ಸಾರಾಂಶ
ಪಂಜ ಕುಸ್ತಿಯ 18 ವರ್ಷದ ವಿಭಾಗದಲ್ಲಿ ನೆಲ್ಯಹುದಿಕೇರಿಯ ಅಹ್ಮದ್ ನಜಾದ್ ಭಾಗವಹಿಸಿ ಚಾಂಪಿಯನ್ ಆದರು. ಮಣಿ ಉತ್ತಮ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಉಡುಪಿಯಲ್ಲಿ ನಡೆದ ಪಂಜಕುಸ್ತಿ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ನೆಲ್ಯಹುದಿಕೇರಿಯ ಯುವಕರಲ್ಲಿ ಈರ್ವರು ಚಾಂಪಿಯನ್ ಆಗಿ ಹೊರಹೊಮ್ಮಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರೆ, ಮತ್ತೋರ್ವ ತೃತೀಯ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಪಂಜ ಕುಸ್ತಿಯ ಹದಿನೆಂಟು ವರ್ಷದ ವಿಭಾಗದಲ್ಲಿ ನೆಲ್ಯಹುದಿಕೇರಿಯ ಅಹ್ಮದ್ ನಜಾದ್ ಭಾಗವಹಿಸಿ ಚಾಂಪಿಯನ್ ಆದರೆ ಯುವಕರ ವಿಭಾಗದಲ್ಲಿ ಅಜಿತ್ ಮಹೇಶ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 30 ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಭಾಗವಹಿಸಿದ ನೆಲ್ಯಹುದಿಕೇರಿಯ ಮಣಿ ಉತ್ತಮ ಪೈಪೋಟಿ ನೀಡಿದ್ದು ತೃತೀಯ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಂಪಿಯನ್ ಆಗಿ ಹೊರಹೊಮ್ಮಿದ ಮಹಮ್ಮದ್ ನಜಾಹುದ್ದಿನ್ ಮತ್ತು ಅಜಿತ್ ಮಹೇಶ್ ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ನೆಲ್ಯಹುದಿಕೇರಿಯ ಟಿ ಪಿ ಜಿಮ್ ಸೆಂಟರ್ ನ ತರಬೇತುದಾರ ನಿವಿನ್ ಜೋಸೆಫ್ ಮಾರ್ಗದರ್ಶನದಲ್ಲಿ ಪಂಜಕುಸ್ತಿಯಲ್ಲಿ ತರಬೇತಿ ಪಡೆದಿದ್ದಾರೆ.