ಕೊಳ್ಳೇಗಾಲದ ಸರ್ಕಾರಿ ಸಾರಿಗೆ ಬಸ್ ಘಟಕದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

| Published : Nov 20 2024, 12:33 AM IST

ಸಾರಾಂಶ

ಜೆಎಸ್‌ಎಸ್ ನರ್ಸಿಂಗ್ ಶಾಲೆ, ಕೊಳ್ಳೇಗಾಲ ಮತ್ತು ನಗರ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಕೊಳ್ಳೇಗಾಲದ ಕೆಎಸ್ಆರ್‌ಟಿಸಿ ಕಚೇರಿಯ ಸಿಬ್ಬಂದಿಗೆ ಮಧುಮೇಹ ತಪಾಸಣಾ ಶಿಬಿರ ಜರುಗಿತು.

ಉತ್ತಮ ಜೀವನ ಶೈಲಿ ಅನುಸರಿಸಿ: ಡಾ.ಗೋಪಾಲ್ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಜೆಎಸ್‌ಎಸ್ ನರ್ಸಿಂಗ್ ಶಾಲೆ, ಕೊಳ್ಳೇಗಾಲ ಮತ್ತು ನಗರ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಕೊಳ್ಳೇಗಾಲದ ಕೆಎಸ್ಆರ್‌ಟಿಸಿ ಕಚೇರಿಯ ಸಿಬ್ಬಂದಿಗೆ ಮಧುಮೇಹ ತಪಾಸಣಾ ಶಿಬಿರ ಜರುಗಿತು.ಮಧುಮೇಹ ತಪಾಸಣಾ ಶಿಬಿರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗ ಹೆಚ್ಚಾಗಿ ಕಂಡುಬರುತ್ತಿದ್ದು, ಎಲ್ಲರೂ ಉತ್ತಮ ಜೀವನ ಶೈಲಿಯ ಕಡೆಗೆ ಬದಲಾಯಿಸಿಕೊಳ್ಳಬೇಕು, ಸಮಯಕ್ಕೆ ಸರಿಯಾಗಿ ರಕ್ತಪರೀಕ್ಷೆ, ಆರೋಗ್ಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯತನ ತೋರಿಸಬಾರದು ಎಂದರು.ಡಾ.ನಾಗೇಂದ್ರ ಮಾತನಾಡಿ, ಹಣಕ್ಕಿಂತ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಮಧುಮೇಹಿಗಳು ಗಮನಹರಿಸಬೇಕು, ಭಾರತವನ್ನು ಬಾಧಿಸುತ್ತಿರುವ ಕಾಯಿಲೆಯಲ್ಲಿ ಮಧುಮೇಹವು ಅಗ್ರಸ್ಥಾನದಲ್ಲಿದೆ, ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವುದು ಹಾಗೂ ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ, ಅಲ್ಲದೆ ಯಾವುದೇ ವಯೋಮಾನದ ಮಿತಿಯಿಲ್ಲದೆ ಬಾಧಿಸುವ ಕಾಯಿಲೆಯಾಗಿದ್ದು, ಪ್ರಸ್ತುತ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಅತಿ ಹೆಚ್ಚು ಮಧುಮೇಹಿಗಳು ತುತ್ತಾಗಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಅತ್ಯಂತ ಅವಶ್ಯಕ ಎಂದರು.ಘಟಕ ಮೇಲ್ವಿಚಾರಕ ಲಿಂಗರಾಜು, ಜೆಎಸ್‌ಎಸ್ ನರ್ಸಿಂಗ್ ಶಾಲೆ ಪ್ರಾಂಶುಪಾಲ ಹೇಮೇಶಮೂರ್ತಿ, ಸಮುದಾಯ ಅಧಿಕಾರಿ ವರದರಾಜು, ಜೆಸಿಕಾ, ನವೀನ್ ಕುಮಾರ್, ಆರತಿ ಇನ್ನಿತರರಿದ್ದರು.