ಸಾರಾಂಶ
ತುರುವೇಕೆರೆ: ತಾಲೂಕಿನ ದಂಡಿನಶಿವರದ ಕಲಾ ಸಂಗಮ ಕ್ರಿಯೇಷನ್ಸ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಆಶ್ರಯದಲ್ಲಿ ಮಾ 27 ರಂದು ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಗೀತಗಾಯನೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಆಗಿರುವ ಈಶ್ವರ್ ದಲ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಾ. 27 ರಂದು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಕಾರ್ಯಕ್ರಮ ಆರಂಭಗೊಳ್ಳಲಿದೆ. ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ನಡೆಯುವ ಗೀತಗಾಯನದಲ್ಲಿ ರಂಗಗೀತೆ, ಜನಪದ ಗೀತೆ, ಭಾವಗೀತೆ ಗಾಯನ ಸ್ಪರ್ಧೆ ನಡೆಯಲಿದೆ. ಸಮಾಜ ಸೇವಕ ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಿ.ಎ.ಶಿವಪ್ಪ ಉದ್ಘಾಟನೆ ನೆರವೇರಿಸುವರು. ಹಿರಿಯ ಪತ್ರಕರ್ತ ದುಂಡ ಮಲ್ಲಿಕಾರ್ಜುನ್ ರವರನ್ನು ಸನ್ಮಾನಿಸಲಾಗುವುದು. ನಾಯಕ ನಟ ರಾಘವೇಂದ್ರ ಬಾಳೆ, ಎಸ್.ಹರೀಶ್ , ಬೆಂಗಳೂರಿನ ಪವಿತ್ರಾ , ಕೆ.ಚಿದಾನಂದ್, ಎಚ್.ನವೀನ್ ಸಂಗಡಿಗರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಟ್ರಸ್ಟ್ ನ ಖಜಾಂಚಿ ಕಿಶೋರ್ ದಲ, ನಿರ್ದೇಶಕರಾದ ಅಶೋಕ್ ರಾಜ್, ಚಿದಾನಂದ್, ಕಲ್ಕೆರೆ ಕೇಶವ ಉಪಸ್ಥಿತರಿದ್ದರು.