ಸಾರಾಂಶ
- ರಾಜ್ಯದ ಸುಮಾರು 50 ಲಕ್ಷ ಈಡಿಗರು ಸಂಘಟಿತ ಶಕ್ತಿ ಪ್ರದರ್ಶಿಸುವ ಕಾಲವಿದು । - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7 ರವರೆಗೆ ಜಾತಿಗಣತಿ-2025 ನಡೆಯಲಿದೆ. ಆರ್ಯ ಈಡಿಗರ ಸಮುದಾಯ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂ-9 ರಲ್ಲಿ ಈಡಿಗ ಹಾಗೂ ಕಾಲಂ ನಂ.10 ರಲ್ಲಿ ಉಪ ಜಾತಿಗಳ ಹೆಸರು ನಮೂದಿಸಬೇಕು ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ನಾಗರಾಜ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನ್ಯಾಯಬದ್ಧ ಹಕ್ಕನ್ನು ಪಡೆಯಲು ಈಡಿಗರ ಸಮಾಜ ಮೊದಲು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಜಾತಿಗಣತಿ ವೇಳೆ ಜಾತಿ ಕಾಲಂನಲ್ಲಿ ಈಡಿಗ ಎಂಬುದಾಗಿಯೇ ಬರೆಸಬೇಕು ಎಂದರು.ಸೆ.22ರಿಂದ ರಾಜ್ಯಾದ್ಯಂತ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯಗಳ ಕುರಿತ ಸಮಗ್ರ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಜ್ಯದ ಈಡಿಗ ಬಾಂಧವರು ವೃತ್ತಿಗೆ ಅನುಗುಣವಾಗಿ ಈಡಿಗ, ಬಿಲ್ಲವ, ಪೂಜಾರಿ, ಧಿವರ, ನಾಡಾರ್, ನಾಮಧಾರಿ, ಬಂಧಾಲ, ಬೆಲ್ಟದ್, ಹಾಲ ಕ್ಷತ್ರಿಯ, ದೇಶ ಬಂಡಾಲ, ದೇವರ, ದೇವರ ಮಕ್ಕಳ, ಎಳವ, ಗಾಮಲ್ಲ, ಗೌಂಡ, ಹಳೇ ಪೈಕರು, ಹಳೇ ಪೈಕ್, ಇಲ್ಲಾವನ್, ಕಲಾಲ್, ಮಲಯಾಳಿ, ಬಿಲ್ಲವ, ಥೀಯಾನ್, ಇಳಿಗ, ಗುಂಡ್ಲ ತಿಯನ್ ಸೇರಿದಂತೆ ಎಲ್ಲ 26 ಪಂಗಡದವರು ಒಂದೇ ರೀತಿ ಬರೆಸಬೇಕು ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಈಡಿಗ ಜನಾಂಗವನ್ನು ಪ್ರವರ್ಗ-2ಎ ನಲ್ಲಿ ಕ್ರ.ಸಂ. 4ರಲ್ಲಿ ಎ ಯಿಂದ ಝೆಡ್‌ವರೆಗೆ ನಮೂದಿಸಲಾಗಿದೆ. ಈಡಿಗ ಸೇರಿದಂತೆ 26 ಜಾತಿಗಳು ಪ್ರತ್ಯೇಕ ಜಾತಿಗಳೆಂದು ನಮೂದಿಸಿದಲ್ಲಿ ನಮ್ಮ ಜನಾಂಗದ ಒಟ್ಟು ಜನಸಂಖ್ಯಾ ಬಲವೇ ಕುಸಿಯುವ ಅಪಾಯವಿದೆ. ಈ ಹಿನ್ನೆಲೆ ಆಯಾ ತಾಲೂಕು, ಆಯಾ ಗ್ರಾಮಗಳ ಸಮಾಜದ ಮುಖಂಡರು, ಹಿರಿಯರು ಮುಂಜಾಗ್ರತೆ ವಹಿಸಿ ಸಮಾಜದ ಜನರನ್ನು ಜಾಗೃತಿಗೊಳಿಸಬೇಕು. ಮೊಬೈಲ್, ವಾಟ್ಸ್‌ಆಪ್‌ಗಳಲ್ಲಿ ಜನಾಂಗಕ್ಕೆ ಸಂದೇಶ ರವಾನಿಸಬೇಕು ಎಂದು ಕೋರಿದರು.ಸಂಘದ ಗೌರವಾಧ್ಯಕ್ಷ ಎಚ್.ಶಂಕರ್, ಕಾರ್ಯದರ್ಶಿ ಈ.ದೇವೇಂದ್ರಪ್ಪ, ಖಜಾಂಚಿ ಎಸ್.ಭರಮಪ್ಪ, ಸದಸ್ಯರಾದ ರಾಮದಾಸ್, ಎನ್.ವೈ.ಆನಂದ, ನಾಗರಾಜ ಬಾಬು, ದಾನೇಶ್, ಬಿ.ಸೋಮಶೇಖರ್, ಈ.ರಾಜಣ್ಣ ಇತರರು ಇದ್ದರು.
- - -(ಬಾಕ್ಸ್) * ನಾಳೆ ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ, ಪುರಸ್ಕಾರ
ದಾವಣಗೆರೆ: ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.20ರಂದು ಬೆಳಗ್ಗೆ 11.30 ಗಂಟೆಗೆ ನಗರದ ಜಿಲ್ಲಾ ಆರ್ಯ ಈಡಿಗ ವಿದ್ಯಾರ್ಥಿ ನಿಲಯದ ಡಾ.ಪುನೀತ ರಾಜಕುಮಾರ್ ವೇದಿಕೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎ.ನಾಗರಾಜ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ, ತೀರ್ಥಹಳ್ಳಿ ತಾ. ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ನಾಗರಾಜ ವಹಿಸುವರು. ಸಂಘದ ಗೌರವಾಧ್ಯಕ್ಷ ಎಚ್.ಶಂಕರ್, ದೂಡಾ ಅಧ್ಯಕ್ಷ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಆಗಮಿಸಲಿದ್ದಾರೆ ಎಂದು ಹೇಳಿದರು.ಈ.ಶಾಂತರಾಂ, ಸಿ.ವಿ. ರವೀಂದ್ರಬಾಬು, ವೈ.ಕೃಷ್ಣಮೂರ್ತಿ, ಈ.ದೇವೇಂದ್ರಪ್ಪ, ಎಸ್.ಭರಮಪ್ಪ, ಎಚ್.ಎಸ್. ಮಹಾಬಲೇಶ, ವೈ.ಗಂಗಾಧರ, ಪ್ರಕಾಶ ಬಿದರಕೆರೆ, ಟಿ.ಮಹಾಂತೇಶ ಭಾಗವಹಿುವರು. ಸಮಾಜದ 100 ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು ಎಂದು ತಿಳಿಸಿದರು.
- - --18ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಎ.ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.