ಶ್ರೀ ಸತ್ಯಸಾಯಿ ಬಾಬಾ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

| Published : Jun 25 2025, 01:18 AM IST

ಶ್ರೀ ಸತ್ಯಸಾಯಿ ಬಾಬಾ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜಯಲಕ್ಷ್ಮೀಪುರಂನಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಜಯಲಕ್ಷ್ಮೀಪುರಂನಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು.ಶ್ರೀ ಸತ್ಯಸಾಯಿ ಬಾಬಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೋಯವಾಕ್ಯದ ಮಹತ್ವದ ಜೊತೆಗೆ ದೇಹ ಮತ್ತು ಮನಸ್ಸು ಒಗ್ಗೂಡಿಸಿ ನಮ್ಮಲ್ಲಿರುವ ಆತ್ಮವನ್ನು ಪರಮಾತ್ಮನೊಂದಿಗೆ ಕೂಡಿಸುವುದೇ ಯೋಗ, ಇದನ್ನು ನಿತ್ಯ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಾಗಿರುವುದೇ ಜೀವನದ ಸುಯೋಗವೆಂದು ತಿಳಿಸಿದರು.ಪ್ರತಿ ವಿದ್ಯಾರ್ಥಿಯು ನಿತ್ಯ ಕ್ರಮಬದ್ಧವಾಗಿ ಯೋಗಾಭ್ಯಾಸ ಮಾಡಿ ಸದೃಢ ದೇಹ ಹಾಗೂ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕುಟುಂಬಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕೆಂದು ಅವರು ಕರೆ ನೀಡಿದರು.ಆಂಗ್ಲ ಭಾಷಾ ಶಿಕ್ಷಕ ಪುರುಷೋತ್ತಮ ಅಗ್ನಿ ಹಾಗೂ ದೈಹಿಕ ಶಿಕ್ಷಕ ಲೋಕೇಶ್‌ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಆಯುಷ್‌ ಇಲಾಖೆಯ ಮಾರ್ಗಸೂಚಿಯಂತೆ ಯೋಗಾಭ್ಯಾಸವನ್ನು ಮಾಡಿ ಸಂಭ್ರಮಿಸಿದರು.