ಮಾಹೆಯಲ್ಲಿ ವಿಶ್ವ ಅಂಗರಚನಾ ಶಾಸ್ತ್ರ ದಿನಾಚರಣೆ

| Published : Oct 22 2025, 01:03 AM IST

ಸಾರಾಂಶ

ಕಾರ್ಯಕ್ರಮದಂಗವಾಗಿ ಮಾನವ ಅಂಗ ರಚನೆಯ ಅಪೂರ್ವವಾದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದನ್ನು 1,125ಕ್ಕೂ ಹೆಚ್ಚು ಮಂದಿ ಆಯುಷ್, ಅಲೈಡ್ ಹೆಲ್ತ್, ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಮೂಲ ವೈದ್ಯಕೀಯ ವಿಜ್ಞಾನ ವಿಭಾಗ (ಡಿಬಿಎಂಎಸ್)ದ ಅಂಗರಚನಾ ಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಅಂಗರಚನಾಶಾಸ್ತ್ರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಂಗವಾಗಿ ಮಾನವ ಅಂಗ ರಚನೆಯ ಅಪೂರ್ವವಾದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದನ್ನು 1,125ಕ್ಕೂ ಹೆಚ್ಚು ಮಂದಿ ಆಯುಷ್, ಅಲೈಡ್ ಹೆಲ್ತ್, ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರು ವೀಕ್ಷಿಸಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ಕಾರ್ಯಾಚರಣಾಧಿಕಾರಿ ಡಾ. ಸುಧಾಕರ್ ಕಾಂತಿಪುಡಿ ಉದ್ಘಾಟಿಸಿದರು. ಡಿಬಿಎಂಎಸ್ ಮುಖ್ಯಸ್ಥ ಡಾ. ಉಲ್ಲಾಸ್ ಕಾಮತ್ ಮತ್ತು ಅಂಗರಚನಾಶಾಸ್ತ್ರ ವಿಭಾಗದ ಸಂಯೋಜಕಿ ಡಾ. ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ತಲಪಾಡಿಯ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಕೀಯ ಕಾಲೇಜು, ಮೂಡುಬಿದ್ರೆಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಮುನಿಯಾಲ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆ, ಉಡುಪಿಯ ಆದರ್ಶ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್, ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್, ಕುಂದಾಪುರದ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಕೋಟದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲ ಶಿಕ್ಷಾ ಮಾಂಟೆಸ್ಸರಿ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.