ಕಾವೇರಿ ಮತ್ತು ನಾಲ್ವಡಿ ಮಂಡ್ಯ ಜಿಲ್ಲೆಯ ಜನರ ಪಾಲಿಗೆ ನಿತ್ಯ ಸ್ಮರಣೀಯರು. ಕಾವೇರಿ ಜೀವದಾತೆಯಾದರೆ, ನಾಲ್ವಡಿಯವರು ಅನ್ನದಾತರು. ನದಿಯನ್ನು ಸ್ಮರಿಸುತ್ತಾ, ನಾಲ್ವಡಿ ಅವರನ್ನು ನೆನೆಯುತ್ತಾ ಪೂಜೆಯನ್ನು ಸಲ್ಲಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ ವತಿಯಿಂದ ಅ.೧೭ರಂದು ಕಾವೇರಿ ತೀಥೋದ್ಭವದ ಅಂಗವಾಗಿ ನಗರದಲ್ಲಿ ಕಾವೇರಿ ಮಾತೆಗೆ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಹೇಳಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಕಾವೇರಿ ಮಾತೆಗೆ ಪೂಜೆ ನೆರವೇರಿಸುವರು. ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ, ಮಾಜಿ ಶಾಸಕ ಎಂ.ಶ್ರೀನಿವಾಸ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೂಜೆ ಸಲ್ಲಿಕೆ ಬಳಿಕ ಕಾವೇರಿ ಉದ್ಯಾನವನದ ಪಕ್ಕದ ರಸ್ತೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.

ಕಾವೇರಿ ಮತ್ತು ನಾಲ್ವಡಿ ಮಂಡ್ಯ ಜಿಲ್ಲೆಯ ಜನರ ಪಾಲಿಗೆ ನಿತ್ಯ ಸ್ಮರಣೀಯರು. ಕಾವೇರಿ ಜೀವದಾತೆಯಾದರೆ, ನಾಲ್ವಡಿಯವರು ಅನ್ನದಾತರು. ನದಿಯನ್ನು ಸ್ಮರಿಸುತ್ತಾ, ನಾಲ್ವಡಿ ಅವರನ್ನು ನೆನೆಯುತ್ತಾ ಪೂಜೆಯನ್ನು ಸಲ್ಲಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ನುಡಿದರು.

ಗೋಷ್ಠಿಯಲ್ಲಿ ಮಹೇಶ, ದ.ಕೋ.ಹಳ್ಳಿ ಚಂದ್ರಶೇಖರ್, ದೇವೇಗೌಡ, ಬಸವರಾಜು, ಜಗದೀಶ್ ಇದ್ದರು.

ನಾಳೆ ಮಂಡ್ಯ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-07 ಐಪಿ ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.16ರಂದು ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ವಿದ್ಯುತ್‌ ನಲ್ಲಿ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಎಫ್-07 ಫೀಡರ್‌ನ ಪ್ರದೇಶಗಳಾದ ನೆಹರು ನಗರ, ಸುಭಾಷ್ ನಗರ, ಅಶೋಕನಗರ, ವಿವಿ ರೋಡ್, ವಿದ್ಯಾನಗರ, ಆಸ್ಪತ್ರೆ ರೋಡ್, ವಿವೇಕಾನಂದ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯಮಂಡ್ಯ:

66/11 ಕೆ.ವಿ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್ -01 ಮಾಚಹಳ್ಳಿ & ಎಫ್ -09 ಹುಳ್ಳೆನಹಳ್ಳಿ ಫೀಡರ್ ಗಳ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.16 ರಂದು ಬೆಳಗ್ಗೆ 9.30 ರಿಂದ ಸಂಜೆ 6.30ರವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ.ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದ ಎಫ್ -01 ಮಾಚಹಳ್ಳಿ & ಎಫ್ -09 ಹುಳ್ಳೆನಹಳ್ಳಿ ಫೀಡರ್ ಗಳಲ್ಲಿನ ಪ್ರದೇಶಗಳಾದ ವಿ.ಸಿ ಫಾರಂ, ಟಿ. ಮಲ್ಲಿಗೆರೆ, ಮಾಡಚಾಕನಹಳ್ಳಿ, ಮಾಚಹಳ್ಳಿ, ಹಾಡ್ಯ, ಹುಳ್ಳೆನಹಳ್ಳಿ, ದೇವರಾಯಪಟ್ಟಣ, ಜಯಪುರ, ಹೆಚ್ಚೇಗೌಡನಕೊಪ್ಪಲು, ಹುಲಿಕೆರೆ, ಹುಲಿಕೆರೆಕೊಪ್ಪಲು, ಮತ್ತು ಕಮ್ಮನಾಯಕನಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೊತ್ತತ್ತಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.