ಕಾರ್ಲೆ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಸೀಮಂತ ಕಾರ್ಯಕ್ರಮ

| Published : Aug 11 2025, 12:30 AM IST

ಕಾರ್ಲೆ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಸೀಮಂತ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತಲೂಕಿನ ಕಾರ್ಲೆ ಪ್ರಥಮ ಕೇಂದ್ರ ನೇಸರ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಸನ್ ಮಿಟ್ಟೋನ್ ಹಾಗೂ ಕಾರ್ಲೆ ಅಂಗನವಾಡಿ ಸರ್ಕಲ್ ಇವರ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ತೇಜಸ್ವಿ ಆಡಳಿತ ವೈದ್ಯಾಧಿಕಾರಿ ಇವರು ಸ್ತನ್ಯಪಾನ ಸಪ್ತಾಹದ ಮಾಹಿತಿ ನೀಡಿ, ತಾಯಂದಿರಿಗೆ ಎದೆ ಹಾಲು ನೀಡುವ ಸಂದರ್ಭದಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ, ಚಿಕ್ಕ ಮಕ್ಕಳ ಆರೈಕೆ, ಗರ್ಭಿಣಿಯರ ಆರೈಕೆ ಎದೆ ಹಾಲು ಮಹತ್ವ ಹಾಗೂ ತಾಯಂದಿರಿಗೆ ಆಗುವ ಪ್ರಯೋಜಗಳನ್ನು ತಿಳಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಕಾರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಆಚರಣೆ ಹಾಗೂ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆರೋಗ್ಯದ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಂಡರು.

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತಲೂಕಿನ ಕಾರ್ಲೆ ಪ್ರಥಮ ಕೇಂದ್ರ ನೇಸರ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಸನ್ ಮಿಟ್ಟೋನ್ ಹಾಗೂ ಕಾರ್ಲೆ ಅಂಗನವಾಡಿ ಸರ್ಕಲ್ ಇವರ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ತೇಜಸ್ವಿ ಆಡಳಿತ ವೈದ್ಯಾಧಿಕಾರಿ ಇವರು ಸ್ತನ್ಯಪಾನ ಸಪ್ತಾಹದ ಮಾಹಿತಿ ನೀಡಿ, ತಾಯಂದಿರಿಗೆ ಎದೆ ಹಾಲು ನೀಡುವ ಸಂದರ್ಭದಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ, ಚಿಕ್ಕ ಮಕ್ಕಳ ಆರೈಕೆ, ಗರ್ಭಿಣಿಯರ ಆರೈಕೆ ಎದೆ ಹಾಲು ಮಹತ್ವ ಹಾಗೂ ತಾಯಂದಿರಿಗೆ ಆಗುವ ಪ್ರಯೋಜಗಳನ್ನು ತಿಳಿಸಿಕೊಟ್ಟರು. ತದನಂತರ ೨೦ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ರೋಟರಿ ಮಿಟ್ಟೋನ್ ಅಧ್ಯಕ್ಷರಾದ ಸಿದ್ದೇಶ್ವರ್ ಹಾಗೂ ರೋಟೆರಿಯನ್ ರೋಹಿತ್ ಅವರು ನೆರವೇರಿಸಿ ಕೊಟ್ಟರು.

ಶ್ರೀಮತಿ ಸುಧಾ ಅಂಗನವಾಡಿ ಕಾರ್ಯಕರ್ತರ ಮೇಲ್ವಿಚಾರಕರು ಇವರು ಮಾತನಾಡಿ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವು ಅತ್ಯಂತ ಸುಂದರ ಘಟನೆಯಾಗಿದ್ದು, ಅವರ ಮುಂದಿನ ಹೆರಿಗೆ ಸುಸೂತ್ರವಾಗಿ ನೆರೆವೇರಲೆಂದು ಬಯಸಿ ಮಾಡುವ ಕಾರ್ಯವಾಗಿದ್ದು, ಗರ್ಭಿಣಿಯರಿಗೆ ಇದರಿಂದ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಲೆ ಪ್ರಾಥಮಿಕ ಆರೋಗ್ಯದ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.