ಶ್ರೀದೇವಿ ಆರಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಿ

| Published : Oct 14 2024, 01:15 AM IST

ಶ್ರೀದೇವಿ ಆರಾಧನೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವನು ಬದುಕಿನುದ್ದಕ್ಕೂ ನ್ಯಾಯ ನೀತಿ, ಧರ್ಮದ ಹಾದಿಯಲ್ಲಿ ಜೀವನ ನಡೆಸಿದ್ದಾದರೆ ದೈವಿ ಸ್ವರೂಪನಾಗುತ್ತಾನೆ

ಗದಗ: ಶ್ರೀ ದೇವಿಯ ಆರಾಧನೆ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಐ.ಕೆ. ಕಮ್ಮಾರ ಹೇಳಿದರು.

ನಗರದ ಶ್ರೀಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ನಡೆದ ದಸರಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಮಾನವನು ಬದುಕಿನುದ್ದಕ್ಕೂ ನ್ಯಾಯ ನೀತಿ, ಧರ್ಮದ ಹಾದಿಯಲ್ಲಿ ಜೀವನ ನಡೆಸಿದ್ದಾದರೆ ದೈವಿ ಸ್ವರೂಪನಾಗುತ್ತಾನೆ.ಇಂತಹ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವದರಿಂದ ಉತ್ತಮ ಸಂಸ್ಕಾರ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಸಹಾಯಕ ಅಭಿಯಂತರ ಎಚ್.ಎ. ಬಂಡಿವಡ್ಡರ ಮಾತನಾಡಿ, ಮಠದ ಪರಿಸರಕ್ಕೆ ಪೂರಕವಾದ ಪ್ರಾಥಮಿಕ ಸೌಲಭ್ಯಗಳಾದ ರಸ್ತೆ, ಚರಂಡಿ, ನಿರ್ಮಾಣ ಕಾರ್ಯಗಳು ತ್ವರಿತಗತಿಯಲ್ಲಿ ಮಾಡಿಸುತ್ತೇವೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀಶಂಕರಾನಂದ ಸ್ವಾಮಿಗಳು ಮಾತನಾಡಿ, ಕಾಲಕ್ಕೆ ತಕ್ಕಂತೆ ದೇವಿಯು ಅಸುರ ಶಕ್ತಿಗಳ ಸಂಹಾರ ಗೈಯಲು ಒಂಬತ್ತು ಅವತಾರಗಳನ್ನು ತಾಳಿ ತನ್ನ ಇರುವಿಕೆ ನೀಡಿದ್ದಾಳೆ. ಆದ ಕಾರಣ ಮಾನವರು ಸದಾವಕಾಲ ದೇವಿಯ ಆರಾಧನೆ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು.

ಪ್ರವಚನಕಾರ ಶರಣ ಮಲ್ಲೇಶಪ್ಪ ಅಣ್ಣಿಗೇರಿ, ನಗರಸಭೆ ಆಯುಕ್ತ ಮಹೇಶ ಪೋತದಾರ, ಸಿಂಧು, ಎಂ.ಟಿ. ಸೂರಿ, ಬಿ.ಬಿ. ಹಡಪದ, ಎಸ್.ಜಿ. ಕೋತಂಬ್ರಿ, ಎಸ್.ಐ. ಚಳಗೇರಿ, ಬಸವರಾಜ ಹಡಪದ, ಕಾಮನಗೌಡ್ರ, ಕೆ.ಜಿ. ಕೊಳ್ಳಿ, ಉಮೇಶ ಅಬ್ಬಿಗೇರಿ ಸೇರಿದಂತೆ ಇತರರು ಇದ್ದರು. ಶ್ರೀಕಾಂತ ಹೂಲಿ, ಅಮರೇಶ ಕರಬಿಷ್ಠಿ ಸಂಗೀತ ಸೇವೆ ನೀಡಿದರು. ಪ್ರಸಾದ ಸೇವೆ ನಾಗರತ್ನಾ ಮುಕ್ತಿನಾಥ ಹಾಗೂ ಶ್ರೀ ಮುಕ್ಕಣ್ಣೇಶ್ವರ ಗೆಳೆಯರ ಸೇವಾ ಬಳಗದವರು ವಹಿಸಿಕೊಂಡಿದ್ದರು. ಕೆ.ಬಿ. ಕೊಣ್ಣೂರ ನಿರೂಪಿಸಿದರು. ಆರ್.ಎಫ್. ಹಾಳಕೇರಿ ಸ್ವಾಗತಿಸಿದರು. ಎಸ್.ಕೆ. ಮಾಗುಂಡ ವಂದಿಸಿದರು.