ಸಾರಾಂಶ
ತಿಪಟೂರು: ಮೂಲ ಕ್ಷೌರಿಕರಾದ ನಾವುಗಳು ಕೇವಲ ಕ್ಷೌರಿಕರಾಗಿರದೆ ಗಾಯಗಳಿಗೆ ಔಷಧಿ ಹಚ್ಚುವುದು, ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಪಾರಂಪರಿಕ ವೈದ್ಯಕೀಯ ಪದ್ದತಿಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೆವು ಎಂದು ಸವಿತಾ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಎಸ್. ಕಿರಣ್‌ಕುಮಾರ್ ತಿಳಿಸಿದರು. ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ತಾಲೂಕು ಸವಿತಾ ಸಮಾಜ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಕ್ಷೌರಿಕ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫ್ರಾನ್ಸ್ ದೇಶದಲ್ಲಿ ಕ್ಷೌರಿಕರ ವೈದ್ಯಕೀಯ ಸಂಘವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಿದ್ದರ ನೆನಪಿನಲ್ಲಿ ಪ್ರತಿವರ್ಷ ವಿಶ್ವ ಕ್ಷೌರಿಕ ದಿನವನ್ನಾಗಿ ಆಚರಣೆಯನ್ನು ಆಚರಿಸುತ್ತಿದ್ದೇವೆ ಎಂದ ಅವರು ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು. ಈ ಸಂದರ್ಭದಲ್ಲಿ ಕ್ಷೌರಿಕ ಜೀವನ ನಡೆಸುತ್ತಿರುವ ರಾಜು ಹಾಗೂ ವಿಶೇಷಚೇತನ ಕೊನೇಹಳ್ಳಿಯ ಶಿವರಾಜ್ ಇವರನ್ನು ಸನ್ಮಾನಿಸಲಾಯಿತು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸವಿತಾ ಸಾಹಿತ್ಯ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ರಾಜ್ಯ ನಿರ್ದೇಶಕ ಎಚ್.ಡಿ. ರಾಮು, ಮಂಜುನಾಥ್, ಜಿಲ್ಲಾ ಮುಖಂಡ ಓ.ಕೆ. ರಾಜು, ಎ.ಎಸ್. ಸುರೇಶ್, ಚಂದ್ರಶೇಖರ್, ತಾಲೂಕು ಅಧ್ಯಕ್ಷ ಎ.ಲೋಕೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ರಾಮಲಿಂಗಂ, ಟಿ.ಎನ್.ನಾಗರಾಜ್, ನರಸಿಂಹಯ್ಯ, ಎಸ್.ಕುಮಾರ್, ಜಿ.ನಾಗರಾಜು, ಟಿ.ಸಿ.ಗೋವಿಂದರಾಜು, ಶ್ರೀಧರಬಾಬು, ಮಂಜುನಾಥ್, ಶ್ರೀನಿವಾಸ್, ರಾಜಕುಮಾರ್, ಯುವ ಪಡೆಯ ಅಧ್ಯಕ್ಷ ವರದರಾಜು, ಉಪಾಧ್ಯಕ್ಷ ಮಾರುತಿ, ಗೋಪಿ, ನವೀನ್, ರವಿ, ಕಿರಣ್, ಪ್ರವೀಣ್, ರವಿಕುಮಾರ್, ನಾಗಬಾಬು, ತಿರುಮಲ ಮತ್ತಿತರರಿದ್ದರು.