ರಾಮೇಶ್ವರನ ದೇಗುಲದಲ್ಲಿ ಶಿವನ ಆರಾಧನೆ

| Published : Feb 27 2025, 12:35 AM IST

ಸಾರಾಂಶ

ಪಟ್ಟಣದ ಚಿಕ್ಕೆರೆ ಹತ್ತಿರದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರದ್ದಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ತರೀಕೆರೆ: ಪಟ್ಟಣದ ಚಿಕ್ಕೆರೆ ಹತ್ತಿರದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರದ್ದಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ಫಲ ಪಂಚಾಮೃತ ಸಹಿತ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, 34ನೇ ಶ್ರೀ ರುದ್ರಹೋಮವನ್ನು ಏರ್ಪಡಿಸಲಾಗಿತ್ತು.

ಶ್ರೀ ಸ್ವಾಮಿಯವರಿಗೆ ವಿಶೇಷ ಹೂವಿನ ಅಲಂಕಾರ, ಶ್ರೀ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶ್ರೀಸೂಕ್ತ. ಪುರುಷಸೂಕ್ತ, ಶ್ರೀ ಗಣಪತಿ ಅಷ್ಟೋತ್ತರದೊಂದಿಗೆ ಪೂಜೆ ನೆರವೇರಿಸಲಾಯಿತು. ಶ್ರೀ ರುದ್ರಹೋಮದ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.

ಅರ್ಚಕರಾದ ರಾಜು ಅವರು ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿಯವರಿಗೆ ವಿಶೇಷ ಹೂವಿನ ಅಲಂಕಾರ ನೆರವೇರಿಸಿದ್ದರು. ಶ್ರೀ ರುದ್ರಹೋಮದ ಸೇವಾಕರ್ತರು ದಿ.ಟಿ.ಹೆಚ್.ಸಗನಪ್ಪನವರ ಮಗಳು ಮಂಜುಳಮ್ಮ ಮತ್ತು ಅಳಿಯಂದಿರಾದ ಗೋವಿಂದಶೆಟ್ಟಿ ಮತ್ತು ಮಕ್ಕಳು ತರೀಕೆರೆ, ಶ್ರಿ ಪ್ರಸನ್ನರಾಮೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರು ಟಿ.ಎನ್.ಚೇತನ್ ಮತ್ತು ಸಮಿತಿ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.

ಕೊಪ್ಪ: ವಿವಿಧೆಡೆ ಸಂಭ್ರಮದ ಶಿವನ ಹಬ್ಬ

ಕೊಪ್ಪ: ಪಟ್ಟಣದ ಹೊರವಲಯದ ಹುಲ್ಲುಮಕ್ಕಿ ಎನ್.ಕೆ. ರಸ್ತೆಯ ಶ್ರೀ ಗಂಗಾಧರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಬುಧವಾರ ಬೆಳಿಗ್ಗೆ ದೇವರಿಗೆ ಎಳನೀರು ಅಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ಗಂಗಾತೀರ್ಥ ವಿತರಣೆ, ಮಹಾಮಂಗಳಾರತಿ, ಸಂಜೆ ೬ಕ್ಕೆ ಶತರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಸಂಜೆ ೭ರಿಂದ ಮಹಾಲಕ್ಷ್ಮಿ ಭಜನಾ ಮಂಡಳಿ ಮತ್ತು ಶ್ರೀನಿಕೇತನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ದೋರಗಲ್ಲು ಸಮೀಪದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ, ದುದ್ರಾಭಿಷೇಕ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಭಜನೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಹೊರವಲಯದ ಕಾಚ್‌ಕಲ್‌ನ ದುರ್ಗಾ ಪರಮೇಶ್ವರಿ ಮತ್ತು ಪಂಚಲಿಂಗೇಶ್ವರ ಭೂತರಾಯ ಕ್ಷೇತ್ರವಾದ ಶ್ರೀಕ್ಷೇತ್ರ ಗಬ್ಬಾನೆಯಲ್ಲಿ ಶಿವರಾತ್ರಿ ಪ್ರಯುಕ್ತ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ೧೨ರಿಂದ ೧೨.೩೦ರವರೆಗೆ ನಡೆದ ಮಹಾಮಂಗಳಾರತಿಯ ನಂತರ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣದ ಮೇಲಿನಪೇಟೆಯ ಕಾಶಿವಿಶ್ವನಾಥ ದೇವಸ್ಥಾನ, ಚಿಟ್ಟೆಮಕ್ಕಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹರಿಹರಪುರ ಸಮೀಪದ ಚೆನ್ನೆಕಲ್ಲಿನ ಶ್ರೀ ಚನ್ನಕೇಶ್ವರ ದೇವಸ್ಥಾನ, ಬಾಳಗಡಿಯ ಶ್ರೀ ನಾಗದೇವತಾ ಸನ್ನಿಧಿ, ತಾಲೂಕಿನ ಕಲ್ಲುಗುಡ್ಡೆಯ ಬೆಳ್ಳಿಹಕ್ಲು ಶ್ರೀ ಮಹಾಗಣಪತಿ ಸಹಿತ ಉಮಾಮಹೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಅದ್ಧೂರಿಯ ಶಿವರಾತ್ರಿ ನೆರವೇರಿತು.