು. ರಾಜೇಶ್ವರಿ ಭರತ ಶಿಕ್ಷಕರಿಗೆ ವರ್ಗ ಕೋಣೆಯ ಸರಳ ಬೋಧನಾ ಶೈಲಿಗಳನ್ನು ಮತ್ತು ವರ್ಗಕೋಣೆಯ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಅರ್ಪಿತಾ ಗುರುಸಿದ್ದನವರ ನಿರೂಪಿಸಿದರು. ಪೂರ್ವ ಪೂಜಾರಿ ಸ್ವಾಗತಿಸಿದರು. ಸುಯೋಗ ಬಕ್ಕಣ್ಣವರ ವಂಧಿಸಿದರು.