ಯಾದಗಿರಿ: ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ಆಗ್ರಹ

| Published : Jan 07 2024, 01:30 AM IST

ಯಾದಗಿರಿ: ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಕ್ಕಾಗಿ ಧ್ವನಿ ಎತ್ತಿದ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಮತ್ತು ಪದಾಧಿಕಾರಿಗಳನ್ನು ಬಂಧಿಸಿರುವುದು ಖಂಡನೀಯ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಮತ್ತು ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡದಲ್ಲಿಯೇ ನಾಮಫಲಕ ಅಳವಡಿಸಲು ಆಗ್ರಹಿಸಿ ತಾಲೂಕು ಕರವೇ ವತಿಯಿಂದ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಕರವೇ ತಾಲೂಕಾಧ್ಯಕ್ಷ ಶರಣು ಎಲೇರಿ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷರು ರಾಜ್ಯದಲ್ಲಿರುವ ಅಂಗಡಿಗಳಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬದಕಲು ಬಂದ ವ್ಯಾಪರಸ್ಥರು ಕನ್ನಡದಲ್ಲಿ ನಾಮಫಲಕ ಅಳವಡಿಸಲು ನಕಾರಾತ್ಮಕ ಸ್ಪಂದನೆ ಮಾಡುತ್ತಿದ್ದು, ವಿಷಾದಕಾರವಾಗಿದೆ. ಇದರ ವಿರುದ್ಧ ರಾಜ್ಯಾಧ್ಯಕ್ಷ ನಾರಾಯಣಗೌಡ ಧ್ವನಿ ಎತ್ತಿದ್ದಕ್ಕಾಗಿ ಅವರನ್ನು ಮತ್ತು ಪದಾಧಿಕಾರಿಗಳನ್ನು ಬಂಧಿಸಿರುವುದು ಖಂಡನೀ0ಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿಯೂ ತಹಸೀಲ್ದಾರರು ತಮ್ಮ ಕಾನೂನು ಚೌಕಟ್ಟನಲ್ಲಿ ಅಂಗಡಿಗಳ ನಾಮಫಲಕ ಕನ್ನಡ ಭಾಷೆಯಲ್ಲಿ ಬರೆದುಕೊಳ್ಳುವಂತೆ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ತಹಸೀಲ್ದಾರ್ ನೀಲಪ್ರಭಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಕರವೇ ಪದಾಧಿಕಾರಿಗಳಾದ ಭೀಮಾಶಂಕರ ಪಡಿಗೆ, ಗೋಪಾಲ ಕೃಷ್ಣ ಮೇದಾ, ಬಸ್ಸು ನಾಯಕ್, ಮೌನೇಶ್ ಕೊಂಕಲ್, ಸುರೇಶ್ ಬೇಳಗುಂದಿ, ವಿನೋದ್ ತಲಾರಿ, ವೆಂಕಟೇಶ್, ಅವಿನಾಶ್ ಗೌಡ, ಶರಣು, ನಿಖಿಲ್ ಢಗೆ, ಶರಣು ಮೇದಾ, ನಗರ ಘಟಕ ಅಧ್ಯಕ್ಷ ಶರಣು ಮಜ್ಜಿಗೆ, ಸುನಿಲ್, ಮೇದಾ, ಭಾರತ್ ಮಿಟ್ಟೆ ಸೇರಿ ಇತರರಿದ್ದರು.