ವಿಶ್ವ ನಾಯಕ ಮನಮೋಹನ್ ಸಿಂಗ್ ಕೊಡುಗೆ ಅಪಾರ: ಕೆ.ಎಸ್. ಆನಂದ್

| Published : Dec 28 2024, 12:46 AM IST

ವಿಶ್ವ ನಾಯಕ ಮನಮೋಹನ್ ಸಿಂಗ್ ಕೊಡುಗೆ ಅಪಾರ: ಕೆ.ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಭಾರತದ ಸಮಗ್ರ ಅಭಿವೃದ್ಧಿಗಾಗಿ ಆರ್ಥಿಕ ವ್ಯವಸ್ಥೆಗೆ ಒತ್ತು ನೀಡಿ ವಿಶ್ವಕ್ಕೆ ಮಾದರಿಯಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಭಾರತದ ಸಮಗ್ರ ಅಭಿವೃದ್ಧಿಗಾಗಿ ಆರ್ಥಿಕ ವ್ಯವಸ್ಥೆಗೆ ಒತ್ತು ನೀಡಿ ವಿಶ್ವಕ್ಕೆ ಮಾದರಿಯಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಡೂರು-ಬೀರೂರು ಬ್ಲಾಕ್ ಘಟಕಗಳಿಂದ ಶುಕ್ರವಾರ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ತಮ್ಮ ಕಾರ್ಯವೈಖರಿಯಿಂದ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಮನ ಮೋಹನ್ ಸಿಂಗ್ ಅವರು ದೇಶ ಕಂಡ ಮಹಾನ್ ಆರ್ಥಿಕ ತಜ್ಞ. ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಪಾರು ಮಾಡಲು ಉದಾರೀಕರಣ, ಜಾಗತೀಕರಣದತ್ತ ರಾಷ್ಟ್ರವನ್ನು ಕೊಂಡೊಯ್ಯುವ ಮೂಲಕ ವಿಶ್ವ ನಾಯಕರಾದರು. ಅವರು ರೂಪಿಸಿದ ಜನಪರ ಯೋಜನೆಗಳು ಇಂದಿಗೂ ಅವರ ಹೆಸರನ್ನು ಅಮರ ವಾಗಿಸಿವೆ. ಸಾವಿರಾರು ಕೋಟಿ ರೈತರ ಬ್ಯಾಂಕ್ ಸಾಲ‌ಮನ್ನಾ ಮಾಡಿ ಅವರಿಗೆ ಆಸರೆಯಾದರು. ನರೇಗಾದಂತಹ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬಾಗಿಲು ಮುಚ್ಚುವ ಹಂತ ತಲುಪಿದ್ದ ಗ್ರಾಮ ಪಂಚಾಯ್ತಿಗಳಿಗೆ ನೇರ ಆಡಳಿತದ ಅವಕಾಶ ಕಲ್ಪಿಸಿ ಪಂಚಾಯ್ತಿಗಳು, ವ್ಯಾಪ್ತಿಯ ಗ್ರಾಮಗಳ ಮತ್ತು ಜನರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದರು ಎಂದರು.ಈ ಸಂದರ್ಭದಲ್ಲಿ ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಪುರಸಭೆ ಹಿರಿಯ ಸದಸ್ಯ ತೋಟದ ಮನೆ ಮೋಹನ್, ಡಿ.ಎಸ್. ಉಮೇಶ್, ಯಗಟಿ ಗೋವಿಂದಪ್ಪ, ಕಂಸಾಗರ ರೇವಣ್ಣ, ಕೆ.ಜಿ.ಶ್ರೀನಿವಾಸ ಮೂರ್ತಿ, ಕೆ.ಎಸ್.ತಿಪ್ಪೇಶ್, ಕಂಠಪ್ಪ, ಎನ್.ಎಚ್. ನಂಜುಂಡಸ್ವಾಮಿ, ಸೋಮಶೇಖರ್, ಡಿಎಸ್ಎಸ್ ಮುಖಂಡ ಕೃಷ್ಣಪ್ಪ, ಲೋಕೇಶ್, ವಿನಾಯಕ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

28ಕೆಕೆಡಿಯು2.

ಕಡೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬ್ಲಾಕ್ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಸಕ ಕೆ.ಎಸ್. ಆನಂದ್ ಮತ್ತಿತರಿದ್ದರು.