ಕಡೂರುನಾವು ಮಾಡುವ ಪೂಜೆಗಳು ದೈವತ್ವದ ಜೊತೆಗೆ ನಂಬಿಕೆ ಮತ್ತು ಆತ್ಮಸೈರ್ಯ ಹೆಚ್ಚಿಸುತ್ತವೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ವರ ಮಹಾಲಕ್ಷೀ ಪೂಜೆ ಮತ್ತು ಭಜನೋತ್ಸವ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ, ಕಡೂರು

ನಾವು ಮಾಡುವ ಪೂಜೆಗಳು ದೈವತ್ವದ ಜೊತೆಗೆ ನಂಬಿಕೆ ಮತ್ತು ಆತ್ಮಸೈರ್ಯ ಹೆಚ್ಚಿಸುತ್ತವೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು. ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡೂರು ತಾಲೂಕು ಬಿ.ಸಿ.ಟ್ರಸ್ಟ್, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸರಸ್ವತಿಪುರ ವಲಯದಿಂದ ಸರಸ್ವತಿಪುರ ಗೇಟಿನ ಶ್ರೀ ಶನೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವರ ಮಹಾಲಕ್ಷೀ ಪೂಜೆ ಮತ್ತು ಭಜನೋತ್ಸವ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಪ್ರಯತ್ನ ಮಾಡಿದ ಮೇಲೆ ದೈವ ಕೃಪೆ ಪಡೆಯಲು ಸಾಧ್ಯ ಇದಕ್ಕೆ ಪ್ರಾಮಾಣಿಕತೆ, ನಿಷ್ಠೆ, ತಪಸ್ಸಿನಂತೆ ಪ್ರಯತ್ನ ಪಟ್ಟರೆ ಯಶಸ್ವಿಗೆ ಫಲ ದೊರಕ ಬಹುದು. ಅದರೆ ಸುಮ್ಮನೆ ಕುಳಿತರೆ ಅದು ಬರುವ ಅದೃಷ್ಟವಲ್ಲ. ಕಷ್ಟದ ಸಮಯ ದಲ್ಲಿ ನಮಗೆ ಸಿಗುವ ಮಾನಸಿಕ ಧೈರ್ಯವೇ ದೈವ ಕೃಪೆ, ತಪ್ಪಿಸ್ಸಿನಂತಹ ಮನಸ್ಸಿದ್ದರೆ ದೈವ ಕೃಪೆ ಪಡೆಯಲು ಸಾಧ್ಯವಿದೆ.

ತಾಲೂಕಿನಲ್ಲಿ ಗಂಗಾಧರನಾಯ್ಕ ತಂಡ ಭಜನೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಭಜನೆ ಸಂಸ್ಕಾರವಂತರ ನ್ನಾಗಿಸುತ್ತದೆ. ನಮ್ಮನ್ನು ನಾವು ಶುದ್ಧೀ ಕರಿಸಲು ಭಜನೆ ಸಹಕಾರವಾಗಲಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಭಾಷೆ, ಗ್ರಾಮಗಳ ಸೊಗಡು ಉಳಿಸಲು ಜೊತೆಗೆ ಸಂಸ್ಕಾರವಂತರಾಗಲು ಭಜನೆ ಸಹಕಾರಿ. ಶ್ರೀ ಕ್ಷೇತ್ರದ ಹೆಗ್ಗಡೆ ಅವರ ಕನಸ್ಸಿನ ಭಜನಾ ಮೇಳಗಳು ರಾಜ್ಯದಾದ್ಯಂತ ಪಸರಿಸುತ್ತಿವೆ ಇದಕ್ಕಾಗಿ ಹೆಗ್ಗಡೆ ಅವರನ್ನು ಅಭಿನಂಧಿಸುತ್ತೆವೆ ಎಂದರು.

