ಸಾರಾಂಶ
ವಿಶ್ವ ಮಾತೃ ಭಾಷಾ ದಿನಾಚರಣೆ । ಕಸಾಪ ಆಯೋಜನೆಚನ್ನರಾಯಪಟ್ಟಣ: ವಿಶ್ವ ಮಾತೃ ಭಾಷಾ ದಿನಾಚರಣೆ ಹಾಗೂ ಸಾಹಿತಿ ಕವಿತಾಕೃಷ್ಣ ಅವರ ನುಡಿನಮನ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಸಾಪ ಕಚೇರಿಯಲ್ಲಿ ಕವಿತಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ‘ಕನ್ನಡಿಗರಾದ ನಾವು ಭಾಷಾಭಿಮಾನವನ್ನು ಬೆಳೆಸಿಕೊಂಡು ನಮ್ಮ ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು, ಕವಿತಾಕೃಷ್ಣ ಅವರು ಒಬ್ಬ ಮಹಾನ್ ಕವಿ. ಅವರಲ್ಲಿದ್ದು ಮುಗ್ಧತೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅವರ ಅಗಲಿಕೆ ಪರಿಷತ್‌ಗೆ ತುಂಬಲಾಗದ ನಷ್ಟ ಉಂಟಾಗಿದೆ’ ಎಂದರು.ಕನ್ನಡ ಭಾಷಾ ಶಿಕ್ಷಕ ಅಳಿಸಂದ್ರ ಎಸ್.ಶ್ರೀನಿವಾಸ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹುಟ್ಟಿಕೊಂಡ ಭಾಷಾ ಚಳವಳಿಯು ಮುಂದೆ ಎಲ್ಲಾ ದೇಶಗಳಲ್ಲಿ ವ್ಯಾಪಿಸಿ ವಿಶ್ವಸಂಸ್ಥೆ ವಿಶ್ವ ಮಾತೃ ಭಾಷಾ ದಿನಾಚರಣೆಯನ್ನಾಗಿ ಘೋಷಣೆ ಮಾಡಿದೆ, ಭಾರತ ವಿಭಜನೆಯಾದ ಸಂದರ್ಭದಲ್ಲಿ ಪಾಕಿಸ್ತಾನದವರು ಬಾಂಗ್ಲಾದೇಶಕ್ಕೆ ಉರ್ದು ಭಾಷೆಯಲ್ಲಿ ವ್ಯವಹರಿಸಲು ಭಾಷೆ ಹೇರಿಕೆಯನ್ನು ಮಾಡಿದ ಸಲುವಾಗಿ ಬಾಂಗ್ಲಾದಲ್ಲಿ ಉಗ್ರ ಹೋರಾಟದ ಸ್ವರೂಪ ಪಡೆಯಿತು. ನಾವು ಮಾತನಾಡುವುದು ಬೆಂಗಾಲಿ ಭಾಷೆ, ಅದು ನಮ್ಮ ಮಾತೃ ಭಾಷೆಯಾಗಿದೆ ಎಂಬುದು ವಾದವಾಗಿತ್ತು. ಆದ್ದರಿಂದ ಎಲ್ಲಾ ರಾಜ್ಯಗಳ ಮತ್ತು ದೇಶಗಳಲ್ಲಿ ಭಾಷಾಭಿಮಾನಿ ಇಟ್ಟುಕೊಳ್ಳಬೇಕು. ಯಾರೂ ಕೂಡ ಭಾಷಾ ಹೇರಿಕೆಯನ್ನು ಮಾಡದಂತೆ ವಿಶ್ವಸಂಸ್ಥೆ ತಿಳಿಸಿದೆ ಎಂದರು.
ಕನ್ನಡ ಪರ ಹೋರಾಟಗಾರ ಪುಟ್ಟಣ್ಣಗೋಕಾಕ್ ಮಾತನಾಡಿ, ‘ಸಾಹಿತಿ ಕವಿತಾಕೃಷ್ಣರವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದ್ದು ಅವರು ಪಕ್ಕದ ತುಮಕೂರು ಜಿಲ್ಲೆಯವರಾಗಿದ್ದರೂ ನಮ್ಮ ತಾಲೂಕಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಬಹಳಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಅವರ ಮಿಂಚಿನ ಭಾಷಣ ಹಾಗೂ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅವರ ಮನೆಯ ತುಂಬ ಗ್ರಂಥಾಲಯ ವಾತಾವರಣ. ಅಂತಹ ಜ್ಞಾನ ಭಂಡಾರವನ್ನು ತಮ್ಮಲ್ಲಿ ಇರಿಸಿಕೊಂಡ ಸಾಧಕರಾಗಿದ್ದರು’ ಎಂದು ಬಣ್ಣಿಸಿದರು.ಶಿವನಗೌಡಪಾಟೀಲ್, ಮಲ್ಲೇಗೌಡ, ಯಶೋಧಜೈನ್, ಧರಣೇಶ್, ಜಬೀಉಲ್ಲಾಬೇಗ್, ಸತ್ಯನಾರಾಯಣ್ ಇದ್ದರು.ಚನ್ನರಾಯಪಟ್ಟಣದಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆ ಹಾಗೂ ಸಾಹಿತಿ ಕವಿತಾಕೃಷ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ಪುಟ್ಟಣ್ಣಗೋಕಾಕ್ ಮಾತನಾಡಿದರು.