ಕುಸ್ತಿ ಸಮಾರಂಭ ರದ್ದು: ಸಂತಾಪ

| Published : Dec 28 2024, 12:45 AM IST

ಸಾರಾಂಶ

ಪಟ್ಟಣದ ಶಿವಾಜಿ ನಗರದ ಶ್ರೀ ಕುಕ್ಕುವಾಡ ಅಂಬಾಭವಾನಿ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವ ನಿಮಿತ್ತ ಡಿ.25ರಿಂದ 27ರವರೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಸಮಾರೋಪ ಸಮಾರಂಭ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ನಿಧನ ಹಿನ್ನೆಲೆ ರದ್ದುಪಡಿಸಲಾಗಿದೆ.

ಚನ್ನಗಿರಿ: ಪಟ್ಟಣದ ಶಿವಾಜಿ ನಗರದ ಶ್ರೀ ಕುಕ್ಕುವಾಡ ಅಂಬಾಭವಾನಿ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವ ನಿಮಿತ್ತ ಡಿ.25ರಿಂದ 27ರವರೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಸಮಾರೋಪ ಸಮಾರಂಭ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ನಿಧನ ಹಿನ್ನೆಲೆ ರದ್ದುಪಡಿಸಲಾಗಿದೆ.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 2 ದಿನಗಳಿಂದ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಶುಕ್ರವಾರ ಸಮಾರೋಪ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಮಾಜಿ ಪ್ರಧಾನ ನಿಧನ ಹಿನ್ನೆಲೆ ಕುಸ್ತಿ ಸ್ಪರ್ಧೆಗಳನ್ನು ಮಾತ್ರ ನಡೆಸಿ, ಸಮಾರೋಪ ಸಮಾರಂಭ ರದ್ದುಪಡಿಸಲಾಯಿತು. ತಾಲೂಕು ಕ್ರೀಡಾಂಗಣದಲ್ಲಿ ಮನಮೋಹನ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಕುಸ್ತಿ ಅಖಾಡ ಸಮಿತಿಯ ಅಧ್ಯಕ್ಷ ಶಿವಾಜಿ ರಾವ್, ರಮೇಶ್, ಧರಣೇಂದ್ರ, ದೀಪಕ್ ಗಾರ್ಘೆ, ಜಿ.ಚಿನ್ನಸ್ವಾಮಿ, ಅಣ್ಣೋಜಿರಾವ್, ಹರೀಶ್, ಕಾಯಿ ಮಂಜಣ್ಣ, ಸಿ.ಎಚ್. ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.

- - - -27ಕೆಸಿಎನ್ಜಿ1.ಜೆಪಿಜಿ:

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.