50 ವಿದ್ಯಾರ್ಥಿಗಳ ಉಚಿತವಾಗಿ ಕ್ಷೌರ ಮಾಡಿ ವಿಶ್ವ ಕ್ಷೌರಿಕ ದಿನಾಚರಣೆ

| Published : Sep 17 2025, 01:06 AM IST / Updated: Sep 17 2025, 01:07 AM IST

50 ವಿದ್ಯಾರ್ಥಿಗಳ ಉಚಿತವಾಗಿ ಕ್ಷೌರ ಮಾಡಿ ವಿಶ್ವ ಕ್ಷೌರಿಕ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬಿಣಕಂತಿ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು.

ರಟ್ಟೀಹಳ್ಳಿ: ಇಲ್ಲಿನ ಹಡಪದ ಅಪ್ಪಣ ಸಮಾಜದ ವತಿಯಿಂದ ಮಂಗಳವಾರ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಷೌರ ಮಾಡುವ ಮೂಲಕ ವಿಶ್ವ ಕ್ಷೌರಿಕ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.

ಕಬ್ಬಿಣಕಂತಿ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು ಎಂದು

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ತಾಲೂಕಾಧ್ಯಕ್ಷ ಹಾಲಸಿದ್ದಪ್ಪ ಕಾಯಕದ, ಇಲ್ಲಿನ ಹಡಪದ ಅಪ್ಪಣ ಸಮಾಜವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಉಚಿತ ಕ್ಷೌರವೂ ಒಂದು. ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ನಡೆದ ಮದ್ಯವರ್ಜನ ಶಿಬಿರದಲ್ಲಿ ನೂರಾರು ಜನರಿಗೆ ಉಚಿತವಾಗಿ ಕ್ಷೌರ ಮಾಡಲಾಗಿತ್ತು. ಇಲ್ಲಿಯವರೆಗೆ 500ಕ್ಕೂ ಅಧಿಕ ಮಂದಿಗೆ ಉಚಿತ ಕ್ಷೌರ ಮಾಡಲಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಅಶೋಕ ಕಾಯಕದ, ಖಜಾಂಚಿ ವೀರೇಶ ಕಾಯಕದ, ಉಪಾಧ್ಯಕ್ಷ ಕುಮಾರ ಕಾಯಕದ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಬಸವರಾಜ ಗುತ್ತಲ, ರಾಜಪ್ಪ ಕಾಯಕದ, ವಿಷ್ಣು ಮಕರಿ, ನಾಗರಾಜ ಕಟ್ಟಿಮನಿ, ಗಣೇಶ ಕಾಯಕದ, ಶಶಿಕುಮಾರ ಎಸ್., ಲಿಂಗರಾಜ ಕಾಯಕದ, ಮಂಜುನಾಥ ಕಾಯಕದ, ಪ್ರಕಾಶ ಶಿಗಡಿ ಮುಂತಾದವರು ಇದ್ದರು. ಹಡಪದ ಅಪ್ಪಣ್ಣ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸಲಿ

ರಟ್ಟೀಹಳ್ಳಿ: ಹಡಪದ ಅಪ್ಪಣ್ಣ ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜ ಮುನ್ನೆಲೆಗೆ ಬರಬೇಕಾದರೆ ಮೊದಲು ಶಿಕ್ಷಿತರಾಗಬೇಕು ಎಂದು ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಹಾಲಸಿದ್ದಪ್ಪ ಕಾಯಕದ ಅಭಿಪ್ರಾಯಪಟ್ಟರು.

ಮಂಗಳವಾರ ವಿಶ್ವ ಕ್ಷೌರಿಕ ದಿನಾಚರಣೆ ಅಂಗವಾಗಿ ಕಬ್ಬಿಣಕಂತಿ ಮಠದ ವಸತಿ ಶಾಲೆಯ ಮಕ್ಕಳಿಗೆ ಉಚಿತ ಕೌರ ಸೇವೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸಮಾಜದ ಜನರು ನಿತ್ಯ ಕಾಯಕದ ಮೂಲಕ ಜೀವನ ನಡೆಸುತ್ತಿದ್ದು, ಆರ್ಥಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಇಂದಿಗೂ ಅನ್ಯಾಯಕ್ಕೊಳಗಾಗಿದೆ. ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿವೆ ಎಂದರು.ತಾಲೂಕು ಹಡಪದ ಅಪ್ಪಣ್ಣ ಸಮಾಜದ ಪ್ರಧಾನ ಕಾರ್ಯದರ್ಶಿ ಅಶೋಕ ಕಾಯಕದ, ಖಜಾಂಚಿ ವೀರೇಶ ಕಾಯಕದ, ಉಪಾಧ್ಯಕ್ಷ ಕುಮಾರ ಕಾಯಕದ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಬಸವರಾಜ ಗುತ್ತಲ, ರಾಜಪ್ಪ ಕಾಯಕದ, ವಿಷ್ಣು ಮಕರಿ, ನಾಗರಾಜ ಕಟ್ಟಿಮನಿ, ಗಣೇಶ ಕಾಯಕದ, ಶಶಿಕುಮಾರ ಎಸ್, ಲಿಂಗರಾಜ ಕಾಯಕದ, ಮಂಜುನಾಥ ಕಾಯಕದ, ಪ್ರಕಾಶ ಶಿಗಡಿ ಮುಂತಾದವರು ಇದ್ದರು.