ವಿಶ್ವ ಪರಂಪರೆಯ ಉತ್ತಮ ಸಂಸ್ಕಾರವೇ ದೇಶದ ಸಂಪತ್ತು: ಮುಖ್ಯ ಶಿಕ್ಷಕಿ ನಿರ್ಮಲಾ

| Published : Jan 16 2024, 01:49 AM IST

ವಿಶ್ವ ಪರಂಪರೆಯ ಉತ್ತಮ ಸಂಸ್ಕಾರವೇ ದೇಶದ ಸಂಪತ್ತು: ಮುಖ್ಯ ಶಿಕ್ಷಕಿ ನಿರ್ಮಲಾ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ಹಿನ್ನೆಲೆಯುಳ್ಳ ವಿಶ್ವ ಪರಂಪರೆಯ ಉತ್ತಮ ಸಂಸ್ಕಾರವೇ ನಮ್ಮ ದೇಶದ ಸಂಪತ್ತು ಎಂದು ವಿದೇಶಿಯರಿಗೆ ಸಾರಿ ಹೇಳಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಹೇಳಿದರು.

ನರೇಗಲ್ಲ: ಸಾಂಸ್ಕೃತಿಕ ಹಿನ್ನೆಲೆಯುಳ್ಳ ವಿಶ್ವ ಪರಂಪರೆಯ ಉತ್ತಮ ಸಂಸ್ಕಾರವೇ ನಮ್ಮ ದೇಶದ ಸಂಪತ್ತು ಎಂದು ವಿದೇಶಿಯರಿಗೆ ಸಾರಿ ಹೇಳಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಹೇಳಿದರು.

ಅವರು ಸ್ಥಳೀಯ ಶ್ರೀಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ತಮ್ಮ ಜೀವಿತದ ದಿನಗಳಲ್ಲಿ ವಿದೇಶಿಗರ ಟೀಕೆ ಟಿಪ್ಪಣೆಗಳಿಗೆ ಪ್ರತಿ ಉತ್ತರದಲ್ಲಿ ನಮ್ಮ ರಾಷ್ಟ್ರದ ಬಗ್ಗೆ ಗೌರವವನ್ನು ವ್ಯಕ್ತಪಡಿಸಿ ನಿಮಗಿಂತ ನಮ್ಮ ದೇಶ ಕೆಲ ಕ್ಷೇತ್ರಗಳಲ್ಲಿ ಹಿಂದೆ ಇದ್ದರೂ ಸಹ ನಡೆ, ನುಡಿ ಹಾಗೂ ಉಡುಗೆ ತೊಡುಗೆಗಳಿಂದ ಸಾಂಸ್ಕೃತಿಕ ಹಿನ್ನೆಲೆಯುಳ್ಳ ವಿವಿಧ ಭಾಷೆ, ವಿವಿಧ ಧರ್ಮಗಳಿಂದ ಕೂಡಿದ ಅವಿಭಕ್ತ ಕುಟುಂಬದಂತಿದೆ ಎಂದು ಹೆಮ್ಮೆಯಿಂದ ಹೇಳುವ ಒಬ್ಬ ದೇಶ ಭಕ್ತರಾಗಿದ್ದರು. ಅಂತಹ ಧೀಮಂತ ಸಂತನನ್ನು ಹೊಂದಿದ ರಾಷ್ಟ ನಮ್ಮದು ಅಂತವರ ಆದರ್ಶ ವ್ಯಕ್ತಿಯ ಜೀವನ ಚರಿತ್ರೆಯನ್ನು ತಿಳಿದ ನೀವು ಸಹ ಆದರ್ಶ ಜೀವಿಗಳಾಗಿ ಬಾಳಿರಿ ಎಂದರು.

ಸಂಸ್ಥೆಯ ಸದಸ್ಯ ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ವಿದ್ಯಾರ್ಥಿ ಯುವ ಶಕ್ತಿಯಿಂದಲೆ ದೇಶದ ಪ್ರಗತಿ ಸಾಧ್ಯ. ಸ್ವಾಮಿ ವಿವೇಕಾನಂದರ ಆದರ್ಶ ಜೀವನ ನಿಮಗೆಲ್ಲ ದಾರಿ ದೀಪದಂತಿದೆ. ನೀವುಗಳೂ ಸಹ ಅವರಂತೆ ಶಿಸ್ತು, ಸಮಯ ಪ್ರಜ್ಞೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನವನ್ನು ಕಂಡುಕೊಳ್ಳಿರಿ ಎಂದು ತಿಳಿಸಿದರು.

ವಿಶ್ವಾರಾಧ್ಯ ಹಿರೇಮಠ ಸ್ವಾಮಿ ವಿವೇಕಾನಂದರ ವೇಷದಲ್ಲಿ ಎಲ್ಲರ ಮನಸೆಳೆದ. ಶಿಕ್ಷಕ ಈಶ್ವರ ಆದಿ, ಎ.ಎಂ. ಬೆಟಗೇರಿ, ಜಯಶ್ರೀ ಗಂಗರಗೊಂಡ, ಬಸವರಾಜ ತಳುಗೆರಿ ಸೇರಿದಂತೆ ಸಹ ಶಿಕ್ಷಕಿಯರು ಇದ್ದರು. ಶಿಕ್ಷಕಿ ಸುಮಾ ಕಲ್ಲೂರ ಸ್ವಾಗತಿಸಿದರು. ಶಿಕ್ಷಕಿ ಬಿಂಗಿ ನಿರೂಪಿಸಿ, ವಂದಿಸಿದರು.