ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.ಆರಾಧನೆ ಅಂಗವಾಗಿ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಅಂಗವಾಗಿ ಸುಪ್ರಭಾತ, ವಿಷ್ಣುಸಹಸ್ರನಾಮ ಪಾರಾಯಣ, ವೆಂಕಟೇಶ್ವರ ಸ್ತೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ರಥೋತ್ಸವ, ಹೊಸಪೇಟೆಯ ವಿಶ್ವನಾಥಾಚಾರ್ ಪೂಜಾರಿಂದ ಉಪನ್ಯಾಸ, ನೈವೇದ್ಯ, ಹಸ್ತೋದಕ, ರಥೋತ್ಸವ, ಸ್ವಸ್ತಿವಾಚನ, ಮಂಗಳಾರತಿ, ಝಿ ವಾಹಿನಿಯ ಸರಿಗಮಪ ಕಲಾವಿದೆ ಹೊಸಪೇಟೆಯ ಭೂಮಿಕ ಗಡದ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಮಧ್ಯಾರಾಧನೆ ಅಂಗವಾಗಿ, ಸುಪ್ರಭಾತ, ವಿಷ್ಣುಸಹಸ್ರನಾಮ ಪಾರಾಯಣ, ವೆಂಕಟೇಶ್ವರ ಸ್ತೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ರಥೋತ್ಸವ, ಹೊಸಪೇಟೆಯ ದೇವಿಭಜನಾ ಮಂಡಳಿ ಕಲಾವಿದರಿಂದ ಭಜನಾ ಕಾರ್ಯಕ್ರಮ, ರಥೋತ್ಸವ, ಬೆಂಗಳೂರಿನ ಶಿವಶಂಕರದಾಸರು ಇವರಿಂದ ಹರಿಕಥೆ ನಡೆಯಿತು.ಮಂಗಳವಾರ ಶ್ರೀ ರಾಘವೇಂದ್ರಸ್ವಾಮಿಗಳ ಉತ್ತರಾಧನೆಯ ಅಂಗವಾಗಿ ಪ್ರತಿದಿನದಂತೆ ಧಾರ್ಮಿಕ ವಿಧಿವಿಧಾನಗಳು, ರಾಯರ ಗ್ರಾಮ ಪ್ರದಕ್ಷಿಣೆಯ ನಂತರ ಸಾರ್ವಜನಿಕರಿಂದ ರಥೋತ್ಸವ ನಂತರ ನೈವೇದ್ಯ, ಹಸ್ತೋದಕ, ಸ್ವಸ್ತೀವಾಚನ, ನಂತರ ತೀರ್ಥಪ್ರಸಾದ ಸ್ವಸ್ತಿವಾಚನ, ಮಹಾಮಂಗಳಾರತಿ ನೆರವೇರಿತು.
ವೈಭವದ ರಾಘವೇಂದ್ರಸ್ವಾಮಿಗಳ ರಥೋತ್ಸವಹರಪನಹಳ್ಳಿ ಪಟ್ಟಣದ ಮಠದ ಕೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಮಂಗಳವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.ರಾಘವೇಂದ್ರ ಸ್ವಾಮಿಗಳ ಆರಾಧನೆ ಅಂಗವಾಗಿ ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿದ್ದು, ಅಂತಿಮವಾಗಿ ರಥೋತ್ಸವ ಜರುಗಿತು.ಬೆಳಗ್ಗೆ ಅಷ್ಟೋತ್ತರ, ನಂತರ ಫಲ ಪಂಚಾಮೃತ ಅಭಿಷೇಕ ಮಧ್ಯಾಹ್ನ ಮಠದ ಆವರಣದಲ್ಲಿಯೇ ಸಕಲ ಭಕ್ತರ ಮಧ್ಯೆ ರಾಯರ ರಥೋತ್ಸವ ಸಾಗಿತು. ಈ ಸಂದರ್ಭ ಭಜನೆ, ರಾಯರಿಗೆ ಸಂಬಂಧ ಪಟ್ಟ ಹಾಡುಗಳನ್ನು ಸುಶ್ರಾಯವಾಗಿ ಹಾಡಲಾಯಿತು. ರಾಯರಿಗೆ ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಈ ಸಂದರ್ಭ ಧರ್ಮಕರ್ತ ಶೇಷಗಿರಿರಾವ್, ಅರ್ಚಕ ವೆಂಕಣ್ಣಾಚಾರ್ಯ, ಎ.ಶ್ರೀನಿವಾಸಮೂರ್ತಿ, ಆಡಿಟರ್ ನಾಗರಾಜಭಟ್, ತಟ್ಟಿ ರಾಮಪ್ರಸಾದ್, ಡಾ. ವಾಸು, ವೈದ್ಯ ವಾದಿರಾಜ, ಬಾದನಹಟ್ಟಿ ಕೃಷ್ಣಮೂರ್ತಿ, ತಟ್ಟಿ ಅನಂತಶಯನ, ವಿಠಲ್ ರಾವ್, ಕಟ್ಟಿ ಜಯತೀರ್ಥ, ಗುಡಿ ಬಿಂದುಮಾದವ್, ದಂಡಿನ ಹರೀಶ, ಡಾ. ಕಟ್ಟಿ ಹರ್ಷ, ಬಿ.ಶ್ರೀನಿಧಿ, ಟಿ.ವ್ಯಾಸರಾಜ, ಕೃಷ್ಣಪ್ರಸಾದ್, ಸಂಡೂರು ಭರತ, ಅಜಿತ್ ಸಂಡೂರು, ಆರ್.ಶ್ರೀಕಾಂತ, ಬಿ.ಮಾದವರಾವ್, ಅಡುಗೆ ವೆಂಕಟೇಶ ಸೇರಿ ಅನೇಕ ವಿಪ್ರ ಸಮಾಜ ಹಾಗೂ ಇತರೆ ಸಮಾಜ ಬಾಂಧವರು ರಥೋತ್ಸವ ಕಣ್ಮುಂಬಿಕೊಂಡರು.