ಸಾರಾಂಶ
ನರಗುಂದ ತಾಲೂಕಿನ ಶಿರೋಳ ಗ್ರಾಮದ ಯಚ್ಚರೇಶ್ವರ ಸ್ವಾಮಿಗಳ ಗವಿಮಠದಲ್ಲಿ ಯಚ್ಚರಸ್ವಾಮಿಗಳ 188ನೇ ಆರಾಧನಾ ಮಹೋತ್ಸವ ಹಾಗೂ 9 ದಿನಗಳ ಪರ್ಯಂತರವಾಗಿ ನಡೆದ ಯಚ್ಚರ ಸ್ವಾಮಿಗಳ ಪುರಾಣ ಪ್ರವಚನ ಮಹಾ ಮಂಗಲೋತ್ಸವ ನಡೆಯಿತು.
ನರಗುಂದ: ಭಕ್ತರ ಅಂಧಕಾರವನ್ನು ದೂರ ಮಾಡಬೇಕೆಂದು ಯಚ್ಚರ ಸ್ವಾಮಿಗಳು ತಮ್ಮ ಮಹಾ ತಪಸ್ಸಿನಿಂದ ಭಕ್ತರ ಮನೆ ಮನಗೆ ತೆರಳಿ ಅವರ ಸಂಕಟಗಳನ್ನು ನಿವಾರಣಿ ಮಾಡಿದ್ದಾರೆಂದು ಶಿರೋಳದ ಯಚ್ಚರ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಶಿರೋಳ ಗ್ರಾಮದ ಯಚ್ಚರೇಶ್ವರ ಸ್ವಾಮಿಗಳ ಗವಿಮಠದಲ್ಲಿ ನಡೆದ ಯಚ್ಚರಸ್ವಾಮಿಗಳ 188ನೇ ಆರಾಧನಾ ಮಹೋತ್ಸವ ಹಾಗೂ 9 ದಿನಗಳ ಪರ್ಯಂತರವಾಗಿ ನಡೆದ ಯಚ್ಚರ ಸ್ವಾಮಿಗಳ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮೇಲು- ಕೀಳು ಎನ್ನುವುದನ್ನು ಮನುಷ್ಯನ ಮಾಡಿಕೊಂಡಿದ್ದಾನೆ. ಮನುಷ್ಯ ಜೀವಿ ಎಲ್ಲರೂ ಸಮಾನರೆಂದು ಶ್ರೀಗಳು ತಮ್ಮ ಮಹಾ ತಪಸ್ಸಿನಿಂದ ಭಕ್ತರಿಗೆ ತಿಳಿಸಿಕೊಟ್ಟದ್ದಾರೆ. ಮೇಲಾಗಿ ಭಕ್ತರ ಮನೆಗಳಗೆ ಹೋಗಿ ಅವರ ಸಂಕಟಗಳನ್ನು ನಿವಾರಣೆ ಮಾಡಿದ್ದಾರೆಂದು ತಿಳಿಸಿದರು.ರೋಣ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಯಚ್ಚರ ಸ್ವಾಮಿಗಳು ನಾಡಿನಾದ್ಯತ ಸಂಚರಿಸಿ ಭಕ್ತರ ಸಂಕಟಗಳನ್ನು ನಿವಾರಣೆ ಮಾಡಿ ಭಕ್ತರಿಗೆ ಬೇಡಿದ್ದನ್ನು ಕರುಣಿಸಿ ಭಕ್ತರ ಕಾಮಧೇನು ಎನಿಸಿದರು ಎಂದರು.
ಕಿತ್ತಲಿ ಸಿದ್ದರಾಮೇಶ್ವರ ಮಠದ ಮಂಜುನಾಥ ಸ್ವಾಮಿಗಳು ಮಾತನಾಡಿ, ಶರಣರು, ಮಹಾತ್ಮರು ಯಾವ ಜಾತಿಗೂ ಸೀಮಿತವಾದವರಲ್ಲ. ಅವರು ನಂಬಿ ಬಂದ ಭಕ್ತರನ್ನ ಉದ್ಧರಿಸಲೆಂದು ಧರೆಗೆ ಬಂದವರು. ಹಾಗಾಗಿ ಮಠಗಳು, ಸ್ವಾಮಿಗಳು ಹಾಗೂ ಶರಣರು ಯಾವ ಜಾತಿಗೂ ಸೀಮಿತಗೊಂಡವರಲ್ಲ ಎಂದರು.ಹೊಳೆಆಲೂರಿನ ರಥಶಿಲ್ಪಿ ಪಾಂಡುರಂಗ ಬಡಿಗೇರ, ಗುತ್ತಿಗೆದಾರ ಪ್ರಕಾಶ ಸಂಗಳದ, ಕೆ.ಡಿ. ಬಡಿಗೇರ, ಮಂಜುನಾಥ ಬಡಿಗೇರ, ಶಿವರಾಜ ಮುಗಳಿ, ಶರಣಪ್ಪ ಹತ್ತಿಕಟಿಗಿ, ಪುರಾಣ ಪ್ರವಾಚನಕಾರರಾದ ಪ್ರಲ್ಹಾದ ಮುಂಡಾಸದ, ಸಂಗೀತಗಾರ ಸಕ್ಕರಗೌಡ ಶಾಸ್ತ್ರಿ, ಯಲ್ಲೇಶ ಕುಮಾರ ಹೂಗಾರ, ಎಸ್.ವೈ. ಪಾಟೀಲ ಸ್ವಾಗತಿಸಿದರು. ಸುನೀಲ ಕಳಸದ ನಿರೂಪಿಸಿದರು. ಎಚ್.ವಿ. ಬ್ಯಾಡಗಿ ವಂದಿಸಿದರು.