ಸಾರಾಂಶ
ಕವಿಗಳಾದವರು ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾವ್ಯಗಳನ್ನು ರಚಿಸಬೇಕು ಎಂದು ಸಾಹಿತಿ ಡಾ.ಪ್ರೇಮಾ ಯಾಕೊಳ್ಳಿ ಹೇಳಿದರು.
ಕನ್ನಡಪ್ರಭ ವಾತೆ ಅಥಣಿ
ಕವಿಗಳಾದವರು ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾವ್ಯಗಳನ್ನು ರಚಿಸಬೇಕು ಎಂದು ಸಾಹಿತಿ ಡಾ.ಪ್ರೇಮಾ ಯಾಕೊಳ್ಳಿ ಹೇಳಿದರು.ಕವಿ ಅಪ್ಪಸಾಹೇಬ ಅಲಿವಾದಿ ಅವರ ವಿನೂತನ ಪ್ರಕಾಶನ ಮತ್ತು ವಿನೂತನ ವಿಚಾರ ವೇದಿಕೆಯ 33ನೇ ವಾರ್ಷಿಕೋತ್ಸವ ಹಾಗೂ ಹಿರಿಯ ನಾಗರಿಕರ ವೇದಿಕೆಯ ಉದ್ಘಾಟನೆ ಹಾಗೂ ಗ್ರಂಥ ಲೋಕಾರ್ಪಣೆ ಜೊತೆಗೆ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಗಳು ಸಹಜವಾಗಿ ಮೂಡಿ ಬರಬೇಕು. ಕಾವ್ಯ ಓದುಗರಿಗೆ ಚುರುಕು ಮುಟ್ಟಿಸಬೇಕು, ಮನಸ್ಸಿಗೆ ಮುಧ ನೀಡುವಂತಿರಬೇಕು. ಅಪ್ಪಾಸಾಹೇಬ ಅಲಿಬಾದಿ ಅವರು ಕಾಲಕ್ಕೆ ತಕ್ಕಂತೆ ಚುಟುಕು ಕವಿತೆಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಥಣಿ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿ ನೇಮಕಗೊಂಡ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ದಂಪತಿಯನ್ನು ಅತಿಥಿಗಳು ಮತ್ತು ಅಭಿಮಾನಿಗಳು ಸನ್ಮಾನಿಸಿದರು.ಹಿರಿಯ ಸಾಹಿತಿ ಪ್ರಕಾಶ ಖೋತ, ಎಸ್ ಕೆ ಹೊಳೆಪ್ಪನವರ, ಡಾ.ಪ್ರಿಯಂವದಾ ಅಣ್ಣೆಪ್ಪನವರ, ಮಲ್ಲಿಕಾರ್ಜುನ ಕಕಮರಿ, ಜಯಪಾಲ ತೀರ್ಥ ಸೇರಿದಂತೆ ಇನ್ನಿತರರು ಅಲಿಬಾದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಕುರಿತು ಕವನಗಳನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿದರು. ಡಾ.ಕುಮಾರ್ ತಳವಾರ ನಿರೂಪಿಸಿದರು. ಭರತ ಸೋಮಯ್ಯ ಸ್ವಾಗತಿಸಿದರು. ಭಾರತಿ ಅಲಿಬಾದಿ ವಂದಿಸಿದರು.