ಶ್ರೀಕ್ಷೇತ್ರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ವಿಶ್ವ ಗುಬ್ಬಿ ದಿನಾಚರಣೆ

| Published : Mar 23 2025, 01:31 AM IST

ಶ್ರೀಕ್ಷೇತ್ರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ವಿಶ್ವ ಗುಬ್ಬಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಪಟ್ಟಣ ಪುರಸಭೆ ವ್ಯಾಪ್ತಿ ಗಂಜಾಂ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಸಂಘದ ಪದಾಧಿಕಾರಿಗಳ ಜೊತೆ ಸಂಘದ ಯೋಜನಾಧಿಜಾರಿ ಗಣಪತಿ ಭಟ್ ನೇತೃತ್ವದಲ್ಲಿ ಪದಾಧಿಕಾರಿಗಳು ಗಿಡ ಮರಗಳಿಗೆ ನಿರುಪಯುಕ್ತ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಕತ್ತಿರಿಸಿ ಅವುಗಳಿಗೆ ಆಹಾರ ಮತ್ತು ನೀರು ಹಾಕಿ ಮರಗಳಿಗೆ ನೇತು ಹಾಕುವ ಮೂಲಕ ವಿನೂತನ ವಿಶ್ವ ಗುಬ್ಬಿ ದಿನಾಚರಣೆ ಆಚರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಶನಿವಾರ ವಿಶ್ವ ಗುಬ್ಬಿ ದಿನಾಚರಣೆಯನ್ನು ಆಚರಿಸಲಾಯಿತು.

ಪಟ್ಟಣ ಪುರಸಭೆ ವ್ಯಾಪ್ತಿ ಗಂಜಾಂ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಸಂಘದ ಪದಾಧಿಕಾರಿಗಳ ಜೊತೆ ಸಂಘದ ಯೋಜನಾಧಿಜಾರಿ ಗಣಪತಿ ಭಟ್ ನೇತೃತ್ವದಲ್ಲಿ ಪದಾಧಿಕಾರಿಗಳು ಗಿಡ ಮರಗಳಿಗೆ ನಿರುಪಯುಕ್ತ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಕತ್ತಿರಿಸಿ ಅವುಗಳಿಗೆ ಆಹಾರ ಮತ್ತು ನೀರು ಹಾಕಿ ಮರಗಳಿಗೆ ನೇತು ಹಾಕುವ ಮೂಲಕ ವಿನೂತನ ವಿಶ್ವ ಗುಬ್ಬಿ ದಿನಾಚರಣೆ ಆಚರಿಸಿದರು.

ಹಲವು ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಸಿದ ಅವರು, ಗ್ರಾಮದ ಜನರಿಗೆ ಪಕ್ಷಿ ಸಂಕುಲಗಳ ಸಂರಕ್ಷಣೆ ಕುರಿತು ಜಾಗೃತಿಗಳ ನಡೆಸಿದರು. ಸಂಘದ ಈ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಕೂಡ ಕೈ ಜೋಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಗುಬ್ಬಚ್ಚಿಗಳಿಗೆ ಪೈಪ್‌ಗಳ ಮೂಲಕ ಗೂಡುಗಳ ನಿರ್ಮಿಸಿ ಗುಬ್ಬಚ್ಚಿಗಳ ವಾಸಿಸಲು ಸ್ಥಳವಕಾಶ ನೀಡಿರುವ ಗಂಜಾಂನ ಜಯರಾಂ ಮನೆಗೂ ಭೇಟಿ ನೀಡಿ ಪ್ರಶಂಸಿಸಿದರು.

ಈ ವೇಳೆ ಮೇಲ್ವಿಚಾರಕಾರದ ಪವನ್ ಸುಜಾತ, ವಿಎಲ್‌ಇ ಆದ ಛಾಯಾ ಸೇವಾ ಪ್ರತಿನಿಧಿಗಳಾದ ಸರಸ್ವತಿ, ಗೀತಾ, ಭಾರತಿ, ಸುನೀತಾ, ಸೇರಿದಂತೆ ಇತರರು ಇದ್ದರು.

ಇಂದು ಪ್ರೇಮಕವಿ ಕೆಎಸ್‌ನ ಸಾಹಿತ್ಯ, ಕಾವ್ಯಗಾಯನ ಪ್ರಶಸ್ತಿ ಸಮಾರಂಭ

ಮಂಡ್ಯ:

ಒನಗರದ ನಾಲ್ವಡಿಕೃಷ್ಣರಾಜಒಡೆಯರ್‌ ಕಲಾ ಮಂದಿರದಲ್ಲಿ ಮಾ.23 ರಂದು ಬೆಳಗ್ಗೆ ಕೆ.ಎಸ್.ನ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮೈಸೂರು ಮಲ್ಲಿಗೆ ಕವಿ ಕಿಕ್ಕೇರಿಯ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್, ಮೈಶುಗರ್‌ ಅಧ್ಯಕ್ಷಸಿ.ಡಿ. ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್. ನಂದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಟ್ರಸ್ಟ್‌ ಅಧ್ಯಕ್ಷ ಕಿಕ್ಕೇರಿಕೃಷ್ಣಮೂರ್ತಿ ಭಾಗವಹಿಸುವರು.

ಪ್ರೊ.ಜಯಪ್ರಕಾಶ್‌ಗೌಡ ಹಾಗೂ ಡಾ.ನಾ.ದಾಮೋದರ ಶೆಟ್ಟಿ ಅವರಿಗೆ ಕೆಎಸ್ ನ ಸಾಹಿತ್ಯ ಪ್ರಶಸ್ತಿ ಹಾಗೂ ಗಾಯಕಿ ಸಂಗೀತಾಕಟ್ಟಿ ಹಾಗೂ ರಮೇಶ್‌ಚಂದ್ರ ಅವರಿಗೆ ಕೆ.ಎಸ್.ನ. ಕಾವ್ಯಗಾಯನ ಪ್ರಶಸ್ತಿ ಪ್ರದಾನ ನಡೆಯಲಿದೆ.