ವಿಶ್ವ ಸ್ತನ್ಯಪಾನ ಸಪ್ತಾಹ

| Published : Aug 05 2024, 12:30 AM IST

ಸಾರಾಂಶ

ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ 2023ರಲ್ಲಿ ಪ್ರಪಂಚದಾದ್ಯಂತ 48 ಪ್ರತಿಶತ ಮಹಿಳೆಯರು ಸಂಪೂರ್ಣ ಸ್ತನ್ಯಪಾನ ಮಾಡುತ್ತಿದ್ದಾರೆ ಹಾಗೂ ಭಾರತದಲ್ಲಿ 31 ಪ್ರತಿಶತ ಮಹಿಳೆಯರು ಸಂಪೂರ್ಣ ಸ್ತನ್ಯಪಾನ ಮಾಡುತ್ತಿದ್ದಾರೆ ಎಂದು ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ನಾಟೇಕರ ಹೇಳಿದರು.

ಬಾಗಲಕೋಟೆ: ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ 2023ರಲ್ಲಿ ಪ್ರಪಂಚದಾದ್ಯಂತ 48 ಪ್ರತಿಶತ ಮಹಿಳೆಯರು ಸಂಪೂರ್ಣ ಸ್ತನ್ಯಪಾನ ಮಾಡುತ್ತಿದ್ದಾರೆ ಹಾಗೂ ಭಾರತದಲ್ಲಿ 31 ಪ್ರತಿಶತ ಮಹಿಳೆಯರು ಸಂಪೂರ್ಣ ಸ್ತನ್ಯಪಾನ ಮಾಡುತ್ತಿದ್ದಾರೆ ಎಂದು ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ನಾಟೇಕರ ಹೇಳಿದರು.

ಬ.ವಿ.ವ.ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ-2024 ಕಾರ್ಯಕ್ರಮದಲ್ಲಿ ಅವತು ಮಾತನಾಡಿದರು.

ಸ್ತನ್ಯಪಾನವನ್ನು ಸರಿಯಾಗಿ ಮಾಡದೇ ಇರುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಮೊದಲನೇ ಉಪನ್ಯಾಸಕರಾದ ಡಾ.ನಾಗರತ್ನ ಕುಂಟೋಜಿ ಇವರು ವಿಶ್ವ ಸ್ತನ್ಯಪಾನ ಸಪ್ತಾಹದ ಶೀರ್ಷಿಕೆಯ ಕುರಿತು ಮಾತನಾಡಿ, ತಾಯಿಯ ಹಾಲು ಮಗುವಿಗೆ ಅಮೃತವಿದ್ದಂತೆ. ಹಾಲುಣಿಸುವುದು ಕೇವಲ ತಾಯಿಯ ಜವಾಬ್ದಾರಿ ಅಲ್ಲದೇ ಕುಟುಂಬ ಹಾಗೂ ಸಮಾಜದ ಎಲ್ಲರ ಬೆಂಬಲವೂ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಡಾ.ಗೀತಾಂಜಲಿ ಕಟಗೇರಿ ಇವರು ಹಾಲುಣಿಸುವ ವಿಧಾನಗಳು, ಅದರಿಂದ ತಾಯಿಗೆ, ಮಗುವಿಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆಗುವ ಪ್ರಯೋಜನಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಕಾಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ತನ್ಯಪಾನ ಮಹತ್ವದ ಕಿರುಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸಭಿಕರೂ ಸೇರಿ ಸ್ತನ್ಯಪಾನ ಮಹತ್ವದ ಅರಿವನ್ನು ಮೂಡಿಸುವುದರ ಬಗ್ಗೆ ಬಿ.ಪಿ.ಎನ್.ಐ ವತಿಯಿಂದ ಪ್ರಮಾಣವಚನವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬಿ.ಪಿ.ಎನ್.ಐ. ಸದಸ್ಯರಾದ ಡಾ.ಜಯಶ್ರೀ ಅವರಸಂಗ, ಸಂತೋಷ ಸಜ್ಜನ, ವನಿತಾ ಯು.ಬಿ,. ಶ್ರೀದೇವಿ ತೇಲಿ ಇತರರು ಇದ್ದರು.