ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಅಂತಾರಾಷ್ಟ್ರೀಯ ಓಝೋನ್ ದಿನಾಚರಣೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ್ ಎಚ್ ಮಾತನಾಡಿ, ಓಝೋನ್ ಪದರ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವ ಜತೆಗೆ ಭೂಮಂಡಲದಲ್ಲಿರುವ ಜೀವ ಸಂಕುಲವನ್ನು ರಕ್ಷಣೆ ಮಾಡುವ ಪದರವಾಗಿ ಕಾರ್ಯ ನಿರ್ವಹಿಸುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆದು ಮಣ್ಣು, ಸಸ್ಯಕಾಶಿ, ಜೀವರಾಶಿಗಳನ್ನು ಸಂರಕ್ಷಣೆ ಮಾಡುತ್ತದೆ. ಮನುಕುಲವು ಪ್ರಕೃತಿಗೆ ಮಾಡುತ್ತಿರುವ ಹಾನಿಕಾರಕ ಚಟುವಟಿಕೆಗಳಿಂದ ಓಝೋನ್ ಮಹಾಪದರ ನಾಶ ಆಗುತ್ತಿದೆ. ಮನುಷ್ಯ ಬಳಸುತ್ತಿರುವ ರೆಫ್ರಿಜರೇಟರ್, ಹವಾನಿಯಂತ್ರಕಗಳು ಸಾಕಷ್ಟು ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ಮನುಷ್ಯ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಪ್ರಕೃತಿಯನ್ನು ಬೆಳೆಸಿಕೊಂಡು ಓಝೋನ್ ಪದರವನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಣೆ ಮಾಡುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನ ವಿದ್ಯಾರ್ಥಿನಿಯರಿಗೆ ತಾರಾಲಯದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಯಿತು. ಇನ್ನೊವೇಶನ್ ಹಬ್‍ನ ಮೆಂಟರ್ ಆದರ್ಶ್ ಅವರು ಇನ್ನೊವೇಶನ್ ಹಬ್‍ನ ಎಲೆಕ್ಟ್ರಾನಿಕ್ಸ್, ಭೌತಶಾಸ್ತ್ರ, ರೋಬೋಟಿಕ್ಸ್ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳ ಬಗ್ಗೆ ವಿವರಿಸಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಾಜೆಕ್ಟ್‌ಗಳನ್ನು ಮಾಡಲು ಕೇಂದ್ರದಲ್ಲಿ ವ್ಯವಸ್ಥೆಗಳಿದ್ದು, ಅದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿಯರಾದ ವಂದನಾ ಗೌರಿ ಹಾಗೂ ಅಭಿಲಾಷ ಪಿ.ಕೆ ಇದ್ದರು. ಕೇಂದ್ರದ ಕ್ಯುರೇಟರ್ ಜಗನ್ನಾಥ ನಿರೂಪಿಸಿ, ಶೈಕ್ಷಣಿಕ ಸಹಾಯಕಿ ರಶ್ಮಿ ಸ್ವಾಗತಿಸಿದರು. ಕಮ್ಯೂನಿಟಿ ಮೊಬಿಲೈಸರ್ ಶಿವರಾಮ್ ಎಂ. ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))