ಸಾರಾಂಶ
ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಳೆ ನಿಂತು ಎಷ್ಟೋ ದಿನಗಳು ಕಳೆದರೂ ಚಿಕ್ಕಮಗಳೂರು ನಗರದ ಗುಂಡಿಮಯ ರಸ್ತೆಗಳಿಗೆ ಇನ್ನೂ ಮುಚ್ಚುವ ಭಾಗ್ಯ ದೊರೆತಿಲ್ಲ. ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ರೋಸಿ ಹೋದ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ವಿಪರೀತ ಮಳೆಯಿಂದ ಚಿಕ್ಕಮಗಳೂರು ನಗರದ ಹಲವೆಡೆ ಗುಂಡಿ ಬಿದ್ದು ರಸ್ತೆಗಳು ಹಾಳಾಗಿದ್ದು, ಇದೀಗ ವಾಹನ ಸವಾರರ ತಾಳ್ಮೆ ಕಟ್ಟೆ ಹೊಡೆದಿದ್ದು 3 ದಿನದಲ್ಲಿ ಗುಂಡಿ ಮುಚ್ಚದಿದ್ರೆ ಹಾಲು ತುಪ್ಪ ಬಿಡುವ ಎಚ್ಚರಿಕೆಯನ್ನು ನಗರಸಭೆಗೆ ಕೊಟ್ಟಿದ್ದಾರೆ.ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಪಲಾವ್, ವಡೆ, ನಿಂಬೆಹಣ್ಣು, ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿ ಪ್ರತಿಭಟನಾರ್ಥಕವಾಗಿ ಸ್ಥಳದಲ್ಲಿ ಘೋಷಣೆ ಕೂಗಿದ್ದಾರೆ. ನಗರಸಭೆ ಯುಜಿಡಿ ಕೆಲಸ ಕ್ಕೆಂದು ಈ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು. ನಂತರ ಆ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿಯಾಗಿದ್ದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಹಲವಾರು ಬೈಕ್ ಗಳು ಅಪಘಾತವಾಗಿ ನೂರಾರು ಜನರಿಗೆ ಗಾಯಗಳಾಗಿವೆ. ಪೂಜೆ ಸಲ್ಲಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. 9 ಕೆಸಿಕೆಎಂ 5ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಪಲಾವ್, ವಡೆ, ನಿಂಬೆಹಣ್ಣು, ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿರುವುದು.