ಯಾದಗಿರಿ ವಿಘ್ನ ನಿವಾರಕನಿಗೆ ಅದ್ಧೂರಿ ಸ್ವಾಗತ

| Published : Sep 09 2024, 01:39 AM IST

ಸಾರಾಂಶ

Yadagiri Vighna Niwaraka is a big welcome

-ತೆಲಂಗಾಣ-ಮಹಾರಾಷ್ಟ್ರದಿಂದ ಖರೀದಿಸಿದ ಗಣೇಶ ವಿಗ್ರಹಗಳು । ಶಹಾಪುರ, ಸುರಪುರ, ಗುರುಮಠಕಲ್‌, ಹುಣಸಗಿ, ವಡಗೇರಾದಲ್ಲಿ ಸಂಭ್ರಮ

-----

ಕನ್ನಡಪ್ರಭ ವಾರ್ತೆ ಯಾದಗಿರಿಗೌರಿ ಗಣೇಶ ಹಬ್ಬದ ಸಂಭ್ರಮ ಎಲ್ಲಡೆ ಮೂಡಿದೆ. ಮನೆ-ಮನಗಳಲ್ಲಿ ವಿಘ್ನ ನಿವಾರಕನ ಪೂಜೆ, ಭಕ್ತಿ ಭಾವದಿ ನಡೆಯುತ್ತಿದೆ. ಶನಿವಾರ ಗಣೇಶ ಚೌತಿ ಪ್ರಯುಕ್ತ ಯಾದಗಿರ ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್‌, ಹುಣಸಗಿ, ವಡಗೇರಾ ಮುಂತಾದ ತಾಲೂಕುಗಳಲ್ಲಿ ಗಣೇಶ ಹಬ್ಬದ ಸಂಭ್ರಮ- ಅದ್ಧೂರಿ ಸ್ವಾಗತ ನಡೆಯಿತು.

ನಗರ ಹಾಗೂ ಪಟ್ಟಣಗಳ ಗಲ್ಲಿ ಗಲ್ಲಿಗಳಲ್ಲಿ ವಿವಿಧ ಮಂಡಳಿಗಳು ಕುಳ್ಳಿರಿಸಿದ ಗಣೇಶ ಪ್ರತಿಮೆಗಳು ಕಣ್ಮನ ಸೆಳೆಯುವಂತಿವೆ. 5, 11, 21 ದಿನಗಳವರೆಗೂ ಗಣೇಶ ಸಂಭ್ರಮ ಅನೇಕ ಕಡೆಗಳಲ್ಲಿ ನಡೆಯುತ್ತಿದೆ.

ತೆಲಂಗಾಣ-ಮಹಾರಾಷ್ಟ್ರದಿಂದ ಖರೀದಿಸಿದ ಬೃಹದಾಕಾರದ ಗಣೇಶ ವಿಗ್ರಹಗಳು ಶನಿವಾರ ಸಂಜೆ ನಗರದಲ್ಲಿ ರಾರಾಜಿಸಿದವು. ಗಣೇಶ ಬರಮಾಡಿಕೊಳ್ಳಲು ಸಾವಿರಾರು ಜನರು ಬಾಜಾ-ಭಜಂತ್ರಿಗಳೊಂದಿಗೆ ಅದ್ಧೂರಿ ಮರೆವಣಿಗೆಯ ಮೂಲಕ ವಿಗ್ರಹಗಳ ತಂದು ಸಾಂಪ್ರದಾಯದಂತೆ ಪ್ರತಿಷ್ಠಾಪಿಸಿದರು.

ಯಾದಗಿರಿ ನಗರದ ಸ್ಟೇಷನ್‌ ಬಜಾರ್‌ ಹತ್ತಿರದ ಶಿವಾಜಿ ನಗರದ ಅಂಭಾ ಭವಾನಿ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯ ಗಣೇಶ ಪ್ರತಿಷ್ಠಾಪಿಸಲಾಗಿದೆ. ಹಿಂದೂ ಸೇವಾ ಸಮಿತಿಯು ಸತತ 40 ವರ್ಷಗಳಿಂದ ಇಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ವಿಗ್ರಹ 8 ಅಡಿಗಳಿಗೂ ಹೆಚ್ಚು ಎತ್ತರವಿದ್ದು, ಶಹಾಬಾದಿನಿಂದ ತರಿಸಿಕೊಳ್ಳಲಾಗಿದೆಯಂತೆ.