ಸಾನಿಧ್ಯ ವಹಿಸಿದ್ದ ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಶ್ರೀ ಆಶೀರ್ವಚನ ನೀಡಿ ಮಹಿಳೆಯರು ಸಾಮೂಹಿಕವಾಗಿ ಆಚರಿಸಿರುವ ವರಮಹಾಲಕ್ಷೀ ಪೂಜೆ ಪರಸ್ಪರ ಅರಿಶಿನ ಕುಂಕುಮ ವಿನಿಮಯ ಮಾಡುವ ಮೂಲಕ ಸಾಮಾಜಿಕ ಭಾಂಧವ್ಯ ಗಟ್ಟಿಗೊಳ್ಳುತ್ತದೆ. ಭಕ್ತಿ ಭಾವನೆಗಳಿಂದ ದೇವಾಲಯ ಅಥವಾ ಮನೆಗಳಲ್ಲಿ ನಡೆವ ಭಜನೆ ಮಹೋತ್ಸವ ಮನಸ್ಸಿಗೆ ದೈವಿಕ ಶಾಂತಿ ಮತ್ತು ಸಕಾರಾತ್ಮಕತೆ ನೀಡುತ್ತದೆ. ಈ ನಿಟ್ಟಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನೇಕ ಯೋಜನೆಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸದೃಡವಾಗಲು ಸಹಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ವರಮಹಾಲಕ್ಷೀ ಮತ್ತು ಭಜನಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮಳೆ ಬಾರದೆ ಬೆಳೆ ಇಲ್ಲದೆ ರೈತ ಕಂಗಾಲಾದ ಈ ದಿನಗಳಲ್ಲಿ ದೇವತಾ ಪೂಜಾ ಕಾರ್ಯಕ್ರಮಗಳಿಂದ ಮಳೆ ಬಂದು ಸುಖ ಶಾಂತಿ ನೆಮ್ಮದಿ ತರಲಿ ಎಂಬ ನಂಬಿಕೆಯಿಂದ ಶ್ರೀ ಕ್ಷೇತ್ರವು ಯಾವುದೇ ಜಾತಿ ಮತಗಳಿಲ್ಲದೆ ಎಲ್ಲರೂ ಮಾನವ ಜಾತಿ ಎಂದು ಪರಿಗಣಿಸಿ ಸಾಮೂಹಿಕ ಪೂಜೆ ನೆರವೇರಿಸಿ ರುವುದು ಸಮಾಜಕ್ಕೆ ಸಮಾನತೆ ಸಾರುತ್ತದೆ. ಶ್ರೀ ಕ್ಷೇತ್ರದ ನೂರಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದಿದ್ದು ತಾಲೂಕಿ ನಲ್ಲಿ ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಇದರ ಉಪಯೋಗ ಪಡೆಯುತ್ತಿರುವುದು ಒಂದು ದಾಖಲೆ. ಸರ್ಕಾರ ನಿರ್ವಹಿಸ ದಂತಹ ಯೋಜನೆಗಳನ್ನು ಶ್ರೀ ಕ್ಷೇತ್ರ ಜನರಿಗೆ ನೀಡಿದೆ ಎಂದರೆ ತಪ್ಪಾಗಲಾರದು ಎಂದರು.

ಶ್ರೀ ಕ್ಷೇತ್ರದ ಬಿ.ಸಿ.ಟ್ರಸ್ಟಿನ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಯೋಜನೆಯ ಮಾಹಿತಿ ವಿಸ್ತಾರವಾಗಿ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು.

ವರಮಹಾಲಕ್ಷೀ ಪೂಜಾ ಸಮಿತಿ ಗೌರವಾಧ್ಯಕ್ಷ ಚನ್ನಾಪುರ ಚಂದ್ರಪ್ಪ, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಪ್ರೇಮ ಕುಮಾರ್, ಸರಸ್ವತಿಪುರ ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ, ಸಿ.ವಿ. ಆನಂದ್ ಶ್ರೀ ಕ್ಷೇತ್ರದ ಯೋಜನೆಗಳ ಕುರಿತು ಮಾತನಾಡಿದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಎಲ್. ಗಂಗಾಧರನಾಯ್ಕ ಭಜನೆಗಳನ್ನು ಹಾಡಿದರು. ಮಹಿಳಾ ಒಕ್ಕೂಟಗಳ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು. ಯೋಜನಾಧಿಕಾರಿ ನಾಗವೇಣಿ ಮತ್ತು ಸಿಬ್ಬಂಧಿ ವರ್ಗದವರು ಇದ್ದರು.

27ಕೆಡಿಯು1.

ಕಡೂರು ತಾಲೂಕು ಸರಸ್ವತಿಪುರ ಗ್ರಾಮದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳು ಆಯೋಜಿದ್ದ ಸಾಮುಹಿಕ ವರಮಹಾಲಕ್ಷೀ ಪೂಜೆ ಮತ್ತು ಭಜನೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ವೈ.ಎಸ್.ವಿ ದತ್ತ ಉದ್ಘಾಟಿಸಿದರು.