ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಛಾಯಾ ಗ್ರಾಹಕರ ಟ್ರಸ್ಟ್ ವತಿಯಿಂದ ೧೮೫ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.ಪಟ್ಟಣದ ಹೊಸೂರು ಗೇಟ್ ಬಳಿ ಇರುವ ಪುಷ್ಪಗಿರಿ ಕನ್ವೆನ್ಷನ್ ಹಾಲಿನಲ್ಲಿ ತಾಲೂಕು ಛಾಯಾಗ್ರಾಹಕರ ಟ್ರಸ್ಟ್ ವತಿಯಿಂದ ಭಾನುವಾರ ೧೮೫ನೇ ವಿಶ್ವ ಛಾಯಾಗ್ರಾಹಕರ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ತಾಲೂಕು ಛಾಯಾಗ್ರಾಹಕರ ಟ್ರಸ್ಟ್ ಅಧ್ಯಕ್ಷ ನಂಜುಂಡಮೈಮ್ ಮಾತನಾಡಿ, ಛಾಯಾಗ್ರಹಕರ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬರಲಾಗಿದೆ. ಅದರಂತೆ ಕೊರೋನಾ ಸಂದರ್ಭದಲ್ಲಿ ಛಾಯಾಗ್ರಾಹಕರಿಗೆ ಮತ್ತು ಕೆಲ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆಯ ಕಾರ್ಯವು ಕೂಡ ಮಾಡಿದೆ. ಜೊತೆಗೆ ಛಾಯಾಗ್ರಾಹಕರ ಕುಟುಂಬದವರು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ೧ ಲಕ್ಷ ರು. ಪರಿಹಾರ ಧನವನ್ನು ಸಹ ನೀಡಿಲಾಗಿದ್ದು, ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದಂತಹ ಹಿರಿಯ ಸದಸ್ಯರನ್ನು ಗೌರವಿಸುವ ಕಾರ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಇವುಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಣತಿ ಆನಂದ್ ಛಾಯಾಗ್ರಾಹಕರ ಟ್ರಸ್ಟ್‌ಗೆ ೨೫,೦೦೦ ರುಪಾಯಿ ದೇಣಿಗೆಯನ್ನು ನೀಡಿದರು.ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಟ್ರಸ್ಟಿನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ರವಿಪ್ರಸಾದ್, ಸಹ ಕಾರ್ಯದರ್ಶಿ ತೀರ್ಥ ಪ್ರಸಾದ್, ಖಜಾಂಚಿ ಪ್ರಕಾಶ್, ನಿರ್ದೇಶಕರಾದ ಮಂಜುನಾಥ್, ಶರತ್, ಕಾರ್ತಿಕ್, ನಾಗರಾಜು, ಸ್ವಾಮಿ ಮುಂತಾದವರು ಇದ್ದರು.