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ಸಹಯೋಗದಲ್ಲಿ ಗ್ರಾಮೀಣ ಪೊಲೀಸ್‌ ಠಾಣೆ ಸಮೀಪದ ಭವಾನಿ ದೇವಸ್ಥಾನದ ಆವರಣದಲ್ಲಿ 19 ಅಡಿ ಎತ್ತರದ, 2.50 ಲಕ್ಷ ರು.ಗಳ ವೆಚ್ಚದ, ಹೈದರಾಬಾದಿನಿಂದ ತರಿಸಿದ ಗಣೇಶ ವಿಗ್ರಹ ನೋಡಲು ಜನಸಾಗರ ಧಾವಿಸುತ್ತಿದೆ.

ಯಾದಗಿರಿ ನಗರದ ಶಹಾಪುರಪೇಟೆಯಲ್ಲಿನ ಶರಣ ನಗರದಲ್ಲಿ 13 ಅಡಿ ಎತ್ತರದ 57 ಸಾವಿರ ರು.ಗಳ ವೆಚ್ಚದ ಗಣಪನ ವಿಗ್ರಹ ಜನಾಕರ್ಷಣೆಗೆ ಕಾರಣವಾಗಿದೆ. ಸರ್ಕಾರ್‌ ಮಿತ್ರ ಮಂಡಳಿ ಇದ ಆಯೋಜಿಸಿದ್ದು, ಮೆಹಬೂಬ್‌ ನಗರದಿಂದ ಇದ ತರಿಸಲಾಗಿದೆ. ಮೈಲಾಪುರದ ಅಗಸಿಯಲ್ಲಿ ಶ್ರೀಗಜಾನನ ಆರ್ಯ ಈಡಿಗರ ಸಂಘದ 8 ಅಡಿ ಎತ್ತರದ, 40 ಸಾವಿರ ರು.ಗಳ ವೆಚ್ಚದ ಸೊಲ್ಲಾಪುರದಿಂದ ತರಿಸಿಕೊಂಡ ಗಣೇಶ ವಿಗ್ರಹ, ಗೋಗಿ ಮೊಹಲ್ಲಾದ ಶ್ರೀಸಿದ್ಧಿ ವಿನಾಯಕ ಸಂಘದ 7 ಅಡಿ ಎತ್ತರದ ಗಣೇಶನನ್ನು ಮಹಾರಾಷ್ಟ್ರದ ಈಚಜಕರಂಜಿಯಿಂದ ತರಿಸಿದ್ದರೆ, ಮೈಲಾಪುರ ಅಗಸಿಯಲ್ಲಿ ಗೌರಿ ಗಣೇಶ ತರುಣ ಸಂಘದ 5.5 ಅಡಿ ಎತ್ತರದ ಸೊಲ್ಲಾಪುರದ ಗಣೇಶ, ಡಾ. ಅಂಬೇಡ್ಕರ್‌ ವೃತ್ತದ ಮರಿಯಮ್ಮನ ಗುಡಿ ಸಮೀಪದ ಶ್ರೀ ಗಜಾನನ ತರುಣ ಸಂಘದವರು ತೆಲಂಗಾಣದ ಮಕ್ತಾಲ್‌ನಿಂದ ತರಿಸಿರುವ 8 ಅಡಿ ಎತ್ತರದ ಗಣೇಶ ವಿಗ್ರಹ, ಕೋಟಗಾರವಾಡಾದ 9 ಅಡಿ ಎತ್ತರದ ಗಣೇಶ, ವಿವೇಕಾನಂದ ನಗರದ ಶ್ರೀಗಜಾನನ ಮಂಡಳಿಯ ವತಿಯಿಂದ 12 ಅಡಿ ಎತ್ತರದ, ಮೆಹಬೂಬ್‌ನಗರದಿಂದ ತರಿಸಿದ, ಯಾದಗಿರಿ ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಬೃಹದಾಕಾರದ ಗಣೇಶ ವಿಗ್ರಹ ತರಿಸಿ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಯಾದಗಿರಿ ನಗರದಲ್ಲಿ ಏನಿಲ್ಲವೆಂದರೂ, 50 ಕ್ಕೂ ಸ್ಥಳಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ಕೆಲವೆಡೆ 5, 11 ಹಾಗೂ 21 ದಿನಗಳವರೆಗೆ ವಿಸರ್ಜನೆ ಕಾರ್ಯ ನಡೆಯಲಿದೆ.

------

8ವೈಡಿಆರ್‌10ಎ : ಯಾದಗಿರಿಯಲ್ಲಿ ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳದ ಸಹಯೋಗದಲ್ಲಿ ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆ ಸಮೀಪದ ಭವಾನಿ ದೇವಸ್ಥಾನದ ಆವರಣದಲ್ಲಿ 19 ಅಡಿ ಎತ್ತರದ, ಸುಮಾರು 2.50 ಲಕ್ಷ ರು.ಗಳ ವೆಚ್ಚದ, ಹೈದರಾಬಾದಿನಿಂದ ತರಿಸಿದ ಗಣೇಶ ವಿಗ್ರಹ.

