ಶಕ್ತಿ ದೇವತೆಗಳಿಗೆ ಪೂಜೆ, ಮಹಾಗಣಪತಿ ಹೋಮ

| Published : Sep 05 2025, 01:00 AM IST

ಸಾರಾಂಶ

ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಹಾಗೂ ಮಹಾಗಣಪತಿ ಹೋಮವನ್ನು ಗುರುವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹರಿಹರ

ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಹಾಗೂ ಮಹಾಗಣಪತಿ ಹೋಮವನ್ನು ಗುರುವಾರ ನಡೆಸಲಾಯಿತು.

ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾ ಗಣಪತಿ ಸಮಿತಿಯಿಂದ ನಗರದ ಪೇಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಸುಂದರವಾದ ಮಂಟಪಕ್ಕೆ ನಗರದ ಶಕ್ತಿ ದೇವತೆಗಳಾದ ಗ್ರಾಮದೇವತೆ ಶ್ರೀ ಊರಮ್ಮ ದೇವಿ, ಶ್ರೀ ಏಕನಾಥೇಶ್ವರಿ ಅಮ್ಮ, ಶ್ರೀ ಕಾಶಿ ದುರ್ಗಮ್ಮ ಹಾಗೂ ಶ್ರೀ ಪೇಟೆ ಆಂಜನೇಯ ಸ್ವಾಮಿ ದೇವರನ್ನು ಆಯಾ ದೇವಸ್ಥಾನದಿಂದ ಅದ್ದೂರಿಯಾಗಿ ಮೆರವಣಿಗೆ ಮೂಲಕ ತರಲಾಯಿತು. ಎಲ್ಲಾ ದೇವರನ್ನು ಸಮಿತಿಯಿಂದ ಸ್ವಾಗತಿಸಿ, ನಂತರ ಮಂಟಪದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಬೆಳಿಗ್ಗೆ ೧೦ಕ್ಕೆ ಶ್ರೀ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ. ಮನ್ನೂ ಸೂಕ್ತ ಹೋಮ,ದೇವಿ ಸೂಕ್ತ ಹೋಮವನ್ನು ಕೋಟೆ ಕೆರಿಯ ಗುರುದತ್ತ ಶಾಸ್ತ್ರಿ ಅವರ ತಂಡದವರು ನಡೆಸಿಕೊಟ್ಟರು.

ಮಧ್ಯಾಹ್ನ ೧ಕ್ಕೆ ಹೋಮದ ಪೂರ್ಣಹುತಿಯನ್ನು ನಗರದ ಗಣ್ಯರ ಹಾಗೂ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ನಂತರ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ವೇಳೆ ಜಿಪಂ ಮಾಜಿ ಅದ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಇನೈಸೈಟ್ ಸಂಸ್ಥಾಪಕ ಜಿ.ಬಿ ವಿನಯ್ ಕುಮಾರ್, ನಗರಸಭೆ ಸದಸ್ಯ ಎಬಿಎಂ ವಿಜಯ್ ಕುಮಾರ್, ನಲ್ಲೂರು ನಾಗರಾಜ್, ಹಿಂಡಸಘಟ್ಟ ಲಿಂಗರಾಜ್, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್, ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್‌ಗೌಡ ಪಾಟೀಲ್, ಅಲಂಕಾರ ಸಮಿತಿಯ ಅಧ್ಯಕ್ಷ ನಾಗರಾಜ್ ರೋಖಡೆ, ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಮೀಳಾ ನಲ್ಲೂರು, ಹಿಂದೂ ಮಹಾ ಗಣಪತಿ ಟ್ರಸ್ಟ್ ಗೌರವಾಧ್ಯಕ್ಷ ಶಶಿಕುಮಾರ್ ಮೆಹರ‍್ವಾಡೆ, ಅಧ್ಯಕ್ಷ ಬಸವನಗೌಡ್ರು, ಕಾರ್ಯದರ್ಶಿ ಹೆಚ್. ದಿನೇಶ್, ಉಪಾದ್ಯಕ್ಷ ಸ್ವಾತಿ ಹನುಮಂತ, ಸದಸ್ಯರಾದ ಕಾರ್ತಿಕ್, ಶಿವಕುಮಾರ್, ಚಂದ್ರಕಾಂತಗೌಡ, ಮಹೇಶ್, ಸಂತೋಷ, ವಿನಯ್, ಅಕ್ಷಯ್, ಪ್ರಶಾಂತ್, ಅರಣ್ಯ, ಚೇತನ್ ಮುರ್ಖಲ್,ಆದಿತ್ಯ ಮೆಹರ‍್ವಾಡೆ, ರವಿ ತಾವರಗಿ, ತಿಪ್ಪೇಶಿ, ಕರೀಬಸಪ್ಪ ಕಂಚಿಕೇರಿ, ರೇವಣಪ್ಪ, ರವಿಶಂಕರ್ ಗದ್ಗಿಮಠ, ಎಸ್.ಕೃಷ್ಣ ಮೂರ್ತಿ ಶ್ರೇಷ್ಠಿ, ರಾಘವೇಂದ್ರ ಉಪಾಧ್ಯ, ಹೆಚ್.ಸಿ. ಕೀರ್ತಿಕುಮಾರ್, ರೂಪಾ ಶಶಿಕಾಂತ್, ರಶ್ಮಿ ಮೆಹರ‍್ವಾಡೆ, ಸಾಕ್ಷಿ ಶಿಂಧೆ, ಸುಮನ್ ಖಮ್ಮಿತ್ಕರ್, ಕೌಶಲ್ಯ ಬಾಯಿ ರೋಖಡೆ, ಮಂಜುಳಾ ಅಗಡಿ, ಆಶಾ ಕುಂಟೆ, ಅಶ್ವಿನಿ, ಸಾಕ್ಷಿ, ಶಿಲ್ಪ, ಜಾನಕಿ, ಶ್ರೀ ಲಕ್ಷ್ಮಿ, ಕವಿತ, ಸುನಿತಾ ಧನರಾಜ್, ಶಕುಂತಲಾ, ಕಾವೇರಿ ಕುಂಟೆ, ಸವಿತ ರೋಖಡೆ, ಸ್ನೇಹ, ಸರಸ್ವತಿ, ಲಕ್ಷ್ಮಿ, ರೂಪಾ, ನಮ್ರತಾ, ಇಂದ್ರಣಿ ಶಿಂದೆ, ರೂಪ ನಾಗರಾಜ್, ಶ್ರುತಿ, ರೇಖಾ, ಶ್ವೇತಾ ಪ್ರಶಾಂತ್, ಮಂತಮ್ಮ ಇತರರು ಇದ್ದರು.