ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಬಿವಿವಿ ಸಂಘ ಹಾಗೂ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆಯಿಂದ ಹಮ್ಮಿಕೊಂಡ ದಕ್ಷಿಣ ಭಾರತದ ಖೇಲೋ ಇಂಡಿಯಾ ವುಶುಸಬ್ ಜೂನಿಯರ್, ಜೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟ ಗುರುವಾರ ತೆರೆ ಬಿದ್ದಿತು.ಸಮಗ್ರ ವಿಭಾಗದಲ್ಲಿ ತಮಿಳುನಾಡು 16 ಚಿನ್ನ, 10 ಬೆಳ್ಳಿ,13 ಕಂಚುಗಳೊಂದಿಗೆ ಕ್ರೀಡಾಕೂಟದಲ್ಲಿ 123 ಅಂಕ ಪಡೆದು ಸಮಗ್ರ ವೀರಾಗ್ರಣಿ ಮುಡಿಗೇರಿಸಿಕೊಂಡಿತು. 11 ಚಿನ್ನ, 16 ಬೆಳ್ಳಿ, 17 ಕಂಚು ಪದಕ ಪಡೆದು 120 ಅಂಕ ಪಡೆದ ಕೇರಳ ದ್ವಿತೀಯ ಸ್ಥಾನ ಪಡೆಯಿತು, ಒಡಿಶಾ 8 ಚಿನ್ನ, 3 ಬೆಳ್ಳಿ, 8 ಕಂಚಿನ ಪದಕ ಪಡೆದು 57 ಅಂಕಗಳೊಂದಿಗೆ ತೃತೀಯಸ್ಥಾನ ಗಿಟ್ಟಿಸಿದರೆ, ಕರ್ನಾಟಕ 6 ಚಿನ್ನ, 8 ಬೆಳ್ಳಿ, 34 ಕಂಚು ಪಡೆದು 88 ಅಂಕ ಪಡೆದು ನಾಲ್ಕನೇ ಸ್ಥಾನ, ತೆಲಂಗಾಣ 3 ಚಿನ್ನ, 3 ಬೆಳ್ಳಿ, 15 ಕಂಚು ಪಡೆದು 39 ಅಂಕ ಪಡೆದು 5ನೇ ಸ್ಥಾನ, 1 ಚಿನ್ನ,4 ಬೆಳ್ಳಿ, 3 ಕಂಚು ಪಡೆದು 20 ಅಂಕಗಳಿಂದ ಆಂಧ್ರಪದೇಶ 6ನೇ ಸ್ಥಾನ ಪಡೆದವು.
ಸಾಂಡಾ ವಿಭಾಗ:ಕೇರಳ 6 ಚಿನ್ನ, 9 ಬೆಳ್ಳಿ, 11 ಕಂಚು ಪಡೆದು 68 ಅಂಕಗಳಿಂದ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕ 5 ಚಿನ್ನ, 1 ಬೆಳ್ಳಿ, 15 ಕಂಚು ಪಡೆದು 43 ಅಂಕಗಳಿಂದ ದ್ವಿತೀಯ ಸ್ಥಾನ ಪಡೆಯಿತು, 6 ಚಿನ್ನ, 3 ಕಂಚು ಪಡೆದು 33 ಅಂಕಗಳಿಂದ ಒಡಿಸ್ಸಾ ತೃತೀಯ ಸ್ಥಾನ, ತಮಿಳುನಾಡು 2 ಚಿನ್ನ, 6 ಬೆಳ್ಳಿ, 4 ಕಂಚು ಪಡೆದು 32 ಅಂಕಗಳೊಂದಿಗೆ 4ನೇ ಸ್ಥಾನ, ಆಂಧ್ರಪ್ರದೇಶ 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆದು, 17 ಅಂಕಗಳಿಂದ 5ನೇ ಸ್ಥಾನ, ತೆಲಂಗಾಣ 1 ಚಿನ್ನ, 1ಬೆಳ್ಳಿ, 6 ಕಂಚು ಪಡೆದು 14 ಅಂಕ ಪಡೆದು 5ನೇ ಸ್ಥಾನ ಪಡೆಯಿತು.ತಾವೂಲ್ ವಿಭಾಗ: ತಮಿಳುನಾಡು 14 ಚಿನ್ನ,4 ಬೆಳ್ಳಿ, 9 ಕಂಚು ಪಡೆದು 91 ಅಂಗಳಿಂದ ಪ್ರಥಮ ಸ್ಥಾನ, ಕೇರಳ 5 ಚಿನ್ನ, 7 ಬೆಳ್ಳಿ, 6 ಕಂಚು ಪಡೆದು 52 ಅಂಕಗಳಿಂದ ದ್ವಿತೀಯ ಸ್ಥಾನ, ಕರ್ನಾಟಕ 7 ಬೆಳ್ಳಿ, 18 ಕಂಚು ಪಡದು 39 ಅಂಕಗಳಿಂದ ತೃತೀಯ ಸ್ಥಾನ, ಒಡಿಸ್ಸಾ 3 ಚಿನ್ನ, 3 ಬೆಳ್ಳಿ 6 ಕಂಚು ಪಡೆದು 30 ಅಂಕಗಳಿಂದ 4ನೇ ಸ್ಥಾನ, ತೆಲಂಗಾಣ 2 ಚಿನ್ನ, 2 ಬೆಳ್ಳಿ 9 ಕಂಚು ಪಡದು 25 ಅಂಕಗಳಿಂದ 5ನೇಸ್ಥಾನ, ಆಂಧ್ರಪದೇಶ 1 ಬೆಳ್ಳಿ, 3 ಅಂಕಗಳಿಂದ 6ನೇ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಸಮಗ್ರ ವೀರಾಗ್ರಣಿ ಹಾಗೂ ಪ್ರಥಮ, ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಫಲಕ, ನೀಡಿಗೌರವಿಸಲಾಯಿತು.