ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 13ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮವು ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರದ್ಧಾಭಕ್ತಿಯಿಂದ ಅರ್ಥಪೂರ್ಣವಾಗಿ ನೆರವೇರಿತು. ಪುಣ್ಯಾರಾಧನಾ ವಿಧಿವಿಧಾನಗಳು ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ಥಳಿ ಎದುರು ನೈವೇದ್ಯ ಇಟ್ಟು ಅಷ್ಟಾವಧಾನ ಸೇವೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಮಠದ ಸದ್ಭಕ್ತರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರೀಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಭೈರವೈಕ್ಯ, ಯುಗಯೋಗಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 13ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮವು ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರದ್ಧಾಭಕ್ತಿಯಿಂದ ಅರ್ಥಪೂರ್ಣವಾಗಿ ನೆರವೇರಿತು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಪ್ರಾತಃಕಾಲ ೬ ಗಂಟೆಗೆ ಮಠದ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋ ಪೂಜೆ ನೆರವೇರಿಸುವ ಮೂಲಕ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೧೩ನೇ ಪುಣ್ಯಾರಾಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುಗ ಯೋಗಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ಥಳಿಯನ್ನು ಶ್ರೀ ಮಠದ ಆವರಣದಿಂದ ಎಂ.ಜಿ. ರಸ್ತೆಯ ಮೂಲಕ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವದ ಮೂಲಕ ಆದಿಚುಂಚನಗಿರಿ ಸಮುದಾಯ ಭವನದವರೆಗೂ ನೂರಾರು ಸದ್ಭಕ್ತರೊಡನೆ ಮೆರವಣಿಗೆಯಲ್ಲಿ ತರಲಾಯಿತು. ಪುಣ್ಯಾರಾಧನಾ ವಿಧಿವಿಧಾನಗಳು ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ಥಳಿ ಎದುರು ನೈವೇದ್ಯ ಇಟ್ಟು ಅಷ್ಟಾವಧಾನ ಸೇವೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಮಠದ ಸದ್ಭಕ್ತರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರೀಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಶಂಭುನಾಥ ಶ್ರೀಯವರ ಆಶೀರ್ವಾದ ಪಡೆದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶಂಕರ ಭಜನಾ ಮಂಡಳಿ, ಶ್ರೀ ಶನೈಶ್ವರಸ್ವಾಮಿ ಭಜನಾ ಮಂಡಳಿ, ಶ್ರೀ ಮಾರುತಿ ಭಜನಾ ಮಂಡಳಿ, ಶ್ರೀ ಛಾಯಾಪುತ್ರ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿಯವರು ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಬೆಂಗಳೂರು ವಿಜಯನಗರದ ಶ್ರೀ ತ್ರಿಲೋಕಾಧೀಶ ಸ್ವಾಮೀಜಿ, ಬೆಂಗಳೂರು ಹಂಪಿ ನಗರ ಪತಂಜಲಿ ಯೋಗಾಶ್ರಮದ ಶ್ರೀ ಪ್ರಕಾಶ್ ಯೋಗಿ ಗುರೂಜಿ, ದೊಡ್ಡಸಾಗರ ರಾಮಕೃಷ್ಣ ಆಶ್ರಮದ ಸ್ವಾಮಿ ಮೇದಾನಂದ ಸ್ವಾಮೀಜಿ, ನೆಲಮಂಗಲ ಶಿವಾನಂದ ಆಶ್ರಮದ ಶ್ರೀ ರಮಾನಂದ ಸ್ವಾಮೀಜಿ, ಕೆಂಬಾಳು ಮಠದ ಶ್ರೀ ಹಿರಿಯಣ್ಣ ಸ್ವಾಮೀಜಿ, ಶ್ರೀ ಸಾಯಿಶ್ರೀ ಕೀರ್ತಿನಾಥ ಸ್ವಾಮೀಜಿ, ವಿವಿಧ ಮಠಗಳ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶ್ ಗೌಡ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಜನಪ್ರತಿನಿಽಗಳು ಹಾಗೂ ಸಮಾಜ ಮುಖಂಡರು ಭಾಗವಹಿಸಿದ್ದರು.-------------* (ಬಾಕ್ಸ್): ಭಕ್ತಿ ಭಾವದ ಮುತ್ತಿನ ಪಲ್ಲಕ್ಕಿ ಮೆರವಣಿಗೆಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೧೩ನೇ ಪುಣ್ಯಾರಾಧನೆ ಅಂಗವಾಗಿ ನಗರದಲ್ಲಿ ಸಂಜೆ ಭಕ್ತಿ ಭಾವದ ಪುತ್ಥಳಿಯ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ದಿವ್ಯ ಜ್ಯೋತಿಯೊಂದಿಗೆ ಮೆರವಣಿಗೆ ನಡೆಯಿತು.ಹೇಮಾವತಿ ಪ್ರತಿಮೆಯಿಂದ ಹೊರಟ ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಭಕ್ತರು ಹಳೆಯ ಬಸ್ ನಿಲ್ದಾಣ ರಸ್ತೆ, ಎನ್.ಆರ್.ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಶಂಕರಮಠ ರಸ್ತೆ ಮಾರ್ಗವಾಗಿ ಆದಿಚುಂಚನಗಿರಿ ಸಮುದಾಯ ಭವನ ತಲುಪಿತು. ದಾರಿಯುದ್ದಕ್ಕೂ ಶ್ರೀಮಠದ ಭಕ್ತರು ನಾದಸ್ವರಗಳೊಂದಿಗೆ ಹೆಜ್ಜೆ ಹಾಕುತ್ತಾ ಭಕ್ತಿ ಮೆರೆದರು. ಸಂಜೆಯ ಮೆರವಣಿಗೆಗೆ ಮಳೆಯ ಸಿಂಚನ ಮೆರುಗು ನೀಡಿತು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಸುಮುಖ ರಘು, ನಾಯಕರಹಳ್ಳಿ ಮಂಜೇಗೌಡ, ಶಿವರಾಮೇಗೌಡ ಇತರರು ಇದ್ದರು.