ಯಡವನಾಡು: ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಭೂಮಿಪೂಜೆ

| Published : Jan 17 2025, 12:47 AM IST

ಸಾರಾಂಶ

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ರು. ೪೦ ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ರು. ೪೦ ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಚುನಾವಣೆ ಸಂದರ್ಭ ೨೦೨೧ರಲ್ಲಿ ಮುಂಗಾರು ಮಳೆಯ ಸಂದರ್ಭ ಕುಸಿದಿದ್ದ ಸೇತುವೆ ಮರು ನಿರ್ಮಾಣ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ಇಂದು ಕೆಆರ್‌ಡಿಎಲ್ ಇಲಾಖೆ ಮುಖಾಂತರ ಗ್ರಾಮದಿಂದ ಸೋಮವಾರಪೇಟೆಯಿಂದ ಕುಶಾಲನಗರದ ಸಂಪರ್ಕ ರಸ್ತೆಗೆ ನೂತನ ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ ಭೂಮಿ ಪೂಜೆ ನೆರವೇರಿಸಲಾಗಿದೆ. ಸೇತುವೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವ ಮೂಲಕ ದೀರ್ಘ ಬಾಳಿಕೆಯೊಂದಿಗೆ ಜನರ ಸೇವೆಗೆ ಸಿಗುವಂತೆ ಗುತ್ತಿಗೆದಾರರು ಹಾಗೂ ಅಭಿಯಂತರರು ನಿಗಾ ವಹಿಸಬೇಕು. ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಅಕ್ಕಪಕ್ಕದ ಜಾಗದ ಮಾಲೀಕರು ಸಹಕರಿಸಬೇಕೆಂದರು.

ಭೂಮಿಪೂಜೆ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಮತ್ತು ಸದಸ್ಯರು, ಗ್ರಾಮದ ಅಧ್ಯಕ್ಷ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ವಲಯಾಧ್ಯಕ್ಷ ಕೆ.ಎಲ್. ಹೊನ್ನಪ್ಪ, ಪ್ರಮುಖರಾದ ರಮೇಶ್, ಮಚ್ಚಂಡ ಅಶೋಕ್, ಕೆ.ಪಿ. ದಿನೇಶ್, ಎಸ್.ಎನ್. ಯೋಗೇಶ್, ಸಬಿತಾ ಚೆನ್ನಕೇಶವ, ವಿಶ್ವನಾಥ ರಾಜೇ ಅರಸ್ ಭುಜಂಗ, ಜಯಪ್ರಕಾಶ್, ಅಭಿಯಂತರ ಶರತ್ ಇದ್ದರು.

.............

೧೬ಎಸ್‌ಪಿಟಿ೦೧: ಯಡವನಾಡು ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಗುರುವಾರ ಭೂಮಿ ಪೂಜೆ ನೆರವೇರಿಸಿದರು.