ಕಲಬುರಗಿ ಜಿಮ್ಸ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

| Published : Jun 07 2024, 12:15 AM IST

ಕಲಬುರಗಿ ಜಿಮ್ಸ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಗಿಡ ನೆಡುವುದು, ಚಿತ್ರಕಲೆ ಸ್ಪರ್ಧೆ, ಮ್ಯಾರಥಾನ್ (ಪರಿಸರಕ್ಕಾಗಿ ಓಟ) ಕ್ಯಾಂಪಸ್ ಸ್ವಚ್ಛತಾ ಅಭಿಯಾನವನ್ನು ಹಾಗೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ಜಿಮ್ಸ್‍ನ ಡೀನ್ ಮತ್ತು ನಿರ್ದೇಶಕರಾದ ಡಾ. ಉಮೇಶ ಎಸ್.ಆರ್. ಅವರು ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮಗಳ ಅಗತ್ಯತೆ 2024ರ ವಿಶ್ವ ಪರಿಸರ ದಿನದ ಅಭಿಯಾನವು ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಅಜಯಕುಮಾರ ಜಿ., ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್., ಕಲಬುರಗಿ ಜಿಮ್ಸ್ ಶೈಕ್ಷಣಿಕ ರೆಜಿಸ್ಟ್ರಾರ್ ಡಾ. ಫರಖಾನಾ ಖುಶನೂದ್ ಹಾಗೂ ವಿವಿಧ ಬೋಧಕರು, ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಿನಾಚರಣೆ ಅಂಗವಾಗಿ ಜೂ.4ರಂದು energy conservation and its sustainable consumption ಎಂಬ ವಿಷಯದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ವರ್ಷದಿಂದ ಅಂತಿಮ ವರ್ಷದವರೆಗಿನ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದರು. ಜೂ.5 ರಂದು ಮ್ಯಾರಥಾನ್ ಈವೆಂಟ್‍ನಲ್ಲಿ ಸುಮಾರು 400-500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕವನ್ನು ವಿತರಿಸಲಾಯಿತು.