ವಿಶ್ವ ಸುಲಭ ಲಭ್ಯತೆ ಜಾಗೃತಿ ದಿನಾಚರಣೆ

| Published : May 17 2024, 12:37 AM IST

ವಿಶ್ವ ಸುಲಭ ಲಭ್ಯತೆ ಜಾಗೃತಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನರು, ವಿಶೇಷ ಚೇತನರಿಗೆ 2016ರ ಕಾಯ್ದೆಯಡಿ ಸೌಲಭ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನರಲ್ಲಿ ವಿಶ್ವಾಸ, ಭರವಸೆ ಮೂಡಿಸಲು ಬದುಕಲು ಬೇಕಾದ ಸೌಲಭ್ಯವನ್ನು ಈ ಕಾಯ್ದೆಯಡಿ ನೀಡಲಾಗುತ್ತಿದೆ ಎಂದರು.ಯಾವುದೇ ಅಪೇಕ್ಷೆ ಇಲ್ಲದೆ ಸಮಾಜದ ಕೆಳಮಟ್ಟದಲ್ಲಿರುವ ವ್ಯಕ್ತಿಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ವಿಶ್ವ ಸುಲಭ ಲಭ್ಯತೆಯ ಜಾಗೃತಿ ದಿನಾಚರಣೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನರು, ವಿಶೇಷ ಚೇತನರಿಗೆ 2016ರ ಕಾಯ್ದೆಯಡಿ ಸೌಲಭ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನರಲ್ಲಿ ವಿಶ್ವಾಸ, ಭರವಸೆ ಮೂಡಿಸಲು ಬದುಕಲು ಬೇಕಾದ ಸೌಲಭ್ಯವನ್ನು ಈ ಕಾಯ್ದೆಯಡಿ ನೀಡಲಾಗುತ್ತಿದೆ ಎಂದರು.ಯಾವುದೇ ಅಪೇಕ್ಷೆ ಇಲ್ಲದೆ ಸಮಾಜದ ಕೆಳಮಟ್ಟದಲ್ಲಿರುವ ವ್ಯಕ್ತಿಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಸಂಕಲ್ಪ ಎನ್ನುವುದು ಮುಖ್ಯ. ಒಳ್ಳೆಯ ಸಂಕಲ್ಪ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಪಿಡಿ ಸಂಸ್ಥೆ ಯೋಜನಾ ಮುಖ್ಯಸ್ಥೆ ವಿಜಯಲಕ್ಷ್ಮಿ, ಫೇವರ್ಡ್ ರಾಜ್ಯಾಧ್ಯಕ್ಷ ಮಹೇಶ್‌ ಚಂದ್ರಗುರು, ಜಿಲ್ಲಾಧ್ಯಕ್ಷ ಡಾ.ನಾಗಪ್ಪ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ರೋಹಿತ್, ಫೇವರ್ಡ್ ಕಾರ್ಯದರ್ಶಿ ಕಾರಸವಾಡಿ ಮಹದೇವು, ದೇವರಾಜು ಉಪಸ್ಥಿತರಿದ್ದರು.

ಇಂದಿನಿಂದ ಶ್ರೀಕೆಂಚಣ್ಣ ಮತ್ತು ಶ್ರೀಕರಿಯಣ್ಣ ದೇವರುಗಳ ಪಂಚಲೋಹದ ಹರಿಗೆ ಹಬ್ಬ

ಮಳವಳ್ಳಿ:ಪಟ್ಟಣದ ಅಶೋಕನಗರದಲ್ಲಿ ಮೇ 17ರಿಂದ 19ರವರೆಗೆ ಶ್ರೀಕೆಂಚಣ್ಣ ಮತ್ತು ಶ್ರೀಕರಿಯಣ್ಣ ದೇವರುಗಳ ಪಂಚಲೋಹದ ಹರಿಗೆ ಹಬ್ಬ ವಿಜೃಂಬಣೆಯಿಂದ ನಡೆಯಲಿದೆ.

ಮೇ 17ರಂದು ಸಂಜೆ 7-30ಕ್ಕೆ ಪುಣ್ಯಾಹ, ನಾಂದಿ ನಕ್ಷತ್ರ, ಶಾಂತಿ ಹೋಮ ಹಾಗೂ ಸ್ವಾಮಿಯ ಕಣ್ಣು ತೆರೆಸುವ ಕಾರ್ಯಕ್ರಮ ಜರುಗಲಿದೆ, ಮೇ 18 ರಂದು ಬೆಳಗ್ಗೆ 6.20 ರಿಂದ 8.30 ರವರೆಗೆ ಸಲ್ಲುವ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಆವರಣದಲ್ಲಿ ನೂತನ ಕೆಂಚಣ್ಣ ಮತ್ತು ಕರಿಯಣ್ಣ ಹರಿಗೆಗಳ ಹೂ ಹೊಂಬಾಳೆ, ಮಣೆ ಸೇವೆ, ಹುಲಿವಾಹನ ಉತ್ಸವ, ಪಂಚಕಳಸದಿಂದ ಹೊಸನೀರು ತರುವುದು ಜೊತೆಯಲ್ಲಿ ಮದ್ದೂರು-ಕೊಳ್ಳೇಗಾಲ ರಸ್ತೆಯ ಮೂಲಕ ಅಶೋನಗರದ ಕಾಲೋನಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.ಮೆರವಣಿಗೆ ಮುಗಿದ ನಂತರ ಶ್ರೀರಾಮಮಂದಿರದ ಒಳಗೆ ನೂತನ ಶ್ರೀಕೆಂಚಣ್ಣ ಮತ್ತು ಶ್ರೀ ಕರಿಯಣ್ಣ ಹರಿಗೆಯನ್ನು ಪ್ರವೇಶ ಮಾಡಲಾಗುತ್ತಿದೆ. ಅಶೋಕ ನಗರದ ಎಲ್ಲಾ ದಾಸಪ್ಪಂದಿರು, ಗುಡ್ಡಪ್ಪಂದಿರು, ಶಂಖ, ಜಾಗಟೆ ಸಮೇತರಾಗಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 19ರಂದು ಮಧ್ಯಾಹ್ನ 12ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಅಶೋಕ್‌ನಗರ ಮುಖಂಡರು ಕೋರಿದ್ದಾರೆ.