ಸಾರಾಂಶ
ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿ.ಎಮ್.ಗ್ಲೋಬಲ್ ಸ್ಕೂಲ್ ನಲ್ಲಿ ‘ನಮಗಿರುವುದು ಒಂದೇ ಭೂಮಿ, ನಮ್ಮ ಭೂಮಿಯನ್ನು ರಕ್ಷಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಜೂ. 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ರಕ್ಷಣೆ ಹಾಗೂ ಅದರ ಸುಸ್ಥಿರತೆಯ ಬಗೆಗೆ ಕಾರ್ಯತತ್ಪರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ನಮ್ಮ ಇಂದಿನ ಉತ್ತಮ ನಡೆಯೇ ನಮ್ಮನ್ನು ಕೊನೆಯವರೆಗೆ ಕಾಯುವುದು ಎಂದ ಅವರು ಪರಿಸರವನ್ನು ಉಳಿಸುವಿಕೆ ಹಾಗೂ ಸಂಪನ್ಮೂಲಗಳ ಸದ್ಬಳಕೆ ನಮ್ಮೆಲ್ಲರ ಜವಾಬ್ದಾರಿ ಎಂಬುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಥೋಮಸ್ ಸಾರಸ್ ಅವರು, ಪರಿಸರ ಸಂರಕ್ಷಣೆ ಬಗೆಗಿನ ವಿಶ್ವಸಂಸ್ಥೆಯ ಕೊಡುಗೆ ಮತ್ತು ಅವಿರತ ಪ್ರಯತ್ನವನ್ನು ನೆನಪಿಸುತ್ತಾ, ಸಭೆಯಲ್ಲಿ ನೆರೆದ ಸಮಸ್ತರಿಗೂ ನಿಸರ್ಗದೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುತ್ತಾ ಪರಿಸರವನ್ನು ಹಾನಿಮಾಡದೆ ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಒತ್ತಾಯಿಸಿದರು.ಶಾಲಾ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅವರು, ಉತ್ತಮ ಹವ್ಯಾಸ, ಜವಾಬ್ದಾರಿಯುತ ನಡೆ ಇವುಗಳೊಂದಿಗೆ ವಿದ್ಯಾರ್ಥಿಗಳು ಸಮಾಜದಲ್ಲಿ ನೇತ್ಯಾತ್ಮಕವಾಗಿ ಪ್ರಭಾವ ಬೀರುವುದರ ಜೊತೆಗೆ ಪರಿಸರ ಕಾಳಜಿಯ ಚಿಂತನೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
10ಎ ತರಗತಿಯ ವಿದ್ಯಾರ್ಥಿ ಇಶಾನ್ ಕಾರ್ಯಕ್ರಮ ನಿರೂಪಿಸಿದರು. 10ಎ ತರಗತಿಯ ನಂದಿಕಾ ಸ್ವಾಗತ ಭಾಷಣ ನಡೆಸಿಕೊಟ್ಟರು. 10 ಬಿ ತರಗತಿಯ ಅಭಿನಂದನ್ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))