ಕಿಕ್ಕೇರಿಯಲ್ಲಿ ಆದಿಗುರು ಶಂಕರಾಚಾರ್ಯರ ಆರಾಧನೆ, ಪಾದುಕೆ ಪೂಜೆ

| Published : May 11 2025, 01:23 AM IST

ಕಿಕ್ಕೇರಿಯಲ್ಲಿ ಆದಿಗುರು ಶಂಕರಾಚಾರ್ಯರ ಆರಾಧನೆ, ಪಾದುಕೆ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

8ನೇ ಶತಮಾನದಲ್ಲಿ ಶಂಕರರು ಧಾರ್ಮಿಕ ತತ್ವಗಳ ಮಂಡನೆಗಳನ್ನು ಮಾಡಿದ ಫಲವಾಗಿ ದೇಶ ಇಂದಿಗೂ ಸುಭಿಕ್ಷವಾಗಿದೆ. ಆಚಾರ್ಯರು ರಚಿಸಿದ ಹ್ಮಸೂತ್ರದಭಾಷ್ಯ, ಉಪನಿಷತ್‌ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರ ಸಿದ್ಧವಾಗಿದ್ದು, ಸನಾತನ, ಹಿಂದೂಧರ್ಮ ಗಟ್ಟಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆದಿಗುರು ಶಂಕರಾಚಾರ್ಯರ ಆರಾಧನೆ, ಸಪ್ತಾಹ, ಪಾದುಕೆ ಪೂಜೆ ವಿಜೃಂಭಣೆಯಿಂದ ಪಟ್ಟಣದಲ್ಲಿ ನೆರವೇರಿತು.

ಪಟ್ಟಣದ ವಿಪ್ರ ಬಾಂಧವ ಸಮಿತಿ ಸುಬ್ಬರಾಯ ಛತ್ರದಲ್ಲಿ ವೇದಬ್ರಹ್ಮಶ್ರೀ ಅನಿಲ್‌ ಶಾಸ್ತ್ರೀ ಮಾತನಾಡಿ, 8ನೇ ಶತಮಾನದಲ್ಲಿ ಶಂಕರರು ಧಾರ್ಮಿಕ ತತ್ವಗಳ ಮಂಡನೆಗಳನ್ನು ಮಾಡಿದ ಫಲವಾಗಿ ದೇಶ ಇಂದಿಗೂ ಸುಭಿಕ್ಷವಾಗಿದೆ. ಆಚಾರ್ಯರು ರಚಿಸಿದ ಹ್ಮಸೂತ್ರದಭಾಷ್ಯ, ಉಪನಿಷತ್‌ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರ ಸಿದ್ಧವಾಗಿದ್ದು, ಸನಾತನ, ಹಿಂದೂಧರ್ಮ ಗಟ್ಟಿಗೊಳಿಸಿದೆ ಎಂದರು.

ನಿವೃತ್ತ ಶಿಕ್ಷಕ ಕೆ.ಎಸ್.ಅನಂತಸ್ವಾಮಿ ಮಾತನಾಡಿ, ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನವಾಗಿ ಆಚರಣೆ ಮಾಡುತ್ತಿರುವುದು ಸನಾತನ ಸಂಸ್ಕೃತಿಗೆ ದೊರೆತ ಗೌರವವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ಪುಷ್ಪಾರ್ಚನೆ, ಅರ್ಚನೆ, ರುದ್ರಾಭಿಷೇಕ, ಶಂಕರ ವಿಜಯ ಪಾರಾಯಣ, ಭಜಗೋವಿಂದಂ ಕೀರ್ತನೆ ಪಠಣೆ, ವಿವಿಧ ಪೂಜಾ ಕೈಂಕರ್ಯ ಜರುಗಿದವು.

ಈ ವೇಳೆ ಕೆ.ಬಿ. ವೆಂಕಟೇಶ್, ನರಸಿಂಹ, ಮಹಾಬಲ ಶರ್ಮ, ಮಹಾಬಲ ರಾವ್, ಕೆ.ಎಸ್.ಪರಮೇಶ್ವರಯ್ಯ, ಡಾ.ಕೆ.ಎಸ್. ನಂಜುಂಡಸ್ವಾಮಿ, ಕೆ.ಎಸ್.ಸತ್ಯನಾರಾಯಣ, ಕೆ.ಎಸ್.ಶಂಕರನಾರಾಯಣ, ಕೆ.ಎಸ್.ಪ್ರಭಾಕರ್, ಗಣೇಶರಾವ್, ಸೀತಾರಾಂ, ನಾಗೇಂದ್ರ, ರಾಮಣ್ಣ ಮಾಸ್ಟರ್, ಗಣೇಶರಾವ್, ಜಯಮ್ಮ, ಗಿರಿಜಮ್ಮ, ಸುಮಾ, ನಂದಿನಿ, ವೇದಾವತಿ, ಸರಸ್ವತಿ, ಸ್ವರ್ಣ, ಮೇಘಶ್ರೀ, ಭಾಗ್ಯಮ್ಮ, ವೇದಾವತಿ, ಕಲಾವತಿ ಉಪಸ್ಥಿತರಿದ್ದರು.

ಹಳೇ ದ್ವೇಷ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕನ್ನಡಪ್ರಭ ವಾರ್ತೆ ಮಂಡ್ಯ

ಹಳೇ ದ್ವೇಷದ ಹಿನ್ನೆಲೆಯಲ್ಲಿ ಐದು ಮಂದಿಯ ಯುವಕರ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ಉದಯಗಿರಿ ಬಡಾವಣೆಯ ಕಿರಣ್ ಅಲಿಯಾಸ್ ಮರಿಕೆರೆ (೨೬) ಎಂಬಾತನೇ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾನೆ.

ಈತನ ಮೇಲೆ ನಗರದ ವರ್ಧನ್, ವರುಣ್, ಮನು, ಗೋವಿಂದರಾಜು, ಮದನ್ ಅವರು ಹಲ್ಲೆ ಮಾಡಿದ ಆರೋಪಿಗಳು ಎಂದು ತಿಳಿದುಬಂದಿದೆ.

ಕಿರಣ್‌ ಮತ್ತು ವರ್ಧನ್ ಇಬ್ಬರೂ ನಗರದಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ಆಗಾಗ್ಗೆ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಕಿರಣ್ ಇತ್ತೀಚೆಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ. ಕಳೆದ ಎರಡು ಮೂರು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಮತ್ತೆ ಗಲಾಟೆ ಮಾಡಿಕೊಂಡಿದ್ದ ಕಿರಣ್‌ನನ್ನು ಹತ್ಯೆ ಮಾಡಲು ವರ್ಧನ್ ಯೋಜನೆ ರೂಪಿಸಿದ್ದನು ಎನ್ನಲಾಗಿದೆ.

ಅದರಂತೆ ಗೋಡೌನ್‌ನಲ್ಲಿ ಮಲಗಿದ್ದ ಕಿರಣ್ ಮೇಲೆ ವರ್ಧನ್ ಮತ್ತು ಇತರರು ಮಚ್ಚು, ಲಾಂಗುಗಳಿಂದ ತಲೆ, ಕೈ, ಕಾಲು ಇತರ ಕಡೆಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಗೋಡೌನ್‌ನಲ್ಲೇ ನರಳಾಡುತ್ತಿದ್ದ ಕಿರಣ್‌ಗೆ ಊಟ ಕೊಡಲು ಬಂದವರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುವನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.