ಸ್ಥಳೀಯ ಟಿಎಂಎಇ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಸಮಗ್ರ ಸರ್ಪದಂಶ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಹೊಸಪೇಟೆ: ಸ್ಥಳೀಯ ಟಿಎಂಎಇ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಸಮಗ್ರ ಸರ್ಪದಂಶ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಟಿಎಂಎಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಸ್ಸಿಎಸ್ ಆಸ್ಪತ್ರೆ, ಸ್ನಾತಕೋತ್ತರ ಸಂಶೋಧನಾ ಕೇಂದ್ರ, ಹೊಸಪೇಟೆಯ ಅಗದತಂತ್ರ ಏವಂ ವಿಧಿ ವೈದ್ಯಕ ವಿಭಾಗದ ವತಿಯಿಂದ ವಿಶ್ವ ಸರ್ಪ ದಿನಾಚರಣೆಯ ಅಂಗವಾಗಿ ಸಮಗ್ರ ಸರ್ಪದಂಶ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಸರ್ಪದಂಶದ ಪ್ರಥಮ ಚಿಕಿತ್ಸೆ, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳು, ಆಂಟಿ​ಸ್ನೇಕ್ ವೆನಮ್, ಸರ್ಪಗಳ ಗುರುತಿಸುವಿಕೆ, ಸುರಕ್ಷತಾ ಕ್ರಮಗಳು ಹಾಗೂ ವನ್ಯ ಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಪರಿಸರ ತಜ್ಞ ಹಾಗೂ ವನ ಮಿತ್ರ ಫೌಂಡೇಶನ್ ಸಂಸ್ಥಾಪಕ ಡಾ. ಸಮದ್ ಕೊಟ್ಟೂರು ಕಾರ್ಯಾಗಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊಸಪೇಟೆ ಪ್ರಾದೇಶಿಕ ಆರಣ್ಯಾಧಿಕಾರಿ ಕೌಶಿಕ್ ದಳವಾಯಿ ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿ ಡಾ. ಅಶೋಕ್ ಬಿ.ಎನ್. ಸರ್ಪದಂಶದ ವೈಜ್ಞಾನಿಕ ನಿರ್ವಹಣೆ, ಪ್ರಥಮಚಿಕಿತ್ಸೆ, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳು ಕುರಿತು ಉಪನ್ಯಾಸ ನೀಡಿದರು. ಅನಿಮಲ್ ಕನ್ಸರ್ವೇಶನ್ ಟ್ರಸ್ಟ್ ಸಂಸ್ಥಾಪಕ ವೇಣುಗೋಪಾಲ್ ನಾಯ್ಡು ಸರ್ಪಗಳ ಗುರುತಿಸುವಿಕೆ, ಸುರಕ್ಷತಾ ಕ್ರಮಗಳು, ಸರ್ಪಗಳ ಕುರಿತ ಮೂಢನಂಬಿಕೆಗಳು ಹಾಗೂ ಮಾನವ - ಸರ್ಪ ಸಹಬಾಳ್ವೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮ್ಮದ್ ಅಸ್ರಫ್ ಡಿ ಸಾಮುದ್ರಿ, ಆಡಳಿತಾಧಿಕಾರಿ ಡಾ. ಶಿವಶಂಕರ್ ಟಿ.ಎಂ. ಅವರ ಮಾರ್ಗದರ್ಶನದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಸ್ವರೂಪ ಪಿ. ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಅನಿಲ್ ಕುಮಾರ್ ವೈ. ಅವರ ನೇತೃತ್ವದಲ್ಲಿ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾರ್ಯಾಗಾರ ಯಶಸ್ವಿ ಯಾಗಿ ನಡೆಯಿತು.