ಸಾರಾಂಶ
ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ನೀಡುತ್ತಿರುವ ಹಿರಿಯ ಛಾಯಾಚಿತ್ರ ಕಲಾವಿದ ದೇವದಾಸ್ ಕಾಮತ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ನೀಡುತ್ತಿರುವ ಹಿರಿಯ ಛಾಯಾಚಿತ್ರ ಕಲಾವಿದ ದೇವದಾಸ್ ಕಾಮತ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.ಉಡುಪಿಯ ಕಾಮತ್ ವಿಡಿಯೋ ಆ್ಯಂಡ್ ಸ್ಟುಡಿಯೋ ಮಾಲೀಕರಾದ ದೇವದಾಸ್ ಕಾಮತ್ ಅವರು ಕಳೆದ 35 ವರ್ಷಗಳಿಂದ ಛಾಯಾಚಿತ್ರಗಾರರಾಗಿ ಹಾಗೂ 15 ವರ್ಷಗಳಿಂದ ಪತ್ರಿಕಾ ರಂಗದಲ್ಲಿನ ಸ್ವತಂತ್ರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನೆಯನ್ನು ಗುರುತಿಸಿ, ಎಸ್‌ಕೆಪಿಎ ಉಡುಪಿ ವಲಯದ ಅಧ್ಯಕ್ಷ ಸುಧೀರ್ ಶೆಟ್ಟಿ ನೇತೃತ್ವದಲ್ಲಿ ದೇವದಾಸ್ ಕಾಮತ್ ಮತ್ತು ಚಂದ್ರಕಲಾ ಕಾಮತ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಸಂಘದ ನಿಕಟಪೂರ್ವ ಅಧ್ಯಕ್ಷ ಜನಾರ್ದನ್ ಕೊಡವೂರು, ಮಾಜಿ ಅಧ್ಯಕ್ಷರಾದ ಸುಕುಮಾರ್ ಕುಕ್ಕಿಕಟ್ಟೆ, ಭಾಸ್ಕರ್ ಉದ್ಯಾವರ, ಅನೀಶ್ ಶೆಟ್ಟಿಗಾರ್, ಸಮಿತಿಯ ಸದಸ್ಯರಾದ ಪ್ರವೀಣ ಕೊರೆಯ, ಉದಯ ನಾಯ್ಕ್, ಪ್ರಕಾಶ್, ಪ್ರಸಾದ್ ಜತ್ತನ್, ಅಶೋಕ್, ಸತೀಶ್, ರಮೇಶ್, ಹಾಗೂ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು, ಛಾಯಾಗ್ರಾಹಕರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))