-

8ವೈಡಿಆರ್‌11ಎ : ಯಾದಗಿರಿ ವಿವೇಕಾನಂದ ನಗರದ ಶ್ರೀಗಜಾನನ ಮಂಡಳಿಯ ವತಿಯಿಂದ 12 ಅಡಿ ಎತ್ತರದ, ಮೆಹಬೂಬ್‌ನಗರದಿಂದ ತರಿಸಿದ ವಿಗ್ರಹ.

-

8ವೈಡಿಆರ್‌12 : ಯಾದಗಿರಿ ಡಾ. ಅಂಬೇಡ್ಕರ್‌ ವೃತ್ತದ ಮರಿಯಮ್ಮನ ಗುಡಿ ಸಮೀಪದ ಶ್ರೀ ಗಜಾನನ ತರುಣ ಸಂಘದವರು ತೆಲಂಗಾಣದ ಮಕ್ತಾಲ್‌ನಿಂದ ತರಿಸಿರುವ 8 ಅಡಿ ಎತ್ತರದ ಗಣೇಶ ವಿಗ್ರಹ.

-

8ವೈಡಿಆರ್‌13 : ಯಾದಗಿರಿಯ ಕೋಟಗಾರವಾಡಾದಲ್ಲಿ ಶಹಾಪುರದಿಂದ ತರಿಸಲಾಗಿ 9 ಅಡಿ ಎತ್ತರ ಗಣೇಶ,

-

8ವೈಡಿಆರ್‌14 : ಯಾದಗಿರಿಯ ಮೈಲಾಪುರ ಅಗಸಿಯಲ್ಲಿ ಗೌರಿ ಗಣೇಶ ತರುಣ ಸಂಘದ 5.5 ಅಡಿ ಎತ್ತರದ ಸೊಲ್ಲಾಪುರದ ಗಣೇಶ.

-

8ವೈಡಿಆರ್‌15 : ಯಾದಗಿರಿ ನಗರದ ಗೋಗಿ ಮೊಹಲ್ಲಾದ ಶ್ರೀ ಸಿದ್ಧಿ ವಿನಾಯಕ ಸಂಘದ 7 ಅಡಿ ಎತ್ತರದ ಗಣೇಶನನ್ನು ಮಹಾರಾಷ್ಟ್ರದ ಈಚಜಕರಂಜಿಯಿಂದ ತರಿಸಲಾಗಿದೆ.

-

8ವೈಡಿಆರ್‌16 : ಯಾದಗಿರಿಯ ಮೈಲಾಪುರದ ಅಗಸಿಯಲ್ಲಿ ಶ್ರೀಗಜಾನನ ಆರ್ಯ ಈಡಿಗರ ಸಂಘದ 8 ಅಡಿ ಎತ್ತರದ, 40 ಸಾವಿರ ರು.ಗಳ ವೆಚ್ಚದ ಸೊಲ್ಲಾಪುರದಿಂದ ತರಿಸಿಕೊಂಡ ಗಣೇಶ ವಿಗ್ರಹ.

-

8ವೈಡಿಆರ್‌17 : ಯಾದಗಿರಿ ನಗರದ ಶಹಾಪುರಪೇಟೆಯಲ್ಲಿನ ಶರಣ ನಗರದಲ್ಲಿ 13 ಅಡಿ ಎತ್ತರದ 57 ಸಾವಿರ ರು.ಗಳ ವೆಚ್ಚದ ಗಣಪನ ವಿಗ್ರಹ ಜನಾಕರ್ಷಣೆಗೆ ಕಾರಣವಾಗಿದೆ. ಸರ್ಕಾರ್‌ ಮಿತ್ರ ಮಂಡಳಿ ಇದ ಆಯೋಜಿಸಿದ್ದು, ಮೆಹಬೂಬ್‌ನಗರದಿಂದ ಇದ ತರಿಸಲಾಗಿದೆ.

-

8ವೈಡಿಆರ್‌18 : ಯಾದಗಿರಿ ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಬೃಹದಾಕಾರದ ಗಣೇಶ ವಿಗ್ರಹ ತರಿಸಿ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.

-

8ವೈಡಿಆರ್19 : ಯಾದಗಿರಿ ನಗರದ ಸ್ಟೇಷನ್‌ ಬಜಾರ್‌ ಹತ್ತಿರದ ಶಿವಾಜಿ ನಗರದ ಅಂಭಾ ಭವಾನಿ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯ ಗಣೇಶ ಪ್ರತಿಷ್ಠಾಪಿಸಲಾಗಿದೆ.

------