ಸಾರಾಂಶ
ಮಂಡ್ಯ: ಮೈಸೂರು ವಿಶ್ವವಿದ್ಯಾಲಯದ 2024- 25ನೇ ಸಾಲಿನ ಮೈಸೂರು ವಿಶ್ವ ವಿದ್ಯಾಲಯದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜು ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದೆ. ಮೈಸೂರು ವಿಶ್ವವಿದ್ಯಾಲಯದ ಜಿಮ್ಯಾಶಿಯಂ ಹಾಲ್‌ನಲ್ಲಿ ನಡೆದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ 3 ಪ್ರಥಮ ಸ್ಥಾನಗಳನ್ನು ಹಾಗೂ 2 ದ್ವಿತೀಯ ಸ್ಥಾನ ಗಳಿಸಿ ಒಟ್ಟು 5 ಪದಕಗಳನ್ನು ಮಹಿಳಾ ಸರ್ಕಾರಿ ಕಾಲೇಜು ಪಡೆದಿದೆ. ಇದರೊಂದಿಗೆ ಒಟ್ಟು 21 ಅಂಕ ಗಳಿಸಿ ಕುಸ್ತಿ ಚಾಂಪಿಯನ್ ಶಿಪ್ ಪಡೆದಿದೆ.
ಭಾರ ಎತ್ತುವ ಸ್ಪರ್ಧೆಯಲ್ಲೂ ಸಾಧನೆ:ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜುಗಳ ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿಯೂ ಸಹ ಕಾಲೇಜಿನ ವಿದ್ಯಾರ್ಥಿನಿಯರು 3 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನ ಪಡೆದು ಒಟ್ಟು 4 ಪದಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಟೆನ್ನಿಕಾಯ್ಡ್: ಅಂತರ ವಲಯಕ್ಕೆ ಆಯ್ಕೆ:ಮೈಸೂರು ವಿಶ್ವವಿದ್ಯಾಲಯ ಮಾಂಡವ್ಯ ವಲಯ ಮಟ್ಟದ ಅಂತರ ಕಾಲೇಜುಗಳ ಮಹಿಳಾ ಟೆನ್ನಿಕಾಯ್ಡ್ ಪಂದ್ಯಾವಳಿಯಲ್ಲೂ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ಮಂಡ್ಯ ಪ್ರಥಮ ಸ್ಥಾನ ಗಳಿಸಿ ವಿಶ್ವವಿದ್ಯಾಲಯದ ಅಂತರ ವಲಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಪದಕ ವಿಜೇತರಿಗೆ ಹಾಗೂ ಚಾಂಪಿಯನ್‌ಶಿಪ್‌ಗೆ ಕಾರಣರಾದ ತಂಡದ ಎಲ್ಲ ಮಹಿಳಾ ಕುಸ್ತಿಪಟುಗಳಿಗೆ, ತರಬೇತುದಾರ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್.ಲೋಕೇಶ್ ಅವರಿಗೆ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಹೇಮಲತಾ, ಗೆಜೆಟೆಡ್ ಮ್ಯಾನೇಜರ್ ಕೆ.ಪಿ.ರವಿಕಿರಣ್, ಅಧೀಕ್ಷಕ ಎಸ್.ಎನ್.ಮಹೇಶ್ ಹಾಗೂ ಕ್ರೀಡಾ ಸಮಿತಿಯ ಸದಸ್ಯರಾದ ಎಸ್.ನವೀನ್, ಟಿ.ಆರ್. ದೀಪಕ್ ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.--