ಯಾದಗಿರಿ: ಡಾ.ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಖಂಡಿಸಿ ಪ್ರತಿಭಟನೆ

| Published : Jan 25 2024, 02:01 AM IST

ಯಾದಗಿರಿ: ಡಾ.ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬಾ ಸಾಹೇಬರ ಮೂರ್ತಿಗೆ ಅವಮಾನ ಮಾಡಿದ್ದು ಖಂಡನೀಯವಾಗಿದ್ದು, ಇದೊಂದು ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇದರಿಂದ ಸಮಾಜದ ಸ್ವಾಸ್ಥ್ಯ ಕೆಡಿಸಿ, ಆರಾಜಕತೆ ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದು ಮಾದಿಗ ದಂಡೋರ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲಬುರಗಿ ನಗರದ ಜೇವರ್ಗಿ ರಸ್ತೆಯ ಕೊಟನೂರ ಮಠದ ಹತ್ತಿರವಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬರ ಮೂರ್ತಿಗೆ ಕಿಡಿಗೇಡಿಗಳು ಅವಮಾನ ಮಾಡಿದ ಘಟನೆ ಖಂಡಿಸಿ ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬಾಬಾ ಸಾಹೇಬರ ಮೂರ್ತಿಗೆ ಅವಮಾನ ಮಾಡಿದ್ದು ಖಂಡನೀಯವಾಗಿದ್ದು, ಇದೊಂದು ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇದರಿಂದ ಸಮಾಜದ ಸ್ವಾಸ್ಥ್ಯ ಕೆಡಿಸಿ, ಆರಾಜಕತೆ ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದರು.

ದೇಶದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಡೀ ಮಾನವ ಸಂಕುಲ ತಲೆ ತಗ್ಗಿಸುವಂತೆ ಘಟನೆಗಳು ನಡೆಯುತ್ತಲೆ ಇವೆ. ಇಡೀ ರಾಜ್ಯದಲ್ಲಿ ಇರುವ ಡಾ.ಬಾಬಾ ಸಾಹೇಬರ ಪ್ರತಿ ಮೂರ್ತಿಗಳ ಹತ್ತಿರ ರಕ್ಷಣೆಗಾಗಿ ಪೊಲೀಸರ ನಿಯೋಜನೆ ಮರುಕಳಿಸಿದಂತೆ ಸೂಕ್ತ ಕ್ರಮ ವಹಿಸಬೇಕು. ಆದ್ದರಿಂದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ಬಸವರಾಜ ಮೇತ್ರಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುರಕುಂದಿ, ಗೌರವಾಧ್ಯಕ್ಷ ಸುಮಿತ್ರಪ್ಪ ಬಳಿಚಕ್ರ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ನಾಗರಾಜ ರಾಯಚೂರಕರ್, ಎಚ್‌ಆರ್ ಶಿವಮೂರ್ತಿ ವಿಜಯಕುಮಾರ ಅಬ್ಬೆತುಮಕೂರು, ಯೇಸುರಾಜ ಹುಲಕಲ್, ಮಹಮ್ಮದ್ ಖಾಜಾಸಾಬ, ಅಹ್ಮದ್ ಅಲಿ, ಶಶಿಕುಮಾರ, ಸಮಾಜದ ಮುಖಂಡರಾದ ಚಂದ್ರಶೇಖರ ಟಿ. ದಾಸನಕೇರಿ ಇನ್ನಿತರರು ಇದ್ದರು.