ಸಾರಾಂಶ
ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ, ಶಿಕ್ಷಕ ಡಾ.ಎ ಪಿ ಜೆ ಅಬ್ದುಲ್ ಕಲಾಂ ಜನ್ಮದಿನದ ಅಂಗವಾಗಿ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ ಬುಧವಾರ ನಡೆಯಿತು.ಬೆಟ್ಟಂಪಾಡಿ ಶಾಲೆಯ ವಿಜ್ಞಾನ ಶಿಕ್ಷಕಿ ಸಿಂಧು ವಿ.ಕೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಂಡ ಕನಸನ್ನು ಕಾರ್ಯರೂಪಕ್ಕೆ ತರುವಡೆಗೆ ಹೆಜ್ಜೆ ಹಾಕಬೇಕು, ವಿಜ್ಞಾನವು ಬರೀ ಪಠ್ಯ ವಿಷಯಕ್ಕೆ ಸೀಮಿತಗೊಳಿಸದೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಆಡಳಿತಾಧಿಕಾರಿಂ ಅಡ್ವಕೇಟ್ ಆಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಆದರ್ಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅವರನ್ನು ಮೀರಿ ಬೆಳೆಯಬೇಕು ಎಂದು ತಿಳಿಸಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ವಿಜ್ಞಾನ ಸಂಘದ ಸಂಯೋಜಕಿ ಶಿಕ್ಷಕಿ ಲಿಖಿತ ಎಂ ಎನ್ ಇದ್ದರು. ವಿದ್ಯಾರ್ಥಿಗಳಾದ ಕೃಪಾಲಿ, ಮೋಕ್ಷ, ಶ್ವೇಪಾಲಿ ಪ್ರಾರ್ಥನೆ ನೆರವೇರಿಸಿದರು, ಕೃಪಾಲಿ ಸಂವಿಧಾನದ ಪೀಠಿಕೆ ಓದಿದರು. ಲಿಬಾ ಫಾತಿಮ ಸ್ವಾಗತಿಸಿದರು. ಎನ್.ಆರ್ ಇಫಾ ವಂದಿಸಿದರು. ಆಯಿಷತ್ ಜಸ್ನ ನಿರೂಪಿಸಿದರು.